ಮನೆ ಸಾಲ ಪಡೆಯಲು ಮುಖ್ಯವಾಗಿ ಅಗತ್ಯ ದಾಖಲೆಗಳನ್ನು ಒದಗಿಸಬೇಕು. ಛಾಯಾಚಿತ್ರದೊಂದಿಗೆ ಆಸ್ತಿ ಖರೀದಿಗೆ ಬೇಕಾದ ಎಲ್ಲಾ ಕಾನೂನು ರೀತಿಯ ದಾಖಲೆಗಳನ್ನು ನೀಡಬೇಕು. ನಿಮ್ಮ ಗುರುತು ಹಾಗೂ ಪ್ರಸ್ತುತ ನಿವಾಸದ ವಿಳಾಸ, ನೌಕರರಾಗಿದ್ದರೆ ಇತ್ತೀಚಿನ ಸಂಬಳದ ಚೀಟಿ, ಉದ್ಯೋಗದಾತರಿಂದ ಪಾಮಾಣಿಸಲ್ಪಟ್ಟ ದಾಖಲೆ, ಸ್ವಯಂ ಉದ್ಯೋಗಿಗಳಾಗಿದ್ದರೆ ಬ್ಯಾಲೆನ್ಸ್ ಶೀಟ್‌ಗೆ ತಾಳೆಯಾಗುವಂತೆ ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್ ಅಗತ್ಯ. ಜೀವ ವಿಮಾ ಪಾಲಿಸಿ, ಶೇರು, ಮ್ಯೂಚುವಲ್ ಫಂಡ್, ಬ್ಯಾಂಕ್ ಠೇವಣಿ ಮತ್ತಿತರ ಪೂರಕ ದಾಖಲೆಗಳಿದ್ದರೆ ಸಾಲ ಪಡೆಯುವುದು ಮತ್ತಷ್ಟು ಸುಲಭವಾಗುತ್ತದೆ. ಇವುಗಳನ್ನು ಭದ್ರತೆಯ ಆಧಾರದ ಮೇಲೆ ಬ್ಯಾಂಕ್‌ಗಳು ಸಾಲ ನೀಡಲು ಮುಂದೆ ಬರುತ್ತವೆ.