ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೂಮಿ ಹಸ್ತಾಂತರ

ವಿಜಯಪುರ ಹೋಬಳಿ ಕೊಂಡೇನಹಳ್ಳಿ ಸ.ನಂ.1 ರಲ್ಲಿ 3.ಎಕರೆ 30 ಗುಂಟೆ ಭೂಮಿಯನ್ನು ಘನತ್ಯಾಜ್ಯ ವಿಲೇವಾರಿ ಘಟಕ ನಿಮಾರ್ಣಕ್ಕಾಗಿ ಉಪತಹಸೀಲ್ದಾರ್​ ಮೋಹನ್​ ಕುಮಾರ್​ ಅವರು ಪುರಸಭೆ ಮುಖ್ಯಾಧಿಕಾರಿ ವೈ.ಎನ್​.ಸತ್ಯನಾರಾಯಣಗೆ ಹಸ್ತಾಂತರಿಸಿದರು.
ವಿಜಯಪುರ ಹೋಬಳಿ ಕೊಂಡೇನಹಳ್ಳಿ ಸ.ನಂ.1 ರಲ್ಲಿ 3.ಎಕರೆ 30 ಗುಂಟೆ ಭೂಮಿಯನ್ನು ಘನತ್ಯಾಜ್ಯ ವಿಲೇವಾರಿ ಘಟಕ ನಿಮಾರ್ಣಕ್ಕಾಗಿ ಉಪತಹಸೀಲ್ದಾರ್​ ಮೋಹನ್​ ಕುಮಾರ್​ ಅವರು ಪುರಸಭೆ ಮುಖ್ಯಾಧಿಕಾರಿ ವೈ.ಎನ್​.ಸತ್ಯನಾರಾಯಣಗೆ ಹಸ್ತಾಂತರಿಸಿದರು.
Published on: 

ವಿಜಯಪುರ : ಕಂದಾಯ ಇಲಾಖೆ ಅಧಿಕಾರಿಗಳು ಹೋಬಳಿಯ, ಕೊಂಡೇನಹಳ್ಳಿ ಸ.ನಂ.1ರಲ್ಲಿ 3 ಎಕರೆ 30 ಗುಂಟೆ ಭೂಮಿಯನ್ನು ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಪುರಸಭೆಗೆ ಹಸ್ತಾಂತರಿಸಿದರು.

ಈ ವೇಳೆ ಮಾತನಾಡಿದ ಉಪತಹಸೀಲ್ದಾರ್​ ಮೋಹನ್​ ಕುಮಾರ್​, ಜಿಲ್ಲಾಧಿಕಾರಿಗಳ ಆದೇಶದಂತೆ 3 ಎಕರೆ 30 ಗುಂಟೆ ಭೂಮಿಯನ್ನು ವಿಜಯಪುರ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಮಂಜೂರು ಮಾಡಿ, ನಕ್ಷೆ ಹಾಗೂ ಪಹಣಿ ತಯಾರಿಸಿ, ಪುರಸಭೆ ಮುಖ್ಯಾಧಿಕಾರಿ ವೈ.ಎನ್​.ಸತ್ಯನಾರಾಯಣ ಅವರಿಗೆ ಹಸ್ತಾಂತರಿಸಲಾಗಿದೆ. ಕಸ ವಿಲೇವಾರಿ ಘಟಕದಿಂದ ಸುತ್ತಮುತ್ತಲಿನ ರೈತರು ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸುವಂತೆ ಸಲಹೆ ನೀಡಲಾಗಿದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ವೈ.ಎನ್​.ಸತ್ಯನಾರಾಯಣ ಮಾತನಾಡಿ, ಪಟ್ಟಣದ 23 ವಾರ್ಡ್​ಗಳಲ್ಲಿನ ಘನತ್ಯಾಜ್ಯವನ್ನು ಇಲ್ಲಿ ಕಾಂಪೋಸ್ಟ್​ ಗೊಬ್ಬರವನ್ನಾಗಿ ತಯಾರಿಸಲು ಘಟಕ ಸ್ಥಾಪನೆಯಾಗಲಿದ್ದು, ಈ ಘಟಕದಿಂದ ಯಾರಿಗೂ ಸಮಸ್ಯೆಯಾಗುವುದಿಲ್ಲ. ಎಲ್ಲ ಪ್ರಕ್ರಿಯೆಗಳು ವೈಜ್ಞಾನಿಕವಾಗಿ ನಡೆಯಲಿರುವುದರಿಂದ ವಾಸನೆ ಮುಕ್ತವಾಗಿ ಗೊಬ್ಬರ ತಯಾರಿಕೆಯಾಗಲಿದೆ. ಈ ಗೊಬ್ಬರವನ್ನು ರೈತರು, ತಮ್ಮ ತೋಟಗಳಿಗೆ ಬಳಕೆ ಮಾಡಿಕೊಳ್ಳಬಹುದು ಎಂದು ಹೇಳಿದರು. ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಹೊನ್ನೇಶ್​, ಗ್ರಾಮ ಆಡಳಿತಾಧಿಕಾರಿ ಜೀವನ್​ ಕುಮಾರ್​, ಪುರಸಭೆ ಪರಿಸರ ಇಂಜಿನಿಯರ್​ ಶೇಖರ್​ ರೆಡ್ಡಿ, ಆರೋಗ್ಯ ನಿರೀಕ್ಷಕಿ ಲಾವಣ್ಯಾ, ಭೂಮಾಪಕರು ಇದ್ದರು.