ಕಾರ್ಯದರ್ಶಿ ಶ್ರೀನಾಥಮೂರ್ತಿ ಮಾತನಾಡಿ, ಉದ್ಯೋಗ ಹುಡುಕುತ್ತಿದ್ದವರೂ ವಿದ್ಯಾರ್ಥಿ ಉದ್ಯೋಗ ಮಿತ್ರ ನೆರವು ಪಡೆಯುವುದು ಉಪಯುಕ್ತ. ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಈ ಸಂಚಿಕೆ ಜ್ಞಾನ ಕಣಜವಾಗಿದೆ ಎಂದು ಹೇಳಿದರು. ಪ್ರತಿ ದಿನ ಮಕ್ಕಳ ಸಂಗಾತಿಯಾಗಿ ಬರುತ್ತಿರುವ ಪತ್ರಿಕೆಯನ್ನು ಪ್ರತಿಯೊಬ್ಬರೂ ಓದಬೇಕು ಎಂದು ತಿಳಿಸಿದರು. ಪ್ರಸ್ತುತ ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಬಿದ್ದಿರುವುದರಿಂದ ಸಾಕಷ್ಟು ಅನಾನುಕೂಲಕ್ಕೆ ಒಳಗಾಗುತ್ತಿದ್ದಾರೆ. ಇದರ ಬದಲಿಗೆ ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳುವುದು ಅವಶ್ಯ ಎಂದು ಕಿವಿಮಾತು ಹೇಳಿದರು. ಪ್ರತಿದಿನ ಪ್ರಚಲಿತ ವಿದ್ಯಮಾನಗಳನ್ನು ಹೊತ್ತುತರುವ ವಿಜಯವಾಣಿ ದಿನಪತ್ರಿಕೆ ಇದರ ಜತೆಯಲ್ಲಿಯೇ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಉದ್ಯೋಗದ ದೃಷ್ಟಿಯಿಂದ ಪರಿಣಿತರಿಂದ ಸಿದ್ದಪಡಿಸಿಸುವ ವಿದ್ಯಾರ್ಥಿಮಿತ್ರ ಸಂಚಿಕೆಯನ್ನು ಹೊರತರುತ್ತಿದೆ ಇದು ವಿದ್ಯಾರ್ಥಿಗಳಿಗೆ ಸಾಕಷ್ಟು ಉಪಯುಕ್ತವಾಗಿದೆ ಎಂದು ತಿಳಿಸಿದರು.