ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯ ಭಾಗಗಳಲ್ಲಿ ಇತ್ತೀಚಿನ ದಿನಗಳಲ್ಲಿ ರೈಸ್ಮಿಲ್ಗಳು ಹೆಚ್ಚುತ್ತಿರುವುದು ಇಂಥ ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ. ಭತ್ತ ಬೆಳೆಯದ ಜಿಲ್ಲೆಗಳಲ್ಲೇ ರೈಸ್ಮಿಲ್ಗಳು ಹೆಚ್ಚು ಕಾರ್ಯನಿರ್ವಹಿಸುತ್ತಿರುವುದರ ಹಿಂದೆ ಇಂಥ ಕಾಳಸಂತೆ ಕಾರ್ಯಾಚರಣೆ ನಡೆಯುತ್ತಿದೆ ಎಂಬ ಅನುಮಾನ ದಟ್ಟವಾಗುತ್ತಿದೆ. ಪಡಿತರ ಚೀಟಿ ಮೂಲಕ ಪಡೆಯುವ ಅಕ್ಕಿಯನ್ನು ಲಾನುಭವಿಗಳಿಂದ ಕಡಿಮೆ ದರದಲ್ಲಿ ಖರೀದಿ ಮಾಡುವ ದಂಧೆಕೋರರು ಜಿಲ್ಲೆಗಳಲ್ಲಿ ಬೇರುಬಿಟ್ಟಿದ್ದು, ಖುದ್ದು ಮನೆಮನೆಗಳಿಗೆ ಭೇಟಿ ನೀಡಿ ಅಕ್ಕಿ ಖರೀದಿ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಆಟೋ ಮತ್ತಿತರ ಸರಕುಸಾಗಣೆ ವಾಹನಗಳ ಬಂದು ಲಾನುಭವಿಗಳಿಗೆ ಸ್ಥಳದಲ್ಲೇ ಹಣ ಸಂದಾಯ ಮಾಡಿ ಅಕ್ಕಿ ಖರೀದಿ ಮಾಡುತ್ತಿದ್ದಾರೆ. 2&3 ತಿಂಗಳಿಗೊಮ್ಮೆ ಬಂದು ಅಕ್ಕಿ ಖರೀದಿ ಮಾಡುತ್ತಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೂ ಬಂದಿದೆ. ಆದರೆ ಯಾವುದೇ ಕ್ರಮಕೈಗೊಳ್ಳದೆ ನಮಗ್ಯಾಕೆ ಎಂಬ ಧೋರಣೆ ಅನುಸರಿಸುತ್ತಿದ್ದಾರೆ.