ಜಿಲ್ಲೆಯಲ್ಲಿ 2025-26 ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿ ನೋಂದಣಿಗೆ ಡಿ. 15 ಕೊನೆಯ ದಿನವಾಗಿದೆ. ಜಿಲ್ಲೆಯಲ್ಲಿ 5 ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿತ್ತು. ನೆಲಮಂಗಲ ತಾಲೂಕಿನಲ್ಲಿ ಕುಣಿಗಲ್ ರಸ್ತೆಯಲ್ಲಿನ ಕೆಎ್ಸಿಎಸ್‌ಸಿ ಗೋದಾಮು,ತ್ಯಾಮಗೊಂಡ್ಲು ಹೋಬಳಿಯಲ್ಲಿ ವಿಎಸ್‌ಎಸ್‌ಎನ್ ಕಳಲುಘಟ್ಟ ರೈತ ಕೇಂದ್ರ, ಸೋಂಪುರ ಹೋಬಳಿಯಲ್ಲಿ ವಿಎಸ್‌ಎಸ್‌ಎನ್ ರೈತ ಕೇಂದ್ರ, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಎಪಿಎಂಸಿ ಯಾರ್ಡ್ ಹಾಗೂ ಸಾಸಲು ಹೋಬಳಿಯಲ್ಲಿ ರೈತ ಸಂಪರ್ಕ ಕೇಂದ್ರ, ದೇವನಹಳ್ಳಿ ತಾಲೂಕಿನಲ್ಲಿ ಕುರುಬರದೊಡ್ಡಿಯಲ್ಲಿನ ಕೆಎ್ಸಿಎಸ್‌ಸಿ ಗೋದಾಮು, ಹೊಸಕೋಟೆ ತಾಲೂಕಿನಲ್ಲಿ ವೀರಭದ್ರೇಶ್ವರ ಮಿಲ್‌ನಲ್ಲಿ ಖರೀದಿ ಕೇಂದ್ರಗಳು ಕಾರ್ಯನಿರ್ವಹಿಸಿದ್ದವು.