ಬಿಸಿ ಗಾಳಿ ಸಂದರ್ಭದಲ್ಲಿ ದೇಹದಲ್ಲಿ ನೀರಿನ ಅಂಶವು ಕಡಿಮೆಯಾದಲ್ಲಿ ಸೂರ್ಯಘಾತ ಉಂಟಾಗುವ (ಸನ್‌ಸ್ಟ್ರೋಕ್ ) ಸಾಧ್ಯತೆ ಅಧಿಕವಾಗಿರುತ್ತದೆ. ಮೂರ್ಚೆ ಹೋಗುವುದು, ಸ್ನಾಯು ಸೆಳೆತ, ರೋಗಗ್ರಸ್ತವಾಗುವಿಕೆ, ತಲೆನೋವು ಹೆಚ್ಚಾಗಿ ಬೆವರುವುದು, ಬಲಹೀನತೆ, ತಲೆ ತಿರುಗುವಿಕೆ, ಗೊಂದಲಮಯ ಈ ರೀತಿಯಲ್ಲಿ ವರ್ತಿಸುವುದು. ತ್ವರಿತ ಉಸಿರಾಟ, ಹೃದಯ ಬಡಿತ, ವಾಕರಿಕೆ, ವಾಂತಿ, ಎದ್ದೇಳಲು ಕಷ್ಟಪಡುವುದು, ದೇಹದ ಉಷ್ಣತೆ ಏರುವುದು ಮತ್ತಿತರ ಲಕ್ಷಣಗಳು ಕಾಣಿಸಿಕೊಂಡು ನಂತರದಲ್ಲಿ ಸನ್‌ಸ್ಟ್ರೋಕ್ ಆಗುವ ಅಪಾಯವಿರುತ್ತದೆ. ಇದರಲ್ಲಿ ಯಾವುದೇ ಲಕ್ಷಣ ಕಂಡುಬಂದರೂ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಇಂಥ ಸಂದರ್ಭದಲ್ಲಿ ಆತಂಕಗೊಳ್ಳದೆ ಅಂಬುಲೆನ್ಸ್ ಸಹಾಯ ಪಡೆದು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ಮಾಡುವುದು ಒಳಿತು ಎಂದು ಜಿಲ್ಲಾ ಅರೋಗ್ಯ ಇಲಾಖೆ ತಿಳಿಸಿದೆ.