ನಾವು ಮಾಡುವ ಕೆಲಸಗಳು, ನಡೆದುಕೊಳ್ಳುವ ರೀತಿ ಬದುಕುವ ಬದುಕು ಇವೆಲ್ಲವೂ ಹುಟ್ಟಿನಿಂದಲೇ ಬರುವುದಿಲ್ಲ. ಇವುಗಳ ಹಿಂದೆ ಅದೃಶ್ಯ ಶಕ್ತಿ ಕೆಲಸ ಮಾಡುತ್ತದೆ, ನಮ್ಮನ್ನು ತಿದ್ದೀತಿಡಿ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುವ ಆ ಅದೃಶ್ಯ ಶಕ್ತಿಯೇ ಗುರುವಾಗಿರುತ್ತಾನೆ ಎಂದು ಜ್ಞಾನಧಾಮ ಸಮೂಹ ಸಂಸ್ಥೆಯ ಶಿವಕುಮಾರ್ ಹೇಳಿದರು. ಗುರುವಿಲ್ಲದೆ ಯಾವುದೇ ಸಾಧನೆ ಸಾಧ್ಯವಾಗುವುದಿಲ್ಲ. ಸಣ್ಣ ಕಿಡಿಯನ್ನು ಜ್ವಾಲಾಮುಖಿಯನ್ನಾಗಿಸುವ ಶಕ್ತಿ ಗುರುವಿಗೆ ಇರುತ್ತದೆ, ಅಂಧಾರಕಾರವನ್ನು ನಾಶ ಮಾಡುವ ಶಿಕ್ಷಕರೇ ಗುರುಗಳಾಗಿರುತ್ತಾರೆ ಎಂದು ಹೇಳಿದರು. ಗುರುವಿಲ್ಲದೆ ಯಾವುದೇ ಸಾಮ್ರಾಜ್ಯವನ್ನು ನಾವು ಇತಿಹಾಸದಲ್ಲಿ ಕಾಣಲು ಸಾಧ್ಯವಿಲ್ಲ. ಛತ್ರಪತಿ ಶಿವಾಜಿ, ಚಂದ್ರಗುಪ್ತ ಮೌರ್ಯ ಮತ್ತಿತರ ಸಾಮ್ರಾಟರ ಹಿಂದೆ ಪ್ರಬಲ ಗುರುಗಳಿದ್ದರು ಎಂಬುದನ್ನು ಸ್ಮರಿಸಬೇಕಿದೆ ಎಂದು ಹೇಳಿದರು. ವಿದ್ಯಾರ್ಥಿಗಳನ್ನು ಕೇವಲ ಪಠ್ಯಕ್ಕೆ ಸೀಮಿತಗೊಳಿಸಬಾರದು, ಅದರೊಂದಿಗೆ ಜ್ಞಾನದ ಭಂಡಾರವನ್ನು ತುಂಬಬೇಕು. ಕಲ್ಲುಗಳನ್ನು ಹೇಗೆ ಶಿಲೆಯಾಗಿ ರೂಪಿಸಬಹುದೋ ಹಾಗೆಯೇ ವಿದ್ಯಾರ್ಥಿಗಳಲ್ಲಿ ಸಂಸತಿ, ಸಂಸ್ಕಾರವನ್ನು ತುಂಬಿ ಉತ್ತಮ ಪ್ರಜೆಯನ್ನಾಗಿ ರೂಪಿಸುವ ಶಕ್ತಿ ಗುರುಗಳಿಗಿದೆ ಎಂದು ಹೇಳಿದರು.