ನಿರೀಕ್ಷಿತ ಯೋಜನೆಗಳಿಗೆ ಎಳ್ಳುನೀರು

state budget
state budget
Published on
ಶಿವರಾಜ ಎಂ ಬೆಂಗಳೂರು ಗ್ರಾಮಾಂತರ
ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಜಿಲ್ಲೆಯ ಪಾಲಿಗೆ ನಿರಾಶಾಯದಾಯಕವಾಗಿದ್ದು ನಿರೀಕ್ಷಿತ ಯೋಜನೆಗಳಿಗೆ ಎಳ್ಳುನೀರು ಬಿಡಲಾಗಿದೆ. ಸಾಕಷ್ಟು ನಿರೀಕ್ಷೆಗಳಿಂದ ಎದುರು ನೋಡುತ್ತಿದ್ದ ಆಯವ್ಯಯದಲ್ಲಿ ಗ್ರಾಮಾಂತರ ಜಿಲ್ಲೆಯನ್ನು ಕಡೆಗಣಿಸಿರುವುದು ಸ್ಪಷ್ಟವಾಗಿದೆ. ಸಾರ್ವಜನಿಕ ವಲಯದಲ್ಲಿ ‘ಬೆಂಗಳೂರು ಉತ್ತರ ಎಂದು ಹೆಸರಿಟ್ಟರೆ ಸಾಕೆ? ಅಭಿವೃದ್ಧಿ ಬೇಡವೇ?’ ಎಂಬ ಪ್ರಶ್ನೆಯನ್ನು ಹುಟ್ಟುಹಾಕುವಂತೆ ಮಾಡಿದೆ.
ಕಾಂಗ್ರೆಸ್‌ನ ಪ್ರಭಾವಿ ಮಂತ್ರಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಕೆ.ಎಚ್.ಮುನಿಯಪ್ಪ ಸೇರಿ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಮೂವರು ಕಾಂಗ್ರೆಸ್ ಶಾಸಕರೇ ಇದ್ದರೂ ಜಿಲ್ಲೆಗೆ ನಿರೀಕ್ಷಿತ ಯೋಜನೆಗಳು ೋಷಣೆಯಾಗಿಲ್ಲ ಜತೆಗೆ ಹಳೆ ಯೋಜನೆಗಳಿಗೆ ಅನುದಾನವೂ ಸಿಕ್ಕಿಲ್ಲದಿರುವುದು ರಾಜ್ಯ ಸರ್ಕಾರ ಗ್ರಾಮಾಂತರ ಜಿಲ್ಲೆಯನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂಬುದು ವೇದ್ಯವಾಗುತ್ತಿದೆ.
ಜಿಲ್ಲೆಯ ನಾಲ್ಕೂ ತಾಲೂಕುಗಳು ರಾಜ್ಯ ರಾಜಧಾನಿ ಬೆಂಗಳೂರಿನ ಗಡಿ ಹಂಚಿಕೊಂಡಿದ್ದರೂ ರಾಜ್ಯ ಸರ್ಕಾರಕ್ಕೆ ಜಿಲ್ಲೆಯ ಅಭಿವೃದ್ಧಿ ಅಪಥ್ಯವೆನಿಸಿದಂತಿದೆ. ಹೊಸಕೋಟೆ, ನೆಲಮಂಗಲ ವ್ಯಾಪ್ತಿಯಲ್ಲಿ ದೊಡ್ಡಮಟ್ಟದ ಕೈಗಾರಿಕೆಗಳು ವಿಸ್ತಾರಗೊಳ್ಳುತ್ತಿದ್ದರೂ ನೀರಾವರಿ ಯೋಜನೆಗಳಿಗೆ ಮಹತ್ವ ನೀಡದಿರುವುದು, ಮೆಟ್ರೋ ವಿಸ್ತರಣೆ ಬಗ್ಗೆ ಗಮನ ನೀಡದಿರುವುದು ಕೈಗಾರಿಕಾ ಕ್ಷೇತ್ರದ ಬಗ್ಗೆ ಸರ್ಕಾರಕ್ಕೆ ಅಷ್ಟೇನು ಒಲವಿಲ್ಲ ಎಂಬಂತೆ ಗೋಚರಿಸುತ್ತಿದೆ. ಕೈಗಾರಿಕಾ ವಲಯಗಳ ಸ್ಥಾಪನೆಗೆ ಜಿಲ್ಲೆಯ ಲವತ್ತಾದ ಕೃಷಿ ಭೂಮಿಯ ಕಬಳಿಕೆಗೆ ತೋರುವ ಆಸಕ್ತಿ ರೈತಾಪಿ ಜನರ ಅಭಿವೃದ್ಧಿ ಕಡೆಗೆ ಏಕಿಲ್ಲ ಎಂಬುದು ಜನರ ಪ್ರಶ್ನೆಯಾಗಿದೆ. ಮೆಡಿಕಲ್ ಕಾಲೇಜು ಸ್ಥಾಪನೆಗೆ ಸಾಕಷ್ಟು ಒತ್ತಾಯವಿದ್ದರೆ ಪ್ಯಾರಾಮೆಡಿಕಲ್ ಕೋರ್ಸ್ ೋಷಣೆಯಾಗಿರುವುದು, ದೊಡ್ಡಬಳ್ಳಾಪುರಕ್ಕೆ ಎಚ್‌ಎನ್‌ವ್ಯಾಲಿ ನೀರು ಬೇಡೆಂಬ ವಿರೋಧದ ನಡುವೆ ಕೆರೆ ತುಂಬಿಸುವ ೋಷಣೆಯಾಗಿರುವುದು ಬೇಸರಕ್ಕೆ ಕಾರಣವಾಗಿದ್ದರೆ, ಸಣ್ಣಪುಟ್ಟ ಯೋಜನೆಗಳ ಮೂಲಕ ಜಿಲ್ಲೆಗೂ ಒಂದಷ್ಟು ಕೊಡಲಾಗಿದೆ ಎಂಬಂತೆ ಬಿಂಬಿಸುವ ಪ್ರಯತ್ನ ನಡೆದಿರುವುದು ಜಿಲ್ಲೆಯ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಮೆಟ್ರೋ ನಿರೀಕ್ಷೆ ಹುಸಿ:
ಮುಂದಿನ 2 ವರ್ಷಗಳಲ್ಲಿ ಮೆಟ್ರೋ 98.60 ಕಿ.ಮೀ ಹೆಚ್ಚುವರಿ ಮಾರ್ಗಗಳ ಕಾರ್ಯಾಚರಣೆ ಜಾಲವನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದು ಮೆಟ್ರೋ ಜಾಲವನ್ನು ದೇವನಹಳ್ಳಿಯವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಕಳೆದ ಬಾರಿಯ ಬಜೆಟ್‌ನಲ್ಲಿ ತಿಳಿಸಲಾಗಿತ್ತು. ಇದರೊಂದಿಗೆ ಹಲವು ವರ್ಷದಿಂದ ಹೊಸಕೋಟೆವರೆಗೆ ಮೆಟ್ರೋ ವಿಸ್ತರಣೆಗೆ ಒತ್ತಾಯ ಕೇಳಿಬರುತ್ತಿದೆ. ನೆಲಮಂಗಲಕ್ಕೂ ಮೆಟ್ರೋ ಬಂದೆ ಬಿಡಲಿದೆ ಎಂಬಂತ ಮಾತುಗಳು ಹರಿದಾಡುತ್ತಿದ್ದವು. ಬೆಂಗಳೂರು ಗಡಿ ಹಂಚಿಕೊಂಡಿರುವ ತಾಲೂಕುಗಳಿಗೆ ಮೆಟ್ರೋ ಸಂಪರ್ಕ ಅತ್ಯವಶ್ಯಕವಾಗಿದ್ದು ಈ ಬಾರಿಯ ಬಜೆಟ್‌ನಲ್ಲಿ ಇದಕ್ಕೆ ಒತ್ತು ನೀಡಲಾಗುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ.
