ಪ್ರಕರಣ ಸಂಬಂಧ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ, ಪ್ರಕರಣ ಶಾಲೆಯಲ್ಲಿ ನಡೆದಿಲ್ಲ, ವಸತಿನಿಲಯದ ಕಟ್ಟಡದಲ್ಲಿ ನಡೆದಿರುವ ಮಾಹಿತಿ ಪಡೆಯಲಾಗಿದೆ. ಟಿಸಿ ಪಡೆಯುವ ವಿದ್ಯಾರ್ಥಿಗಳು ಮತ್ತೊಂದು ಶಾಲೆಯಲ್ಲಿ ದಾಖಲಾಗುವುದನ್ನು ಖಚಿತಪಡಿಸಿಕೊಳ್ಳಬೇಕು. ಬಳಿಕ ಅಲ್ಲಿಗೆ ಟಿಸಿ ವರ್ಗ ಮಾಡುವಂತೆ ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಮಕ್ಕಳು ಶಿಕ್ಷಣದಿಂದ ವಂಚಿತರಾಬಾರದು ಎಂದು ತಾಕೀತು ಮಾಡಲಾಗಿದೆ.