ಜಿಲ್ಲಾಡಳಿತ ಕಚೇರಿ ಮುಂಭಾಗದಲ್ಲಿ ಸೋಮವಾರ ಭಾರತೀಯ ಕಿಸಾನ್ ಸಂ (ಕರ್ನಾಟಕ ಪ್ರದೇಶ)ವತಿಯಿಂದ ಹಮ್ಮಿಕೊಂಡಿದ್ದ ಧರಣಿಯಲ್ಲಿ ಮಾತನಾಡಿದರು. ಸರ್ಕಾರಿ ಜಮೀನು, ಗುಂಡು ತೋಪುಗಳು, ಓಣಿ, ಬಂಡಿಜಾಡು, ಕಾಲು ದಾರಿ, ಸ್ಮಶಾನ, ಕೆರೆಕುಂಟೆ ಸೇರಿ ನೂರಾರು ಕೋಟಿ ರೂ.ಬೆಲೆ ಬಾಳುವ ಸಾರ್ವಜನಿಕ ಆಸ್ತಿಗಳು ಅಕ್ರಮ ಖಾತೆಗಳ ಮೂಲಕ ಕಣ್ಮರೆಯಾಗಿವೆ, ಈ ಸಂಬಂಧ ಅನೇಕ ಬಾರಿ ಅಧಿಕಾರಿಗಳಿಗೆ ದೂರು ನೀಡಿದರು ಕ್ರಮ ಕೈಗೊಳ್ಳದೆ ಮೌನವಹಿಸುತ್ತಿದ್ದಾರೆ ಎಂದು ದೂರಿದರು.