ಜಿಲ್ಲಾ ಅಂತರ್ಜಲ ಇಲಾಖೆ ವತಿಯಿಂದ ಖಾಸಗಿ ಕಂಪನಿ ಸಹಭಾಗಿತ್ವದಲ್ಲಿ ಅಂದಾಜು 10 ಲಕ್ಷ ರೂಪಾಯಿ ವೆಚ್ಚದಲ್ಲಿ 30 ಲೀಟರ್ ನೀರು ಸಾಮರ್ಥ್ಯದ ಟ್ಯಾಂಕ್ ನಿರ್ಮಾಣವಾಗಲಿದೆ, ಸಂಗ್ರಹವಾದ ಮಳೆ ನೀರನ್ನು ಪುನರ್ ಬಳಕೆ ಮಾಡಲಾಗುವುದು, ಇದು ಅಂತರ್ಜಲ ವೃದ್ಧಿಗೆಯ ಜತೆಗೆ ಸಂಗ್ರಹವಾದ ಹೆಚ್ಚುವರಿ ನೀರನ್ನು ಜಿಲ್ಲಾಡಳಿತಭವನಲ್ಲಿನ ಸಸಿಗಳ ಪೋಷಣೆಗೆ ಬಳಸುವ ಯೋಜನೆಯಾಗಿದೆ. ಜಿಲ್ಲೆಯಲ್ಲಿ ಸಿಎಸ್‌ಆರ್ ಅನುದಾನದಡಿ ಕೆರೆಗಳ ಪುನಶ್ಚೇತನ, ಕಲ್ಯಾಣಿಗಳ ಅಭಿವೃದ್ಧಿ, ಅಂಗನವಾಡಿ ಕಟ್ಟಡಗಳ ನಿರ್ಮಾಣ, ಸರ್ಕಾರಿ ಶಾಲೆಗಳ ದುರಸ್ತಿ ಸೇರಿ ಹಲವು ಕಾರ್ಯಕ್ರಮಗಳು ನಡೆಯುತ್ತಿದ್ದು ಇದರಲ್ಲಿ ಮಳೆನೀರು ಕೊಯ್ಲು ಯೋಜನೆಗೂ ನೆರವು ಪಡೆಯಲಾಗುತ್ತಿದೆ.