ರಾಜ್ಯದಲ್ಲಿ ಶೀಘ್ರ ಪೊಲೀಸರ ನೇಮಕ

Recruitment of Police
Recruitment of Police
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಪೊಲೀಸ್ ಇಲಾಖೆಯಲ್ಲಿ 1 ಸಾವಿರ ಸಬ್‌ಇನ್ಸ್‌ಪೆಕ್ಟರ್ ಹಾಗೂ 8 ಸಾವಿರ ಪೇದೆಗಗಳನ್ನು ಶೀಘ್ರ ನೇಮಕ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದರು.
ದೇವನಹಳ್ಳಿ ಟೌನ್‌ನಲ್ಲಿ ಸಹಾಯಕ ಪೊಲೀಸ್ ಆಯುಕ್ತರ ಕಚೇರಿ ಹಾಗೂ ದೇವನಹಳ್ಳಿ ಪೊಲೀಸ್ ಠಾಣೆಯ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದರು.ಪೊಲೀಸ್ ಇಲಾಖೆಯಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಪಿಎಸ್‌ಐ ಹಗರಣವನ್ನು ಬಗೆಹರಿಸಿ ಈಗ 545 ಜನ ತರಬೇತಿ ಪಡೆದು ಕೆಲಸಕ್ಕೆ ಸೇರಿದ್ದಾರೆ. ಇನ್ನು ಸಬ್ಇನ್‌ಸ್ೆಕ್ಟರ್ ಹಾಗೂ ಕಾನ್ಸ್‌ಟೇಬಲ್ಗಳ ನೇಮಕಕ್ಕೆ ಮುಖ್ಯಮಂತ್ರಿಗಳು ಅನುಮತಿ ನೀಡಿದ್ದಾರೆ ಎಂದು ತಿಳಿಸಿದರು. 3 ವರ್ಷದಲ್ಲಿ ರಾಜ್ಯದಲ್ಲಿ ಯಾವುದೇ ಕೋಮುಗಲಭೆಗಳಾಗಿಲ್ಲ, ಕರಾವಳಿ ಭಾಗದಲ್ಲಿಯೂ ಗಲಾಟೆ ಆಗಿಲ್ಲ. ಸಬ್‌ಇನ್‌ಸ್ೆಕ್ಟರ್ ವರ್ಗಾವಣೆಯನ್ನು ಒಂದು ವರ್ಷದಿಂದ ಎರಡು ವರ್ಷಕ್ಕೆ ಹೆಚ್ಚಿಸಲಾಗಿದೆ. ಕಡ್ಡಾಯವಾಗಿ ಎರಡು ವರ್ಷ ಪೊರೈಸಲೇಬೇಕು ಎಂದು ತಿಳಿಸಿದರು. ಪೊಲೀಸ್ ಇಲಾಖೆಗೆ ಎಲ್ಲ ಸೌಲಭ್ಯಗಳನ್ನು ನೀಡುತ್ತಿದ್ದೇವೆ. ಪೊಲೀಸ್ ಗೃಹ ಎಂಬ ಯೋಜನೆ ಯಿಂದ ಶೇ.40 ಸಿಬ್ಬಂದಿ, ಪೊಲೀಸರಿಗೆ ಮನೆ ಕಟ್ಟಿಕೊಟ್ಟಿದ್ದೀವಿ, ಒಂದು ಅಪಾಟ್‌ಮೆಂಟ್‌ಗೆ 38 ಲಕ್ಷ ರೂ. ಖರ್ಚು ಮಾಡಿ ಮನೆ ನಿರ್ಮಿಸಲಾಗಿದೆ. ಇನ್ನಷ್ಟು ಮನೆಗಳನ್ನು ಕಟ್ಟಲಿದ್ದೇವೆ ಎಂದು ಹೇಳಿದರು.
ಕರ್ನಾಟಕ ಪೊಲೀಸ್ ಇಲಾಖೆಗೆ ಒಂದು ಇತಿಹಾಸ ಇದೆ. ಇಡೀ ದೇಶದಲ್ಲಿ ಸಂಯಮದಿಂದ ಜನಸ್ನೇಹಿಯಾಗಿ ಕೆಲಸ ಮಾಡುತ್ತಿರುವ ಇಲಾಖೆ ಇಡೀ ದೇಶದಲ್ಲಿ ಯಾವುದಾದರೂ ಇದೆ ಎಂದರೆ ಅದು ಕರ್ನಾಟಕ ಪೊಲೀಸ್ ಎಂದು ಹೇಳಿದರು. ಇಲಾಖೆಯಲ್ಲಿ ಅನೇಕ ಬದಲಾವಣೆಗಳನ್ನು ತರಲಾಗಿದೆ ಇಡೀ ದೇಶದಲ್ಲಿ ನ್ಯಾಯವನ್ನು ಜರೂರಾಗಿ ಒದಗಿಸುವುದರಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನದಲ್ಲಿದೆ ಎಂದರು.