ಸರ್ಕಾರಕ್ಕೆ ಕ್ರೀಡಾಸಕ್ತಿ ಇಲ್ಲ:
ದೊಡ್ಡಬಳ್ಳಾಪುರ ತಾಲೂಕು ಆದಿನಾರಾಯಣ ಹೊಸಹಳ್ಳಿಯಲ್ಲಿ 20 ಎಕರೆ ಜಾಗದಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ಹಸಿರು ನಿಶಾನೆ ದೊರೆತಿತ್ತು ಹಾಗೂ ಸೈಕ್ಲಿಂಗ್ ಕ್ರೀಡೆಗೆ ಉತ್ತೇಜನ ನೀಡಲು 5 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಸೈಕ್ಲಿಂಗ್ ವೆಲೋಡ್ರಮ್ ನಿರ್ಮಿಸುವ ಬಗ್ಗೆ ಕಳೆದ ಬಜೆಟ್‌ನಲ್ಲಿ ೋಷಣೆ ಮಾಡಲಾಗಿತ್ತು. ಆದರೆ ಈ ಬಾರಿ ಈ ಯೋಜನೆಗಳಿಗೆ ಯಾವುದೇ ಅನುದಾನ ಮೀಸಲಿಡದಿರುವುದು ಕ್ರೀಡಾಸಕ್ತರನ್ನು ಬಹಳ ನಿರಾಸೆಗೊಳಿಸಿದೆ.
ನೇಕಾರರ ಕೈಬಿಟ್ಟ ಸರ್ಕಾರ:
ರಾಜ್ಯದಲ್ಲಿಯೇ ಹೆಚ್ಚಿನ ನೇಕಾರರಿರುವ ಜಿಲ್ಲೆಗಳ ಪೈಕಿ ಗ್ರಾಮಾಂತರ ಮುಂಚೂಣಿಯಲ್ಲಿದೆ ಲಕ್ಷಾಂತರ ಮಂದಿ ನೇಕಾರಿಕೆಯಲ್ಲಿ ಬದುಕು ಕಂಡುಕೊಂಡಿದ್ದಾರೆ. ಈ ಬಾರಿ ಬಜೆಟ್‌ನಲ್ಲಿ ನೇಕಾರರ ಕಲ್ಯಾಣ ನಿಧಿ ರಚನೆ, ಸೀರೆಗೆ ಬ್ರಾಂಡಿಂಗ್ ಸೇರಿ ಸಾಕಷ್ಟು ಯೋಜನೆಗಳು ೋಷಣೆಯಾಗಲಿವೆ ಎಂಬ ನಿರೀಕ್ಷೆ ಇತ್ತು. ಗುರುತಿನ ಚೀಟಿ, ಸಹಾಯಧನ, ವಿದ್ಯುತ್ ಸೇರಿ ಕೆಲವೊಂದು ಬೇಡಿಕೆಗಳಿಗೆ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಇದರೊಂದಿಗೆ ಸೂರತ್ ಸೀರೆಗಳ ನಿಷೇಧದ ಬಗ್ಗೆ ಸರ್ಕಾರ ಸ್ಟಷ್ಟ ಆದೇಶ ಹೊರಡಿಸುವ ನಿರೀಕ್ಷೆಗೂ ತಣ್ಣೀರು ಎರಚಿದೆ.
ಎಸ್‌ಟಿಪಿಗೆ ಹಣವಿಲ್ಲವೇ?
ದೊಡ್ಡಬಳ್ಳಾಪುರ ಮಜರಾಹೊಸಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವ ವರ್ಷಗಳಿಂದ ಎಸ್‌ಟಿಪಿ ಸ್ಥಾಪಿಸುವಂತೆ ಸಾಕಷ್ಟು ಹೋರಾಟಗಳು ನಡೆದುಕೊಂಡು ಬಂದಿದೆ. ನಗರದ ಒಳಚರಂಡಿ ನೀರು ಹಾಗೂ ಕೈಗಾರಿಕೆಗಳ ರಾಸಾಯನಿಕಯುಕ್ತ ನೀರು ಕೆರೆಗಳಿಗೆ ಹರಿಯುತ್ತಿರುವುದರ ಬಗ್ಗೆ ಸರ್ಕಾರದ ಗಮನ ಸೆಳೆಯಲು ಸಾಕಷ್ಟು ಪ್ರತಿಭಟನೆಗಳು ನಡೆದಿವೆ. ಈ ಭಾಗದಲ್ಲಿ ಸುಮಾರು 50 ಕೋಟಿ ರೂ.ವೆಚ್ಚದಲ್ಲಿ ಎಸ್‌ಟಿಪಿ ಸ್ಥಾಪನೆಯ ಭರವಸೆಯೂ ದೊರಕಿತ್ತು ಆದರೆ ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪವೇ ಇಲ್ಲದಿರುವುದು ಹೋರಾಟಗಾರರ ಸಹನೆಯನ್ನು ಕೆಣಕಿದಂತಾಗಿದೆ.
