ನಮ್ಮ ಭೂಮಿ ನಮ್ಮ ಹಕ್ಕು, ರೈತರ ಗೋಳು ಕಾಡಲಿದೆ ಎಲ್ಲರ ಒಡಲು ಎಂಬ ೋಷವಾಕ್ಯದೊಂದಿಗೆ ಟ್ರ್ಯಾಕ್ಟರ್ ರ‌್ಯಾಲಿಗೆ ಅಂತಿಮ ಸಿದ್ದತೆ ನಡೆದಿದೆ. ಕಳೆದ ಮೂರು ದಿನಗಳಿಂದ ಭೂಸ್ವಾಧೀನಗೊಳ್ಳಲಿರುವ ದೊಡ್ಡಬೆಳವಂಗಲ, ಚಿಕ್ಕಬೆಳವಂಗಲ, ರಾಂಪುರ, ಸೊಣ್ಣೆನಹಳ್ಳಿ, ನಾರನಹಳ್ಳಿ ಗ್ರಾಮದಲ್ಲಿ ರೈತ ಮುಖಂಡರು ದೊಡ್ಡಮಟ್ಟದ ಪ್ರಚಾರ ಕಾರ್ಯ ನಡೆಸಿದ್ದು ರೈತರಲ್ಲಿ ಒಗ್ಗಟ್ಟಿನ ಮಂತ್ರಬೀಜ ಬಿತ್ತುತ್ತಿದ್ದಾರೆ. ಯಾವುದೇ ಕಾರಣಕ್ಕೂ ಬಲವಂತದ ಭೂಸ್ವಾಧೀನಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಪಟ್ಟು ಹಿಡಿದಿರುವ ರೈತರು ಬೃಹತ್ ಟ್ರ್ಯಾಕ್ಟರ್ ರ‌್ಯಾಲಿ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.