ಮಧುರೆ ಹೆದ್ದಾರಿಗೆ ಬಂತು ಹಂಪ್​

roadhump
roadhump
Published on

ವಿಜಯವಾಣಿ ಸುದ್ದಿಜಾಲ ಮಧುರೆ

ದೊಡ್ಡಬಳ್ಳಾಪುರ&ನೆಲಮಂಗಲ ಸಂಪರ್ಕ ರಸ್ತೆ ಹಾದು ಹೋಗುವ ಮಧುರೆ ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ಅಪಘಾತಗಳ ನಿಯಂತ್ರಣಕ್ಕೆ ಕಡೆಗೂ ಎಚ್ಚೆತ್ತ ಅಧಿಕಾರಿಗಳು ರಸ್ತೆಯಲ್ಲಿ ಕೆಲವೊಂದು ಸಂಚಾರ ನಿಯಮಗಳನ್ನು ಅಳವಡಿಸಲು ಮುಂದಾಗಿದ್ದಾರೆ.
ಕಳೆದ 15 ದಿನದ ಅಂತರದಲ್ಲೇ ಇದೇ ರಸ್ತೆಯಲ್ಲಿ ನಡೆದ ಪ್ರತ್ಯೇಕ ಅಪಘಾತದಲ್ಲಿ ಬೈಕ್​ ಸವಾರ ಹಾಗೂ 13 ವರ್ಷದ ಬಾಲಕ ಬಲಿಯಾಗಿದ್ದರು. ಇದರಿಂದ ರೊಚ್ಚಿಗೆದ್ದ ಸ್ಥಳಿಯರು ರಸ್ತೆ ತಡೆ ನಡೆಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಲೊಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪ್ರಮುಖ ಡೆಡ್ಲಿ ಸ್ಪಾಟ್​ಗಳನ್ನು ಗುರುತಿಸಿ ಆ ಭಾಗದಲ್ಲಿ ಹಂಪ್​ಗಳನ್ನು ಹಾಕುವ ಮೂಲಕ ವಾಹನಗಳ ವೇಗ ನಿಯಂತ್ರಣಕ್ಕೆ ಕ್ರಮಕೈಗೊಂಡಿದ್ದಾರೆ.
ಮಧುರೆ ಕ್ರಾಸ್​, ಕನಸವಾಡಿ ಸಮೀಪ, ಕೋಡಿಪಾಳ್ಯ ಸೇರಿ ನಾಲ್ಕೆ$ದು ಕಡೆಗಳಲ್ಲಿ ರಸ್ತೆ ಉಬ್ಬುಗಳನ್ನು ಹಾಕಿ ಅವುಗಳಲ್ಲಿ ಬಣ್ಣ ಬಳಿದು ವಾಹನಗಳ ವೇಗ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗಿದೆ.
ರಸ್ತೆ ವಿಸ್ತರಣೆಗೆ ಚಿಂತನೆ:
ದೊಡ್ಡಬಳ್ಳಾಪುರ&ನೆಲಮಂಗಲ ಹೆದ್ದಾರಿಯಲ್ಲಿ ಕೆಲವು ಕಡೆಗಳಲ್ಲಿ ತೀಕ್ಷ$$$$್ಣ ತಿರುವುಗಳಿದ್ದು, ಎದುರು&ಬದುರು ಬರುವ ವಾಹನಗಳು ಮುಖಾಮುಖಿ ಡಿಕ್ಕಿಯಾಗುವ ಸಾಧ್ಯತೆಗಳು ಹೆಚ್ಚಿವೆ. ಈ ಹಿನ್ನೆಲೆಯಲ್ಲಿ ಇಂಥ ಸ್ಥಳಗಳಲ್ಲಿ ರಸ್ತೆ ವಿಸ್ತರಣೆ ಮಾಡಿ ತಿರುವುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆ ಚಿಂತನೆ ನಡೆಸಿದೆ. ಲೊಕೋಪಯೋಗಿ ಇಲಾಖೆ ಇಂಜಿನಿಯರ್​ ಗಿರಿಗೌಡ ಹಾಗೂ ಇನ್ನಿತರ ಅಧಿಕಾರಿಗಳು ಹೆದ್ದಾರಿ ಪರಿಶೀಲನೆ ನಡೆಸಿ ಪ್ರಮುಖ ತಿರುಗಳನ್ನು ಗುರುತು ಮಾಡಿದ್ದಾರೆ ಇದರೊಂದಿಗೆ ಆರ್​ಟಿಒ, ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ ಹಾಗೂ ಪೊಲೀಸ್​ ಇಲಾಖೆ ಸಹಯೋಗದಲ್ಲಿ ಕಮಿಟಿ ರಚಿಸಿ ಈ ರಸ್ತೆಯಲ್ಲಿ ಅಪಘಾತಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿ ವರದಿ ಸಿದ್ದಪಡಿಸಲು ಮುಂದಾಗಿದೆ.
ಟೋಲ್​ ತಪ್ಪಿಸುವ ಲಾರಿಗಳು:
