ಜಿಲ್ಲೆಯಲ್ಲಿ ಕನ್ಸ್‌ಟ್ರಕ್ಷನ್’ ಟ್ರೆಂಡ್

property
property
Published on
ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ನಿವೇಶನ ಎಲ್ಲಿ ಖರೀದಿಸೋದು, ಖರೀದಿಸಿದರೆ ಆ ಪ್ರಾಪರ್ಟಿ ಲೀಗಲ್ ಆಗಿದೆಯಾ, ನೀರು ಸಿಗುತ್ತಾ, ರಸ್ತೆ ಸಮರ್ಪಕವಾಗಿದೆಯಾ? ಒಳಚರಂಡಿ ವ್ಯವಸ್ಥೆ..ಅರೆ ಮಕ್ಕಳಿಗೆ ಆಟವಾಡಲು ವ್ಯವಸ್ಥೆ ಇದೆಯೋ ಇಲ್ಲವೋ? ವಾಯುವಿಹಾರಕ್ಕೆ ಪಾರ್ಕ್ ಇರುತ್ತಾ? ಹೀಗೆ ಸೌಲಭ್ಯಗಳ ಬಗ್ಗೆ ನಿವೇಶನ ಖರೀದಿದಾರರಿಗೆ ಚಿಂತೆ ಕಾಡುವುದು ಸಾಮಾನ್ಯ. ಆದರೆ ಇದೆಲ್ಲ ಚಿಂತೆಗಳನ್ನು ದೂರವಿಡಿ. ನೇರವಾಗಿ ಬಂದು ಸೈಟು ಖರೀದಿಸಿ ನೀವು ಬಯಸಿದ್ದಕ್ಕಿಂತ ಹೆಚ್ಚಿನದೇ ಸೌಲಭ್ಯಗಳೊಂದಿಗೆ ಕೈಕೆಟುವ ದರದಲ್ಲಿ ನಿಮ್ಮ ಕನಸಿನ ಮನೆ ನಿರ್ಮಿಸಿಕೊಳ್ಳಿ....
ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕು ವ್ಯಾಪ್ತಿಯಲ್ಲಿ ಚುರುಕು ಪಡೆದಿರುವ ಲ್ಯಾಂಡ್ ಡೆವಲಪರ್ಸ್‌ಗಳ ೋಷವಾಕ್ಯವಾಗಿದೆ. ‘ರೆಡಿ ಪಾರ್ ಕನ್ಸರ್ಟಕ್ಷನ್’ ಸ್ಲೋಗನ್‌ನೊಂದಿಗೆ ವಿವಿಧ ಡೆವಲಪರ್ಸ್‌ಗಳು ನಿವೇಶನ ನಿರ್ಮಾಣಕ್ಕೆ ಮುಂದಾಗಿವೆ. ನಿವೇಶನ ಖರೀದಿಸಿ ಇಲ್ಲಿ ನೀರು, ಚರಂಡಿ, ವಿದ್ಯುತ್ ಮತ್ತಿತರ ಸೌಲಭ್ಯಗಳಿಗೆ ದಶಕಗಳ ಕಾಲ ಕಾಯುವ ಚಿಂತೆಯೇ ಇಲ್ಲ ‘ರೆಡಿ ಾರ್ ಕನ್ಸ್‌ಟ್ರಕ್ಷನ್’ ಅಂದರೆ ನಿವೇಶನ ಖರೀದಿಸಿ ಕೂಡಲೇ ನಿಮ್ಮ ಕನಸಿನ ಮನೆ ನಿರ್ಮಾಣಕ್ಕೆ ಯಾವುದೇ ಅಡೆತಡೆ ಇಲ್ಲ ಎಂಬುದು ಲೇಔಟ್ ನಿರ್ಮಾಣದ ಸಂಸ್ಥೆಗಳ ಭರವಸೆಯಾಗಿದೆ.
