ಯುವ ನಾಯಕತ್ವ ಬೆಳೆಸಲು ರಸಪ್ರಶ್ನೆ ಸ್ಪರ್ಧೆ

Quiz competition to foster youth leadership
Quiz competition to foster youth leadership
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ವಿಕಸಿತ ಭಾರತ ಯುವ ನಾಯಕತ್ವ ಸಂವಾದ-2027 ಗುರಿಯಾಗಿಸಿ ಯುವ ಸಮೂಹಕ್ಕೆ ವಿಕಸಿತ ಭಾರತ ಕ್ವಿಜ್​(ರಸಪ್ರಶ್ನೆ)ಸ್ಪರ್ಧೆಯನ್ನು ಆನ್​ಲೈನ್​ ಮೂಲಕ ರಾಜ್ಯದ್ಯಂತ ವಿವಿಧ ಭಾಗಗಳಲ್ಲಿ ನಡೆಸಲಾಗುತ್ತಿದ್ದು ಜಿಲ್ಲೆಯ ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಎಂದು ಮೈ ಭಾರತ್​ ಸಂಸ್ಥೆಯ ಜಿಲ್ಲಾ ಅಧಿಕಾರಿ ಅರುಣಿಮಾ ತಿಳಿಸಿದರು.
ದೇವನಹಳ್ಳಿ ಟೌನ್​ ನ ಮೈ ಭಾರತ್​ ಕಚೇರಿಯಲ್ಲಿ ಬುಧವಾರ ವಿಕಸಿತ ಭಾರತ ಯುವ ನಾಯಕತ್ವ ಸಂವಾದ-2027 ಕುರಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದೇಶದ ಯುವಜನರಲ್ಲಿ ನಾಯಕತ್ವ, ಸೃಜನಶೀಲತೆ, ನವೀನತೆ ಹಾಗೂ ರಾಷ್ಟ್ರ ನಿಮಾರ್ಣದತ್ತ ಜವಾಬ್ದಾರಿಯ ಪ್ರಜ್ಞೆ ಉತ್ತೇಜಿಸುವ ಉದ್ದೇಶದಿಂದ ವಿಕಸಿತ ಭಾರತ ಯುವ ನಾಯಕತ್ವ 2027 ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಕೊಡುಗೆಗಳಿಗೆ ವೇದಿಕೆ:
ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಭಾರತ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈ ಭಾರತ್​ ಈ ಕಾರ್ಯಕ್ರಮದ ಅನಷ್ಠಾನ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಸಂವಾದದ ಮೂಲಕ ಯುವಜನರು ವಿಕಸಿತ ಭಾರತ 2047 ಎಂಬ ರಾಷ್ಟ್ರ್ಟ್ರದ ಗುರಿಯತ್ತ ತಮ್ಮ ಆಲೋಚನೆಗಳು ಹಾಗೂ ಕೊಡುಗೆಗಳನ್ನು ಪ್ರಸ್ತುತಪಡಿಸಲು ವೇದಿಕೆ ಸಿಗಲಿದೆ ಎಂದು ಅರುಣಿಮಾ ತಿಳಿಸಿದರು.ಆಸಕ್ತ 15 ರಿಂದ 29 ವಯಸ್ಸಿನ ಯುವಕ-ಯುವತಿಯರು ಕ್ವಿಜ್​ ಸ್ಪರ್ಧೆಯಲ್ಲಿ ಭಾಗವಹಿಸಲು ಮೈ ಭಾರತ್​ ಪೋರ್ಟಲ್​ ಜಠಿಠಿಟಠ://ಞಢಚಿಜಚ್ಟಚಠಿ.ಜಟಡ.