

ದೊಡ್ಡಬಳ್ಳಾಪುರ : ತಾಲೂಕಿನ ಹುಸ್ಕೂರು ಗೇಟ್ ಬಳಿ 15 ಎಕರೆ ವಿಸ್ತೀರ್ಣದಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಬಮುಲ್ನಿಂದ ಟೆಟ್ರಾ ಪ್ಯಾಕ್ ತಯಾರಿಕಾ ಟಕಕ್ಕೆ ಅಧ್ಯಕ್ಷ ಡಿ.ಕೆ.ಸುರೇಶ್ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ನಿರ್ದೇಶಕ ಬಿ.ಸಿ.ಆನಂದ್ ತಿಳಿಸಿದರು.
ತಾಲೂಕಿನ ಕೊನೇನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಟೆಟ್ರಾಪ್ಯಾಕ್ ಟಕದ ಉದ್ಯೋಗದ ವಿಚಾರದಲ್ಲಿ ತಾಲೂಕಿನ ಯುವಜನತೆಗೆ ಆದ್ಯತೆ ನೀಡಲಾಗುವುದು. ಟಕಕ್ಕಾಗಿಯೇ ಬಮುಲ್ 200 ಕೋಟಿ ರೂ. ಅನುದಾನ ಮೀಸಲಿಟ್ಟಿದೆ ಎಂದರು.
ಹಾಲು ಉತ್ಪಾದಕರ ಹೋರಾಟಕ್ಕೆ ಸರ್ಕಾರದಿಂದ ಸ್ಪಂದಿಸುವ ಭರವಸೆ ಸಿಕ್ಕಿದೆ. ಒಕ್ಕೂಟದ ಬೆಲೆ ಏರಿಕೆ ಬೇಡಿಕೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಕರಾತ್ಮಕವಾಗಿ ಸ್ಪಂದಿಸಿದ್ದು, ರೈತರಿಗೆ ನೀಡುವ ಹಾಲಿನ ದರ ಕನಿಷ್ಠ 8 ರೂ. ಏರಿಕೆಯಾಗುವ ವಿಶ್ವಾಸವಿದೆ. ಈ ಮೂಲಕ ರೈತರ ನೆರವಿಗೆ ಸರ್ಕಾರ ಧಾವಿಸುವ ನಿರೀೆ ಇದೆ. ಹಾಲಿನ ಬೆಲೆ ಏರಿಕೆಯಾದರೆ ಗ್ರಾಹಕರ ಜತೆಗೆ ಪ್ರತಿಪಕ್ಷಗಳು ಸಹ ಇದಕ್ಕೆ ಸಹಕಾರ ನೀಡಬೇಕು. ಬೆಲೆ ಏರಿಕೆ ಹಣ ನೇರವಾಗಿ ರೈತರಿಗೆ ತಲುಪುವ ಮೂಲಕ ರೈತರ ಬದುಕು ಹಸನಾಗಲಿದೆ. ಬರದಿಂದ ಕಂಗೆಟ್ಟಿರುವ ಅನ್ನದಾತರಿಗೆ ಕನಿಷ್ಠಮಟ್ಟದಲ್ಲಾದರೂ ಸಹಾಯವಾಗಲಿದೆ ಎಂದರು.
ರೈತರಿಗೆ ಸಹಾಯ ಮಾಡಲು ನಾನು ಸಿದ್ಧನಿದ್ದೇನೆ. ಸತತ ಹೋರಾಟದಿಂದ ತಾಲೂಕನ್ನು ಬರದ ಪಟ್ಟಿಗೆ ಸೇರ್ಪಡೆ ಮಾಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದೇನೆ.
> ಧೀರಜ್ ಮುನಿರಾಜು, ಶಾಸಕ