ಉಡುಗೊರೆಯ ಆಕರ್ಷಣೆ:
ರಾಜ್ಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಹಲವು ಡೆವಲಪರ್ಸ್‌ಗಳು ವಿವಿಧ ಉಡುಗೊರೆಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿವೆ. ನಿವೇಶನ ಖರೀದಿಸಿದರೆ ಚಿನ್ನದ ಬಿಸ್ಕೆಟ್, ದೇವರ ಬೆಳ್ಳಿಯ ವಿಗ್ರಹ ಸೇರಿ ಹಲವು ಬಗೆಯ ಆರ್‌ಗಳನ್ನು ನೀಡುತ್ತಿವೆ. ಸ್ಥಳದಲ್ಲೇ ನಿವೇಶನ ನೋಂದಣಿ ಜತೆಗೆ ಗ್ರಾಹಕರು ಇಚ್ಚಿಸಿದ ಬ್ಯಾಂಕ್‌ಗಳಲ್ಲಿ ಸಾಲಸೌಲಭ್ಯ ಒದಗಿಸುವ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುತ್ತಿವೆ. ನಿವೇಶನದ ಇ.ಸಿ ಯಿಂದ ಇಡಿದು ಎಲ್ಲ ದಾಖಲೆ ಪತ್ರಗಳ ಲೀಗಲ್ ಸಲಹೆಯನ್ನು ಸ್ಥಳದಲ್ಲೇ ದೊರಕಿಸಿಕೊಡುವ ಮೂಲಕ ಗ್ರಾಹಕರ ವಿಶ್ವಾಸ ಗಿಟ್ಟಿಸುತ್ತಿವೆ. ಕೆಲವೊಬ್ಬ ಡೆವಲಪರ್ಸ್‌ಗಳು ಲಾಟರಿ ಮೂಲಕ ಉಚಿತವಾಗಿ ನಿವೇಶನ ನೀಡುವ ಮಟ್ಟದಲ್ಲಿ ಗ್ರಾಹಕರ ಒಲವು ಗಿಟ್ಟಿಸುವ ಪ್ರಯತ್ನ ನಡೆಯುತ್ತಿದೆ. ಸಕಲ ಮೂಲಸೌಕರ್ಯದೊಂದಿಗೆ ಡಿಸಿ ಕನ್ವರ್ಷನ್ ಹಾಗೂ ಸ್ಥಳೀಯ ಸಂಸ್ಥೆಗಳ ಅನುಮತಿಯೊಂದಿಗೆ ಡೆವಲಪ್ ಆಗಿರುವ ನಿವೇಶನಗಳನ್ನು ಕೈಗೆಟುವ ದರದಲ್ಲಿ ವಿತರಿಸಲು ಹಲವು ಡೆವಲಪರ್ಸ್‌ಗಳು ಮುಂದಾಗಿದ್ದು, ಗ್ರಾಹಕರ ಆಯ್ಕೆಗೆ ಬಿಟ್ಟಿವೆ. ರಿಯಾಲ್ಟಿ ಕ್ಷೇತ್ರದಲ್ಲಿ ನಾಗಾಲೋಟದಲ್ಲಿ ಸಾಗಿರುವ ಪ್ರಾಪರ್ಟಿ ಹೂಡಿಕೆದಾರರಿಗೆ ರತ್ನಗಂಬಳಿ ಹಾಸಲಿರುವ ನಿರೀಕ್ಷೆ ಹಾಗೂ ಭರವಸೆಯೊಂದಿಗೆ ನಿವೇಶನಗಳ ಹಂಚಿಕೆ ಜಿಲ್ಲೆಯಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿವೆ.