ಸಂಸ್ಕೃರಿತ ನೀರೆ ಗತಿ:
ಜಿಲ್ಲೆಯಲ್ಲಿ ಯಾವುದೇ ನದಿ ಮೂಲಗಳಿಲ್ಲ ಕೇವಲ ಅರ್ಕಾವತಿ ಪಾತ್ರದ ಕೆರೆಗಳನ್ನು ಕಾಣಬಹುದಾಗಿದೆ. ಕೊಳವೆಬಾವಿಯಲ್ಲದೆ ನೀರಿಗೆ ಬೇರೆ ಆಶ್ರಯವಿಲ್ಲ ಆದ್ದರಿಂದ ಕುಡಿಯುವ ನೀರಿಗೆ ಸಾಕಷ್ಟು ಸಮಸ್ಯೆಗಳಿವೆ. ಬಯಲು ಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಬಹುನಿರೀಕ್ಷಿತ ಯೋಜನೆಗಳಲ್ಲಿ ಎತ್ತಿನಹೊಳೆ ಯೋಜನೆ ಅನುದಾನದ ಗಾತ್ರ ಹೆಚ್ಚಾಗುತ್ತಿದೆ. ಎತ್ತಿನಹೊಳೆ ಜಿಲ್ಲೆಯ ಜನರಲ್ಲಿ ಕನಸಾಗಿಯೇ ಉಳಿದಿದೆ, ಈ ಯೋಜನೆ ಯಾವಾಗ ಪುಣ್ಯಗೊಂಡು ಜಿಲ್ಲೆಗೆ ತಲುಪುತ್ತದೆ ಎಂದು ಕಾದು ಕುಳಿತ ಜನಕ್ಕೆ ಮತ್ತೊಮ್ಮೆ ನಿರಾಸೆ ಎದುರಾಗಿದೆ, ಜಿಲ್ಲೆಯಾದ್ಯಂತ ಕೆರೆಗಳು ಕೈಗಾರಿಕೆಗಳ ರಾಸಾಯನಿಕ ನೀರಿನಿಂದ ಮಲಿನವಾಗುತ್ತಿದೆ. ಈ ಭಾಗದಲ್ಲಿ ಶಾಶ್ವತ ನೀರಾವರಿ ಮೂಲಕ ಶುದ್ಧ ನೀರು ಬೇಕು ಎಂಬುದು ಜನರ ನಿರೀಕ್ಷೆಯಾದರೆ ಸಂಸ್ಕೃರಿತ ನೀರಿನ ಮೂಲಕ ಕೆರೆಗಳನ್ನು ತುಂಬಿಸುವುದು ಸರ್ಕಾರದ ಇಚ್ಚೆಯಾಗಿದೆ.
ಜಿಲ್ಲೆಗೆ ದೊರಕಿದ್ದು:
* ದೊಡ್ಡಬಳ್ಳಾಪುರದಲ್ಲಿ ಹೊಸದಾಗಿ ಸಂಚಾರ ಪೊಲೀಸ್ ಠಾಣೆ ಸ್ಥಾಪನೆ ಮಾಡಲಾಗುವುದು.
* ಹೊಸಕೋಟೆ ತಾಲೂಕಿನ ಸೂಲಿಬೆಲೆ ಮತ್ತು ನಂದಗುಡಿ ಹೋಬಳಿಗಳ 59 ಕೆರೆಗಳಿಗೆ ಎಚ್‌ಎನ್ ವ್ಯಾಲಿ ಯೋಜನೆಯಿಂದ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಏತ ನೀರಾವರಿ ಮೂಲಕ ತುಂಬಿಸುವ ಕಾಮಗಾರಿಯನ್ನು 140 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲಾಗುವುದು.
