ಪರಿಷ್ಕರಣೆ ಪ್ರಕ್ರಿಯೆಯ ಸಮಯದಲ್ಲಿ, ಬೂತ್ ಮಟ್ಟದ ಅಧಿಕಾರಿಗಳು ಗಣತಿ ನಮೂನೆಗಳ ವಿತರಣೆ ಮತ್ತು ಸಂಗ್ರಹಣೆಗಾಗಿ ಮನೆ-ಮನೆಗೆ ಭೇಟಿ ನೀಡುವುದು ಕಡ್ಡಾಯಗೊಳ್ಳಿಸಲಾಗಿದೆ. ಎಲ್ಲ ಬಿಎಲ್‌ಒ ಗ್ರಾಮದ ಒಂದು ಜಾಗದಲ್ಲಿ ಕುಳಿತು ಅಥವಾ ಒಂದು ಭಾಗದಲ್ಲಿ ಅಂದರೆ ಧಾರ್ಮಿಕ ಸ್ಥಳಗಳಲ್ಲಿ, ಸುಮುದಾಯಭವನಗಳಲ್ಲಿ ಮತದಾರರನ್ನು ಕರಸಿಕೊಂಡು ಎಸ್‌ಐಆರ್ ಪ್ರಕ್ರಿಯೆ ನಡೆಸಿದರೆ ಅಂತವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದುಎಚ್ಚರಿಕೆ ನೀಡಿದರು.ಜಿಲ್ಲೆಯಲ್ಲಿ 2002 ರ ವೇಳೆಯಲ್ಲಿ 7,91165 ಮತದಾರರಿದ್ದರು. 2026 ಜು.3ರ ಅನ್ವಯ ಜಿಲ್ಲೆಯಲ್ಲಿ 9,12,913 ಮತದಾರರಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ ಶೇ 91 ಮತದಾರರ 2002 ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಮಾಡಲಾಗಿದೆ. ದೊಡ್ಡಬಳ್ಳಾಪುರದಲ್ಲಿ ಶೇ.91.99, ದೇವನಹಳ್ಳಿ ಶೇ.94.82, ಹೊಸಕೋಟೆಯಲ್ಲಿ ಶೇ.92.64, ನೆಲಮಂಗಲದಲ್ಲಿ ಶೇ.88.23 ಮ್ಯಾಪಿಂಗ್ ಪೂರ್ಣಗೊಂಡಿದೆ ಜಿಲ್ಲೆಯಲ್ಲಿ ವಲಸೆ ಕಾರ್ಮಿಕರು ಸೇರಿ ಎಲ್ಲ ಮತದಾರರ ಮಾಹಿತಿ ಸಂಗ್ರಹಿಸಲಾಗಿದೆ. ಒಂದೊಮ್ಮೆ ಅವರ ಲಭ್ಯತೆ ಇಲ್ಲದಿದ್ದಲ್ಲಿ ಬಾಡಿಗೆ ಮನೆಗಳ ಮಾಲೀಕರ ಮೂಲಕ ಅವರ ಮೊಬೈಲ್ ನಂಬರ್ ಪಡೆದು ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಎಂದು ತಿಳಿಸಿದರು.