ಮನೆ ಕನಸಿಗೆ ಡೆವಲಪರ್ಸ್‌ಗಳ ಇಂಬು:
ಎಲ್ಲರಿಗೂ ಮನೆ ನಿರ್ಮಿಸಬೇಕು, ಇಚ್ಚೆಯಂತಾ ಗೂಡಿನಲ್ಲಿ ವಾಸ್ತವ್ಯ ಹೂಡಬೇಕೆಂಬ ಹಂಬಲ ಇದ್ದೇ ಇರುತ್ತದೆ. ಇಂಥವರ ಅಭಿರುಚಿಗೆ ತಕ್ಕಂತೆಯೇ ರೂಪುಗೊಳಿಸುವ ಪ್ರಾಪರ್ಟಿ ಮಾಲೀಕರು ಗ್ರಾಹಕರನ್ನು ಸ್ವಾಗತಿಸುತ್ತಿದೆ. ನೆಲಮಂಗಲ ಟೂ ಕುಣಿಗಲ್ ರಸ್ತೆ, ದೊಡ್ಡಬಳ್ಳಾಪುರ ಟೂ ನೆಲಮಂಗಲ, ದೇವನಹಳ್ಳಿ ಟೂ ಹೊಸಕೋಟೆ ರಸ್ತೆಗಳು ಪ್ರಮುಖವಾಗಿ ರಿಯಾಲ್ಟಿ ಕ್ಷೇತ್ರದಲ್ಲಿ ದೊಡ್ಡಮಟ್ಟದಲ್ಲಿ ಚಟುವಟಿಕೆಗಳು ಚುರುಕುಗೊಂಡಿವೆ. ದೇವನಹಳ್ಳಿ ಏರ್‌ಪೋರ್ಟ್ ನಿರ್ಮಾನದ ಬಳಿಕ ಈ ಭಾಗದಲ್ಲಿನ ನಿವೇನಗಳ ದರ ಗಗನಮುಖಿಯಾಗಿವೆ, ಗಗನಚುಂಬಿ ಅಪಾರ್ಟ್‌ಮೆಂಟ್‌ಗಳು ಗ್ರಾಹಕರನ್ನು ಕೈಬೀಸಿ ಕರೆಯುತ್ತಿವೆ. ನಗರ ಹಾಗೂ ಪಟ್ಟಣ ಪ್ರದೇಶಗಳ ಕೂಗಳತೇ ದೂರದಲ್ಲೇ ನಿರ್ಮಾಣವಾಗಿರುವ ನಿವೇಶನಗಳು ಮಾರಾಟಕ್ಕೆ ಸಿದ್ದವಾಗಿವೆ. ನಿವೇಶನ ಖರೀದಿಗೆ ಬಡ್ಡಿರಹಿತ ಸಾಲ, ಸುಲಭ ಕಂತುಗಳ ಸೌಲಭ್ಯವನ್ನು ಕಲ್ಪಿಸಲಾಗಿದೆ.
ನೆಲಮಂಗಲ ರಸ್ತೆಯಲ್ಲಿ ರಿಯಾಲ್ಟಿ:
ನೆಲಮಂಗಲ ಮತ್ತು ಯಶವಂತಪುರ ಜಂಕ್ಷನ್‌ವರೆಗೆ ಎಲೆವೇಟೆಡ್ ಹೈವೆಯಿಂದಾಗಿ ಈ ಭಾಗದಲ್ಲಿ ಪ್ರಾಪರ್ಟಿಗೆ ಬಹಳ ಬೇಡಿಕೆ ಕುದುರಿದೆ. ಹೆದ್ದಾರಿಯುದ್ದಕ್ಕೂ ರಿಯಾಲ್ಟಿ ಅಭಿವೃದ್ಧಿಯಾಗತೊಡಗಿದೆ. ಮನೆ ನಿರ್ಮಾಣಕ್ಕೆ ಯೋಗ್ಯವಾದ ನಿವೇಶನಗಳು ಹಾಗೂ ಭವಿಷ್ಯದಲ್ಲಿ ಅತ್ಯುತ್ತಮ ಲಾಭಗಳಿಕೆಗೂ ಇಲ್ಲಿನ ನಿವೇಶನಗಳು ವರದಾನವಾಗಲಿವೆ ಎಂಬುದು ಡೆವಲಪರ್ಸ್‌ಗಳ ಬಲವಾದ ಭರವಸೆಯಾಗಿದೆ. ಬೆಂಗಳೂರಿನಿಂದ ಕೇವಲ 40 ಕಿ.ಮೀ ಆಸುಪಾಸಿನಲ್ಲಿರುವ ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಲೇಔಟ್ ನಿರ್ಮಾಣವಾಗಿದ್ದು ಹೂಡಿಕೆದಾರರನ್ನು ಕೈಬೀಸಿ ಕರೆಯುತ್ತಿದೆ.
