ರಾಯಲ್ ಎನ್‌ಫಿಲ್ಡ್‌ನಿಂದ ಜಿಮ್‌ಖಾನಾ ಮೋಜು

ವಿಶೇಷ ಟ್ರ್ಯಾಕ್‌
ವಿಶೇಷ ಟ್ರ್ಯಾಕ್‌
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಆಟೋಮೊಬೈಲ್ ಕ್ಷೇತ್ರದಲ್ಲಿ ಅಗ್ರ ಸ್ಥಾನ ಗಳಿಸಿರುವ ರಾಯಲ್ ಎನ್‌ಫಿಲ್ಡ್ ಪ್ರಯಾಣದ ಮೋಜು ಅನುಭವಿಸಲು ಬೈಕ್ ಸವಾರರಿಗಾಗಿಯೇ ‘ಜಿಮ್ ಖಾನಾ’ಗೆ ಚಾಲನೆ ನೀಡಿತ್ತು. ಬೆಂಗಳೂರಿನ ಹೆಣ್ಣೂರು ಮುಖ್ಯರಸ್ತೆಯಲ್ಲಿ ಇದಕ್ಕಾಗಿಯೇ ವಿಶೇಷ ಟ್ರ್ಯಾಕ್‌ಗಳನ್ನು ರೂಪಿಸಲಾಗಿತ್ತು.
ಮಧ್ಯಮ ಗಾತ್ರದ ಮೋಟಾರ್ ಸೈಕಲ್ ವಲಯದಲ್ಲಿ ಜಾಗತಿಕ ಮುಂಚೂಣಿಯ ರಾಯಲ್ ಎನ್‌ಫಿಲ್ಡ್ ಬೆಂಗಳೂರಿನಲ್ಲಿ ವಾರಾಂತ್ಯದಲ್ಲಿ ಬೈಕ್‌ಗಳನ್ನು ಟೆಸ್ಟ್ ರೈಡ್ ಮಾಡುವ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಜಿಮ್‌ಖಾನಾ ಹೆಸರಿನಲ್ಲಿ ಆರಂಭಿಸಿದ್ದು ಯಾವುದೇ ಬಗೆಯ ದ್ವಿಚಕ್ರ ವಾಹನ ಹೊಂದಿದವರಿಗೂ ಸುಧಾರಿತ ರೈಡಿಂಗ್ ತರಬೇತಿ ಲಭ್ಯವಾಗುವಂತೆ ಕೌಶಲವೃದ್ಧಿಯ ಮಾಡ್ಯೂಲ್ ಗಳನ್ನು ವಿನ್ಯಾಸಗೊಳಿಸಿದೆ. ಪರಿಣಿತರ ತರಬೇತಿ, ಪ್ರಾಮಾಣಿಕೃತ ಸ್ಪರ್ಧೆಗಳನ್ನು ಹೊಂದಿರುವ ಜಿಮ್ ಖಾನಾ ದ್ವಿಚಕ್ರ ವಾಹನ ಸವಾರರ ಸವಾರಿಗೆ ಖುಷಿ ನೀಡುತ್ತಿದೆ.
2 ಗಂಟೆ ಸ್ಪರ್ಧೆ:
ಜಿಮ್‌ಖಾನಾದಲ್ಲಿ 2 ಗಂಟೆಯ ಸರ್ಟಿಫಿಕೇಷನ್ ಮಾಡ್ಯೂಲ್ಗಳನ್ನು ಹೊಂದಿದ್ದು ಜ.24ರಂದು ಭಾಗವಹಿಸುವವರಿಗೆ ತರಬೇತಿ ಜತೆಗೆ 6 ವಿವಿಧ ಟ್ರ್ಯಾಕ್‌ಗಳಲ್ಲಿ ಸ್ಪರ್ಧೆ ಆಯೋಜಿಸಿತ್ತು. 4 ವಿಭಿನ್ನ ಮೋಟಾರ್‌ಸೈಕಲ್ಗಳಲ್ಲಿ ಕೌಶಲದ ಸವಾಲುಗಳನ್ನು ಎದುರಿಸುವ ಅವಕಾಶ ನೀಡುತ್ತದೆ. ಜಿಮ್ ಖಾನಾ ಮೂಲಕ ರಾಯಲ್ ಎನ್‌ಫಿಲ್ಡ್ ರೈಡರ್‌ಗಳಲ್ಲಿ ವಿಶ್ವಾಸ, ನಿಯಂತ್ರಣ ನಿರ್ಮಿಸಿಕೊಳ್ಳಲು ಮತ್ತು ರಸ್ತೆಯ ಮೇಲೆ ಅವರದೇ ಉತ್ತಮ ರೈಡಿಂಗ್‌ಗೆ ವೇದಿಕೆ ಸೃಷ್ಟಿಸಿತ್ತು.