* ಬೆಂಗಳೂರು ನಗರದ ವೃಷಭಾವತಿ ವ್ಯಾಲಿಯಿಂದ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ 308 ಎಂಎಲ್‌ಡಿ ನೀರಿನಿಂದ 259 ಕೆರೆಗಳನ್ನು ತುಂಬಿಸುವ ಮೂಲ ಯೋಜನೆಯ ಪೈಕಿ ಗೋಪಾಲಪುರ ಕೆರೆಯಿಂದ ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ತಾಲೂಕಿನ 119 ಕೆರೆಗಳಿಗೆ ನೀರನ್ನು ತುಂಬಿಸುವ ಯೋಜನೆಯನ್ನು 650 ಕೋಟಿ ರೂ.ಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು.
* ದೊಡ್ಡಬಳ್ಳಾಪುರದಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ್ ಪ್ರಾರಂಭಿಸಲಾಗುವುದು.
ಬೆಂಗಳೂರು ನಗರದ ದಟ್ಟಣೆಯನ್ನು ಕಡಿಮೆ ಮಾಡಲು ನೆಲಮಂಗಲ-ತಾವರೆಕೆರೆ-ಬಿಡದಿ ಮಧ್ಯಂತರ ವರ್ತುಲ ರಸ್ತೆಯನ್ನು (ಬಿಎಂಆರ್‌ಡಿಎ ) ಹಾಗೂ ಸ್ಥಳೀಯ ಯೋಜನಾ ಪ್ರಾಧಿಕಾರಗಳ ಆರ್ಥಿಕ ಸಂಪನ್ಮೂಲಗಳಿಂದ ನಿರ್ಮಿಸಲಾಗುವುದು.
* ರಾಜ್ಯದ 2ನೇ ಮತ್ತು 3ನೇ ಹಂತದ ನಗರವಾದ ಹೊಸಕೋಟೆ ಉದ್ಯಮಿಗಳಿಗೆ ಐ್ಞ್ಚ್ಠಚಿಠಿಜಿಟ್ಞ ಸೌಲಭ್ಯಗಳನ್ನು ಒದಗಿಸಲು ಕಿಯೋನಿಕ್ಸ್ ಸಂಸ್ಥೆಯ ಮೂಲಕ ಪ್ಲಗ್-ಅಂಡ್-ಪ್ಲೇ ಸೌಲಭ್ಯದ ಝಲೀಪ್ ಲ್ಯಾಬ್‌ಗಳನ್ನು ಸ್ಥಾಪಿಸಲಾಗುವುದು.
* ಆದಿನಾರಾಯಣ ಹೊಸಹಳ್ಳಿಯಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ವಿಜ್ಞಾನನಗರವನ್ನು (ಸೈನ್ಸ್ ಸಿಟಿ) 233 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲು ವಿಸ್ತೃತ ಯೋಜನಾ ವರದಿಯನ್ನು ತಯಾರಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ಇದಕ್ಕೆ ಅನುಮೋದನೆ ದೊರೆತ ನಂತರ ವಾಸ್ತುವಿನ್ಯಾಸ ತಯಾರಿಸಲು ಕ್ರಮಕೈಗೊಳ್ಳಲಾಗುವುದು.
* ಹೊಸಕೋಟೆ ತಾಲೂಕಿನ 59 ಕೆರೆಗಳಿಗೆ ಸಂಸ್ಕರಿಸಿದ ನೀರಿನಿಂದ ಏತ ನೀರಾವರಿ ಕಲ್ಪಿಸಲಾಗುವುದು.
*ಸಣ್ಣ ನೀರಾವರಿ ಇಲಾಖೆ ವತಿಯಿಂದ ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಕೆರೆ ಅಭಿವೃದ್ಧಿ ಮಾಡಲಾಗುವುದು.
* ದೇವನಹಳ್ಳಿ ತಾಲೂಕಿನ ಹಲವು ಗ್ರಾಮಗಳಲ್ಲಿ ಚೆಕ್ ಡ್ಯಾಂ ನಿರ್ಮಾಣ ಹಾಗೂ ನೆಲಮಂಗಲ ತಾಲೂಕಿನ ಹಕ್ಕಿನಾಳು ಗ್ರಾಮದಲ್ಲಿ ಚೆಕ್ ಡ್ಯಾಂ ನಿರ್ಮಿಸಲಾಗುವುದು.