ದೊಡ್ಡಬಳ್ಳಾಪುರ&ನೆಲಮಂಗಲ ಭಾಗದ ಲಾರಿ ಚಾಲಕರು ಟೋಲ್​ ತಪ್ಪಿಸಲು ಮಧುರೆ ರಸ್ತೆ ಮಾರ್ಗ ಬಳಸುತ್ತಿದ್ದಾರೆ. ಇದರಿಂದ ಈ ಭಾಗದಲ್ಲಿ ವಾಹನಗಳ ಸಂಖ್ಯೆ ಮಿತಿಮೀರಿದೆ. ಅಲ್ಲದೆ ದಾಬಸ್​ಪೇಟೆ, ಬಾಶೆಟ್ಟಿಹಳ್ಳಿ ಭಾಗದ ಕೈಗಾರಿಕಾವಲಯದ ಪ್ಯಾಕ್ಟರಿ ಬಸ್​ಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ. ್ಯಾಕ್ಟರಿ ಬಸ್​ ಚಾಲಕರು ಉದ್ಯೋಗಿಗಳನ್ನು ಸರಿಯಾದ ವೇಳೆಗೆ ತಲುಪಿಸುವ ದಾವಂತದಲ್ಲಿ ವಾಹನಗಳನ್ನು ವೇಗಮಿತಿ ಮೀರಿ ಚಾಲನೆ ಮಾಡುವುದು ಕಂಡುಬರುತ್ತಿದೆ. ಅದೇ ರೀತಿ ಲಾರಿ ಚಾಲಕರೂ ವೇಗಮಿತಿ ಮೀರುತ್ತಿದ್ದಾರೆ. ಹಲವು ವೇಳೆ ವಾಹನಗಳನ್ನು ಓವರ್​ಟೇಕ್​ ಮಾಡಲು ಹೋಗಿ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳಿಯರು ಆರೋಪಿಸಿದ್ದಾರೆ. ಈ ನಿಟ್ಟಿನಲ್ಲಿ ಈ ರಸ್ತೆಯಲ್ಲಿ ವಾಹನಗಳ ವೇಗ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳು ರೂಪುರೇಷೆ ಸಿದ್ದಪಡಿಸುತ್ತಿದ್ದಾರೆ.
ರಸ್ತೆಯಲ್ಲಿ ಇಬ್ಬರ ಬಲಿ:
ಕೋಡಿಪಾಳ್ಯ ಬಳಿ ಸೈಕಲ್​ನಲ್ಲಿ ತೆರಳುತ್ತಿದ್ದ 13 ವರ್ಷದ ಬಾಲಕನಿಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಧನು ಎಂಬ 13 ವರ್ಷದ ಬಾಲಕ ಸ್ಥಳದಲ್ಲೆ ಮೃತಪಟ್ಟಿದ್ದ.ನೆಲಮಂಗಲ ಮುಖ್ಯರಸ್ತೆಯ ಮಧುರೆ ಹೋಬಳಿಯ 11ನೇ ಮೈಲಿ ಬಳಿ ಹಾಲಿನ ಟ್ಯಾಂಕರ್​ಗೆ ಬೈಕ್​ ಡಿಕ್ಕಿಯಾಗಿ ಬೈಕ್​ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದ ಇವೆರಡು ಪ್ರಕರಣಗಳ ಬಳಿಕ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಏರ್ಪಟ್ಟಿತ್ತು. ಸ್ಥಳಿಯರು ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದ್ದರು.
ದೊಡ್ಡಬಳ್ಳಾಪುರ&ನೆಲಮಂಗಲ ಸಂಪರ್ಕ ರಸ್ತೆ ಹಾದು ಹೋಗುವ ಮಧುರೆ ಹೆದ್ದಾರಿಯಲ್ಲಿ ಅಪಘಾತಗಳನ್ನು ನಿಯಂತ್ರಿಸುವ ಸಲುವಾಗಿ ಅಧಿಕಾರಿಗಳ ತಂಡದೊಂದಿಗೆ ಪರಿಶೀಲನೆ ನಡೆಸಲಾಗಿದೆ. ಈ ರಸ್ತೆಯಲ್ಲಿನ ಪ್ರಮುಖ ಅಪಘಾತ ವಲಯಗಳನ್ನು ಗುರುತಿಸಿ ಹಂಪ್​ಗಳನ್ನು ಹಾಕಲಾಗುತ್ತಿದೆ. ವಾಹನಗಳು ವೇಗಮೀತಿ ಮೀರಿ ಸಂಚರಿಸುವುದು ಈ ಭಾಗದಲ್ಲಿ ಅಪಘಾತಗಳಿ ಆಸ್ಪದವಾಗುತ್ತಿದೆ. ಸೂಚನಾಲಕಗಳು ಸೇರಿ ಇನ್ನಿತರ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ.
> ಗಿರಿಗೌಡ, ಎಇಇ ಲೊಕೋಪಯೋಗಿ ಇಲಾಖೆ
ಆರ್​ಟಿಒ, ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ ಹಾಗೂ ಪೊಲೀಸ್​ ಇಲಾಖೆ ಸಹಯೋಗದಲ್ಲಿ ಕಮಿಟಿ ರಚಿಸಿ ಈ ಭಾಗದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ಪ್ಲಾನ್​ ಮಾಡಲಾಗುವುದು. ಈ ರಸ್ತೆಯಲ್ಲಿ ಸ್ಪೀಡ್​ಗನ್​ಗಳನ್ನು ಅಳವಡಿಸಿ ವೇಗಮಿತಿ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗುವುದು, ಪೊಲೀಸ್​ ಬ್ಯಾರಿಕೇಡ್​ಗಳನ್ನು ಹಾಕಿ ವಾಹನ ತಪಾಸಣೆ ಜತೆಗೆ ವೇಗ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ.
> ಪಾಂಡುರಂಗ, ಡಿವೈಎಸ್​ಪಿ ದೊಡ್ಡಬಳ್ಳಾಪುರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net