ಪೊಲೀಸರು ರಿಯಲ್ ಎಸ್ಟೇಟ್ ಮಾಡಬಾರದು:
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈಗ ಸಾಕಷ್ಟು ಭೂಮಿ ಬೆಲೆ ಜಾಸ್ತಿ ಆಗಿದೆ. ರಿಯಲ್ ಎಸ್ಟೇಟ್ ದಂಧೆ ಬಗ್ಗೆ ಸಂಸದರು ಪ್ರಸ್ತಾಪಿಸಿದ್ದಾರೆ. ನಾನು ಅನೇಕ ಬಾರಿ ಸಭೆಗಳಲ್ಲಿ ಪ್ರಸ್ತಾಪಿಸಿದ್ದೇನೆ, ಯಾವ ಅಧಿಕಾರಿಯೂ ಪೊಲೀಸ್ ಇಲಾಖೆಯಲ್ಲಿ ರಿಯಲ್ ಎಸ್ಟೇಟ್ ದಂಧೆ ಮಾಡಬಾರದು. ಯಾರಾದರೂ ಠಾಣೆಗೆ ಬಂದಾಗ ಎ್ಐಆರ್ ದಾಖಲಿಸಿ ಅವರಿಗೆ ನ್ಯಾಯ ಒದಗಿಸಿ ಕೊಡುವುದು ಬಿಟ್ಟರೆ ಕುಳಿತುಕೊಂಡು ದಂಧೆ ಬಗ್ಗೆ ಮಾತನಾಡಿ ಹಣ ವಸೂಲಿ ಮಾಡುವುದು ಆಗಬಾರದು ಎಂದು ಸಚಿವರು ಖಡಕ್ ಸೂಚನೆ ನೀಡಿದರು. ಪ್ರೆಸ್ಟೀಜ್ ಕಂಪನಿಯವರು ಸುಂದರವಾದ ಕಟ್ಟಡ ಕಟ್ಟಿಸಿಕೊಟ್ಟಿದ್ದಾರೆ. ದೇಶದಲ್ಲಿಯೇ ಮಾದರಿ ಕಟ್ಟಡ ಎಂದರೆ ತಪ್ಪಾಗಲಾರದು. ವಿನ್ಯಾಸವು ಬಹಳ ಚೆನ್ನಾಗಿ ಮೂಡಿ ಬಂದಿದೆ. ಸುಸಜ್ಜಿತ ಕಟ್ಟಡದಲ್ಲಿ ಜನಸ್ನೇಹಿ ಕೆಲಸಗಳು ಆಗಬೇಕು. ಸಾರ್ವಜನಿಕರು ಠಾಣೆ ಬಂದಾಗ ಸರಿಯಾಗಿ ವರ್ತಿಸಿ, ಭಾಷೆ ಬದಲಾವಣೆ ಮಾಡಿಕೊಳ್ಳಿ ಎಂದು ಹಲವು ಬಾರಿ ಹೇಳುತ್ತಾ ಬಂದಿದ್ದೇನೆ. ಅದೇ ರೀತಿ ಜನಸ್ನೇಹಿ ಆಡಳಿತ ನೀಡಬೇಕು ಎಂದರು.
ರೈತಾಪಿ ಕುಟುಂಬಗಳಿಗೆ ಉದ್ಯೋಗ ನೀಡಬೇಕು:
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ ಪ್ರೆಸ್ಟೀಜ್ ಕಂಪನಿ ಬಹಳಷ್ಟು ಒಳ್ಳೆಯ ಕೆಲಸವನ್ನು ಮಾಡಿದೆ. ಜಿಲ್ಲೆಯಲ್ಲಿ ಶಾಲಾ ಕಾಲೇಜು ಕಟ್ಟುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುವುದು, ಉದ್ಯೋಗ ಒದಗಿಸುವುದು ನಮ್ಮ ಆದ್ಯತೆ ಆಗಿರಬೇಕು. ಜಿಲ್ಲೆಯಲ್ಲಿರುವ ಕಂಪನಿಗಳು ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಿ. ಸಾಕಷ್ಟು ರೈತಾಪಿ ಕುಟುಂಬಗಳು ಕೈಗಾರಿಕೆಗಳಿಗೆ ಭೂಮಿ ನೀಡಿದ್ದು ಅಂತಹ ಕುಟುಂಬಗಳ ಅಭ್ಯರ್ಥಿಗಳಿಗೆ ಉದ್ಯೋಗ ನೀಡಿದರೆ ಅನುಕೂಲವಾಗಲಿದೆ ಎಂದರು. ಪೊಲೀಸ್ ಠಾಣೆಗಳು ಸದಾ ಜನಸ್ನೇಹಿಯಾಗಿರಬೇಕು. ಯಾರಾದರೂ ಠಾಣೆಗೆ ಬಂದು ದೂರು ಕೊಟ್ಟಲ್ಲಿ ಠಾಣೆಯಲ್ಲಿ ಬಗೆಹರಿಸುವಂತ ಸಮಸ್ಯೆಗಳಿದ್ದಲ್ಲಿ ಅಲ್ಲೇ ಬಗೆಹರಿಸಿ ಅವರನ್ನು ಕಳಿಸಿಕೊಡುವುದು ಉತ್ತಮ. ತೀರ ಅನಿವಾರ್ಯವಾದಲ್ಲಿ ಮಾತ್ರ ಎ್ಐಆರ್ ದಾಖಲಿಸಿ. ಇಲ್ಲವಾದಲ್ಲಿ ಅವರು ಕೋರ್ಟ್ ಅಂತಾ ಅಲೆಯುತ್ತಾರೆ. ಇದರಿಂದ ಗ್ರಾಮಗಳಲ್ಲಿ ಮನಸ್ತಾಪಗಳು ಹೆಚ್ಚಾಗಿ ಗ್ರಾಮಗಳ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net