* ಕಾರ್ಮಿಕ ಇಲಾಖೆ ವತಿಯಿಂದ ಹಂತ-1ರಲ್ಲಿ ಹೊಸಕೋಟೆಯಲ್ಲಿ ಶ್ರಮಿಕ ವಸತಿ ಶಾಲೆ ಹಾಗೂ ಹಂತ-2ರಲ್ಲಿ ದೇವನಹಳ್ಳಿ (ಗುಂಡಂಗೆರೆ ಕ್ರಾಸ್-ತೂಬಗೇರಿ ಹೋಬಳಿ)ಯಲ್ಲಿ ಶ್ರಮಿಕ ವಸತಿ ಶಾಲೆ ಪ್ರಾರಂಭಿಸಲಾಗುವುದು.
ನಿರೀಕ್ಷಿತ ಬೇಡಿಕೆ ಕೈತಪ್ಪಿದ್ದು:
* ಗ್ರಾಮಾಂತರ ಜಿಲ್ಲೆಗೆ ಜಿಲ್ಲಾ ಕೇಂದ್ರ ೋಷಣೆಯಾಗಿಲ್ಲ
* ಜಿಲ್ಲಾ ಕ್ರೀಡಾಂಗಣಕ್ಕೆ ಅನುದಾನವಿಲ್ಲ
* ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ಹಣ ಮೀಸಲಿಟ್ಟಿಲ್ಲ
* ಮೆಟ್ರೋ ವಿಸ್ತರಣೆ ಬಗ್ಗೆ ಪ್ರಸ್ತಾಪವಿಲ್ಲ
* ಎಸ್‌ಟಿಪಿ ಘಟಕ ಸ್ಥಾಪನೆ ಬಗ್ಗೆ ಪ್ರಸ್ತಾಪವಿಲ್ಲ
* ದೊಡ್ಡಬಳ್ಳಾಪುರ ಕಸ ಘಟಕಗಳ ಸಮಸ್ಯೆಗಳಿಗೆ ಪರಿಹಾರವಿಲ್ಲ
* ತೆರೆಮರೆಗೆ ಸರಿದ ವಿಜಯಪುರ ತಾಲೂಕು ೋಷಣೆ
* ಶಾಶ್ವತ ನೀರಾವರಿ ಯೋಜನೆ ಬಗ್ಗೆ ಗಮನ ನೀಡಿಲ್ಲ
* ದೊಡ್ಡಬಳ್ಳಾಪುರ ನೇಕಾರರ ಕಡೆಗಣನೆ
*ಪ್ರಮುಖ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಹಣ ನೀಡಿಲ್ಲ
*ನಗರಸಭೆ, ಪುರಸಭೆ ಅಭಿವದ್ಧಿಗೆ ವಿಶೇಷ ಪ್ಯಾಕೇಜ್ ೋಷಣೆಯಿಲ್ಲ
*ಸೋಂಪುರ ಕೈಗಾರಿಕಾ ವಲಯಕ್ಕೆ ವಿಶೇಷ ಒತ್ತು ನೀಡುವ ನಿರೀಕ್ಷೆ ಹುಸಿಯಾಗಿದೆ
*ಹೊಸಕೋಟೆ ಭಾಗದಲ್ಲಿ ಕೈಗಾರಿಕಾ ಹಬ್ ಸ್ಥಾಪನೆ ಪ್ರಸ್ತಾಪವಿಲ್ಲ
*ಪ್ರಮುಖ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೆ ಹಣ ಮೀಸಲಿಟ್ಟಿಲ್ಲ
* ಮಧುರೆನಲ್ಲಿ ಭಗೀರಥ ಪೀಠ ಸ್ಥಾಪನೆ ನನೆಗುದಿಗೆ
*ನಾಲ್ಕೂ ತಾಲೂಕುಗಳನ್ನು ಸ್ಯಾಟಲೈಟ್ ಸಿಟಿಯನ್ನಾಗಿ ೋಷಿಸದಿರುವುದು
*ಟಿಪ್ಪುಕೋಟೆ ಅಭಿವೃದ್ಧಿ, ಕೆಂಪೇಗೌಡರ ಪೂರ್ವಿಕರು ನೆಲೆಸಿದ್ದ ಆವತಿ ಅಭಿವೃದ್ಧಿ ಕಡೆಗಣನೆ
* ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ಎಳ್ಳುನೀರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net