ಜ್ಞಿ/ ನಲ್ಲಿ ನೋಂದಾಯಿಸಿಕೊಳ್ಳಬೇಕು. ಕ್ವಿಜ್​ ಸ್ಪರ್ಧೆಯು ಸೆ.30 ವರೆಗೆ ನಡೆಯಲಿದ್ದು ಆನ್​ಲೈನ್​ ಮೂಲಕವೇ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ರಸಪ್ರಶ್ನೆಯ ನಂತರ ಆಯ್ಕೆಯಾಗುವ ಯುವಜನರು 500 ಪದಗಳ ವಿಕಸಿತ ಭಾರತ್​ ಈಸಿ ಚಾಲೆಂಜ್​ ನಲ್ಲಿ ಭಾಗವಹಿಸಲಿದ್ದಾರೆ. ಮುಂದಿನ ಹಂತದಲ್ಲಿ ಪ್ರತಿಯೊಂದು ಜಿಲ್ಲೆಯಿಂದ ಅತ್ಯುತ್ತಮ 50 ಪ್ರಬಂಧಗಳನ್ನು ಡಿಸ್ಟಿಕ್​ ಚಾಂಪಿಯನಶಿಪ್​ ಪಿಪಿಟಿ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ. ನಂತರ ಈ ಹಂತದಿಂದ ಪ್ರತಿ ಜಿಲ್ಲೆಯ ಅತ್ಯುತ್ತಮ ಇಬ್ಬರ ಸ್ಪರ್ಧಿಗಳು ರಾಜ್ಯಮಟ್ಟಕ್ಕೆ ಅರ್ಹರನ್ನಾಗಿ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಅನಿಸಿಕೆ ಪ್ರಸ್ತುತಪಡಿಸುವ ಅವಕಾಶ:
ರಾಜ್ಯ ಮಟ್ಟದಲ್ಲಿ ಆಯ್ಕೆಯಾದ ಯುವಜನರು ತಮ್ಮ ಆಲೋಚನೆ, ಗುರಿಗಳನ್ನು ತೀರ್ಪುಗಾರರ ಸಮಿತಿಯ ಮುಂದೆ ಮಂಡಿಸಲಿದ್ದಾರೆ. ರಾಜ್ಯ ಮಟ್ಟದ ಪ್ರದರ್ಶನದ ಆಧಾರದ ಮೇಲೆ ರಾಷ್ಟ್ರೀಯ ಹಂತಕ್ಕಾಗಿ ರಾಜ್ಯ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ರಾಷ್ಟ್ರೀಯ ಹಂತದಲ್ಲಿ ಆಯ್ಕೆಯಾಗುವ ಯುವಜನರು ನವದೆಹಲಿಯಲ್ಲಿ ತಜ್ಞರು, ಹಿರಿಯ ಅಧಿಕಾರಿಗಳು ಹಾಗೂ ಕೇಂದ್ರ ಸಚಿವರ ಸಮ್ಮುಖದಲ್ಲಿ ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಪ್ರಸ್ತುತಪಡಿಸುವ ಅವಕಾಶವನ್ನು ಪಡೆಯಲಿದ್ದಾರೆ. ಪ್ರಾದೇಶಿಕ ಅಂತಿಮ ಸುತ್ತಿಗೆ ಆಯ್ಕೆಯಾಗುವ ಸ್ಪರ್ಧಿಗಳು ಪ್ರಧಾನಮಂತ್ರಿಯವರ ಸಮ್ಮುಖದಲ್ಲಿ ತಮ್ಮ ಆಲೋಚನೆ ಮಂಡಿಸುವ ಅವಕಾಶವನ್ನು ಪಡೆಯಲಿದ್ದಾರೆ ಎಂದು ಮೈ ಭಾರತ್​ ಸಂಸ್ಥೆಯ ಜಿಲ್ಲಾ ಅಧಿಕಾರಿ ತಿಳಿಸಿದರು.ಈ ಕಾರ್ಯಕ್ರಮದಿಂದ ರಸಪ್ರಶ್ನೆ ಅಥವಾ ಸ್ಪರ್ಧೆ ಜತೆಗೆ ವಿವಿಧ ಕ್ಷೇತ್ರಗಳ ಪ್ರತಿಭಾವಂತ ಯುವಜನರು ತಮ್ಮ ಕೌಶಲ, ಸೃಜನಶೀಲತೆ ಹಾಗೂ ನವೀನ ಆಲೋಚನೆಗಳನ್ನು ಪ್ರದರ್ಶಿಸಲು ಅವಕಾಶ ಪಡೆಯಲಿದ್ದಾರೆ. ಜಿಲ್ಲೆಯ ಎಲ್ಲಾ ಕಾಲೇಜುಗಳು, ವಿಶ್ವವಿದ್ಯಾಲಯಗಳು ಹಾಗೂ ಇತರ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಯುವಜನರು ವಿಕಸಿತ ಭಾರತ್​ ಕ್ವಿಜ್​ ನಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಮನವಿ ಮಾಡಿದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net