ಸೌಲಭ್ಯಗಳೇ ಇಲ್ಲಿನ ಪ್ರಮುಖ ಆಕರ್ಷಣೆ:
ಸಾಮಾನ್ಯವಾಗಿ ನಿವೇಶನ ಕೊಳ್ಳುವವರಿಗೆ ಅದು ಅಭಿವೃದ್ಧಿಯಾಗುವುದು ಯಾವಾಗ ಎಂಬ ಚಿಂತೆ ಕಾಡುವುದು ಸಹಜ. ಆದರೆ ಇಂಥ ಚಿಂತೆಯನ್ನು ಇಲ್ಲಿನ ಡೆವಲಪರ್ಸ್‌ಗಳು ದೂರಮಾಡಿವೆ. ಲೇಔಟ್‌ನಲ್ಲಿ ವಿಶಾಲವಾದ ರಸ್ತೆಗಳು, ಒಳಚರಂಡಿ ವ್ಯವಸ್ಥೆ, ವಿದ್ಯುತ್ ಸೌಲಭ್ಯ, ಪ್ರತಿನಿವೇಶನಕ್ಕೂ ಸಮರ್ಪಕ ಜಾಗ ವೆಂಟಿಲೇಷನ್, ಸೆಕ್ಯೂರಿಟಿ ವ್ಯವಸ್ಥೆ, ಲೇಔಟ್ ತುಂಬೆಲ್ಲಾ ಸಿಸಿ ಕ್ಯಾಮಾರಗಳ ಕಣ್ಗಾವಲು, ದಿನದ 24 ಗಂಟೆ ನೀರಿನ ವ್ಯವಸ್ಥೆ ಇದರೊಂದಿಗೆ ಲೇಔಟ್ ಸುತ್ತಲೂ 300 ಹೆಚ್ಚು ಸಸಿಗಳ ಅಭಿವೃದ್ದಿಯಿಂದ ಉತ್ತಮ ವಾತಾವರಣ ನಿರ್ಮಾಣ ಮಾಡಿರುವುದು ಇಲ್ಲಿನ ವಿಶೇಷಗಳಲ್ಲೊಂದಾಗಿದೆ. ಮಕ್ಕಳ ಆಟಕ್ಕೆ ಆಟೋಪಕರಣ, ವಾಯುವಿಹಾರಿಗಳಿಗೆ ಪಾರ್ಕ್, ಲೇಔಟ್ ನಿವಾಸಿಗಳ ಸಾಂಸ್ಕೃತಿಕ ಹಾಗೂ ವಯಕ್ತಿಯ ಕಾರ್ಯಕ್ರಮಗಳ ಆಯೋಜನೆಗಾಗಿಯೇ ರಂಗಮಂದಿರ ಹೀಗೆ ಹಲವು ವಿಶೇಷತೆಗಳಿಂದ ಹೂಡಿಕೆದಾರರ ಆಕರ್ಷಣೆಗೆ ಪಾತ್ರವಾಗಿದೆ.
ಕೈಗೆಟುವ ದರದಲ್ಲಿ ನಿವೇಶನ:
ಯಾವುದೇ ಹೊರವಲಯದಲ್ಲಿ ನಿವೇಶನ ಖರೀದಿಸಿ ಅವುಗಳ ಅಭಿವೃದ್ಧಿಗೆ ದಶಕಗಳ ಕಾಲ ಕಾಯುವ ತಾಪತ್ರಾಯವೂ ಇಲ್ಲ.ನಗರ ಹಾಗೂ ಪಟ್ಟಣ ಪ್ರದೇಶಗಳ ಕೂಗಳತೆ ಅಂತರದಲ್ಲೆ ನಿವೇಶನ ನಿರ್ಮಾಣವಾಗಿರುವುದು ವಾಸಯೋಗ್ಯಕ್ಕೆ ಅನುಕೂಲವಾಗಿದೆ. ಆಕರ್ಷಕಬೆಲೆಗಳೊಂದಿಗೆ ಜನಸಾಮಾನ್ಯರ ಆರ್ಥಿಕ ಬಲಕ್ಕೆ ಅನುಗುಣವಾಗಿ ನಿವೇಶನ ಹಂಚಿಕೆ ಶುರುವಾಗಿದೆ. ತಕ್ಷಣವೇ ನೋಂದಣಿಯಾಗುವ ಎಲ್ಲ ಬಗೆಯ ಲೀಗಲ್ ದಾಖಲೆಗೊಳೊಂದಿಗೆ ನಿಮ್ಮ ಕನಸಿನ ಮನೆ ನಿರ್ಮಾಣದ ನಿವೇಶನ ಖರೀದಿಗೆ ವಿವಿಧ ಡೆವಪರ್ಸ್‌ಗಳು ಸ್ವಾಗತ ಕೋರುತ್ತಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net