ರೈಡರ್‌ಗಳಿಗಾಗಿ ಅರೇನಾ:
ರೈಡರ್‌ಗಳಿಗಾಗಿಯೇ ಅರೇನಾಗಳನ್ನು ರೂಪುಗೊಳಿಸಲಾಗಿತ್ತು. ಪ್ರತಿಯೊಂದನ್ನೂ ವಿವಿಧ ಮಾದರಿಗಳಲ್ಲಿ ವಿವಿಧ ಬಗೆಯ ರೈಡಿಂಗ್ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿತ್ತು. ಡ್ರ್‌ಟಿ ಆ್ಯಂಡ್ ಡ್ರಾಗ್ ಗೆರಿಲ್ಲಾ ಮತ್ತು ಆಪ್-ರೋಡ್ ರೈಡ್‌ಗಳನ್ನು ಹಿಮಾಲಯನ್ 450ಯಲ್ಲಿ, ಹಸಲ್ ಅರೇನಾದಲ್ಲಿ ಹಂಟರ್ 350 ಮತ್ತು ಅರ್ಬನ್ ಎಂಡುರೊವನ್ನು ಸ್ಕ್ರಾಮ್ 440ರಲ್ಲಿ ನಿರ್ವಹಿಸಲಾಯಿತು. ಪ್ರತಿಯೊಂದರಲ್ಲೂ ಹಲವು ರೈಡಿಂಗ್ ಸನ್ನಿವೇಶಗಳು ನಿರ್ಮಾಣ ಮಾಡಿತ್ತು ಮತ್ತು ಮೋಟಾರ್ ಸೈಕಲ್ ಸವಾರು ವಿಶ್ವಾಸದಿಂದ ಹಾಗೂ ಸವಾರಿ ಮಾಡುವಂತ ಟ್ರ್ಯಾಕ್‌ಗಳು ಗಮನ ಸೆಳೆಯಿತು.
ಸವಾರಿಯ ಮೋಜು:
ವಿಶೇಷ ಆ್-ರೋಡ್‌ಮತ್ತು ಟಾರ್ಮಾಕ್ ಟ್ರ್ಯಾಕ್‌ಗಳಿಂದ ರಾಯಲ್ ಎನ್‌ಫಿಲ್ಡ್ ಜಿಮ್ ಖಾನಾ ಮೋಟಾರ್ ಸೈಕ್ಲಿಂಗ್‌ನ ಆಟದ ಮೈದಾನದಂತೆ ಕಂಡುಬಂತು. ಸ್ಪರ್ಧೆಗಳಲ್ಲಿ ಪಾಲ್ಗೊಂಡ ಸವಾರರು ಸವಾರಿಯ ಮೋಜು ಅನುಭವಿಸಿದರು. ರಾಯನ್ ಎನ್‌ಫಿಲ್ಟ್ ರೈಡಿಂಗ್‌ನಲ್ಲಿ ತಮ್ಮ ಸಾಮರ್ಥ್ಯ ಪರೀಕ್ಷಿಕೊಂಡು ಖುಷಿಪಟ್ಟರು. ತಮ್ಮಲ್ಲಿನ ರೈಡಿಂಗ್ ಕೌಶಲಗಳನ್ನು ಪರೀಕ್ಷೆ ಒಡ್ಡಿಕೊಂಡ ಸವಾರರು ಗೆದ್ದ ನಗುವಿನೊಂದಿಗೆ ಜಿಮ್‌ಖಾನಾಗೆ ಶುಭಕೋರಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net