ಕಾಂಗ್ರೆಸ್ ಬೆಂಬಲಿತರಿಗೆ ಮೇಲುಗೈ

town bank election
town bank election
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಹೊಸಕೋಟೆ ದಿ ಟೌನ್ ಕೋ ಆಪರೇಟಿವ್ ಬ್ಯಾಂಕ್‌ನ ಆಡಳಿತ ಮಂಡಳಿ ಚುನಾವಣೆಯಲ್ಲಿ ಜಯಶೀಲರಾದ ಅಭ್ಯರ್ಥಿಗಳಿಗೆ ಮಂಗಳವಾರ ಚುನಾವಣಾಧಿಕಾರಿ ಅಧಿಕೃತ ಆದೇಶ ಹೊರಡಿಸಿ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಿದರು.
ೆ.9 ರಂದು ಚುನಾವಣೆ ನಡೆದಿದ್ದು ಅಂದೇ ಲಿತಾಂಶ ಪ್ರಕಟವಾಗಬೇಕಿತ್ತು. ಆದರೆ ಮತ ಎಣಿಕೆ ಸಂದರ್ಭದಲ್ಲೇ ಕೆಲ ಅಭ್ಯರ್ಥಿಗಳು ಚುನಾವಣೆ ಪಟ್ಟಿಯಲ್ಲಿ ಹೆಚ್ಚುವರಿ ಮತಗಳನ್ನು ಸೇರಿಸಲಾಗಿದೆ ಎಂದು ಕೋರ್ಟ್ ಮೊರೆ ಹೋದ ಕಾರಣ ಮತ ಏಣಿಕೆ ಪೂರ್ಣಗೊಳಿಸದೆ ಎಲ್ಲ ಮತಪತ್ರಗಳನ್ನು ಹೈ ಕೋರ್ಟ್‌ನ ಸುಪರ್ಧಿಗೆ ಒಪ್ಪಿಸಲಾಗಿತ್ತು. ವಿಜೇತರ ಪಟ್ಟಿ ತಡೆಹಿಡಿಯಲಾಗಿತ್ತು. ಈ ಬಗ್ಗೆ ವಿಚಾರಣೆ ನೆಡೆಸಿದ ಹೈಕೋರ್ಟ್ ನ.24 ರಂದು ಹೆಚ್ಚುವರಿ ಮತದಾರರ ಸೇರ್ಪಡೆ ಅನೂರ್ಜಿತಗೊಳಿಸಿ ಲಿತಾಂಶ ಪ್ರಕಟಿಸಲು ಆದೇಶ ನೀಡಿತ್ತು.
ಕಾಂಗ್ರೆಸ್-8, ಬಿಜೆಪಿ-5:
ಹೊಸಕೋಟೆಯ ದಿ ಟೌನ್ ಕೋ ಆಪರೇಟಿವ್ ಬ್ಯಾಂಕ್‌ನ ಆಡಳಿತ ಮಂಡಳಿಯಲ್ಲಿ 2025 ರಿಂದ 2030 ರ ವರೆಗೆ ಆಡಳಿತ ಮಂಡಳಿಯ 13 ಸ್ಥಾನಕ್ಕೆ ನೆಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 8 ಅಭ್ಯರ್ಥಿಗಳು ಹಾಗೂ ಬಿಜೆಪಿ ಬೆಂಬಲಿತ 5 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಕೈ ಮೇಲಾಗಿದೆ.
ಗೆದ್ದ ಅಭ್ಯರ್ಥಿಗಳ ಪಟ್ಟಿ: ಸಾಮಾನ್ಯ ವರ್ಗದಿಂದ ಜಯಗಳಿಸಿದ ಅಭ್ಯರ್ಥಿಗಳಾದ ಮಂಜುನಾಥ್ ಎಸ್ ಬಲ್ಪ್, ಎ ಅಪ್ಸರ್, ಕಿರಣ್ ಕುಮಾರ್ ಕೆ.ಕಿರಣ್, ಕೆ.ನಾಗರಾಜ್, ಬಿ.ಅಕ್ಬರ್ ಪಾಷ, ವಿಷ್ಣು.
ಪರಿಶಿಷ್ಟ ಜಾತಿಯಿಂದ ಎನ್.ನಾಗರಾಜ್ ಪರಿಶಿಷ್ಟ ಪಂಗಡದಿಂದ ಎಸ್.ಮುರಳಿ ಹಿಂದುಳಿದ ವರ್ಗ ಎ ಯಿಂದ ಬಾಲಚಂದ್ರನ್, ಹಿಂದುಳಿದ ವರ್ಗ ಬಿ ಯಿಂದ ಎಚ್.ಎಸ್ ಗೋಪಾಲ, ಮಹಿಳಾ ಮೀಸಲಾತಿ ವೆಂಕಟಲಕ್ಷ್ಮೀ ಹಾಗೂ ಎಂ.ಸರೋಜಮ್ಮ ಜಯಗಳಿಸಿದ್ದಾರೆ,
ಇನ್ನುಂದೆ ಜಂಟಿ ಸಾಲ:
ಶಾಸಕ ಶರತ್ ಬಚ್ಚೇಗೌಡ ನಾಯಕತ್ವ ಹಾಗೂ ಮಾರ್ಗದರ್ಶನದಲ್ಲಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಮೇಲುಗೈ ಸಾಧಿಸಿದ್ದೇವೆ ಎಂದು ಟೌನ್ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಬೈರೇಗೌಡ ಹೇಳಿದರು. ಈ ಹಿಂದೆ ಇದ್ದ ಎಲ್ಲ ಯೋಜನೆಗಳನ್ನು ನಾವೇ ಜಾರಿ ತಂದಿರುವುದು, ಈ ಬಾರಿಯಿಂದ ಜಂಟಿ ಸಾಲ ನೀಡಲು ಪ್ರಯತ್ನ ಮಾಡಲಾಗುವುದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net