ಸಾಮಾನ್ಯವಾಗಿ ನಾಗರಹಾವು, ಕೇರೆ ಹಾವು ಮತ್ತಿತರ ಕೆಲವೊಂದು ಜಾತಿ ಹಾವುಗಳು ಬೇಸಿಗೆಯಲ್ಲಿ ಮೊಟ್ಟೆಗಳನ್ನಿಟ್ಟು ಮಳೆಗಾಲದ ಆರಂಭದಲ್ಲಿ ಮರಿ ಮಾಡುವ ಪ್ರಕ್ರಿಯೆ ನಡೆಯುತ್ತದೆ, ಇದಕ್ಕೆ 3 ಡಿಗ್ರಿ ಉಷ್ಣಾಂಶ ಹಾಗೂ ತೇವಾಂಶವಿರುವ ಜಾಗಗಳನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಕಸದ ಬ್ಲ್ಯಾಕ್‌ಸ್ಟಾಟ್‌ಗಳು ಸೂಕ್ತ ಆಯ್ಕೆಯಾಗಿರುವುದರಿಂದ ಇಂಥ ಜಾಗಗಳಲ್ಲಿ ಹೆಚ್ಚು ಹಾವಿನ ಮರಿಗಳು ಕಂಡುಬರುತ್ತವೆ. ಇದು ಪೌರಕಾರ್ಮಿಕರ ಜೀವಕ್ಕೆ ಕುತ್ತುತರಲಿದೆ, ಆದ್ದರಿಂದ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯಬಾರದು ಪೌರಕಾರ್ಮಿಕರ ಜೀವಕ್ಕೆ ಬೆಲೆ ಕೊಡಬೇಕು.