ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು ಸೆ.24 ರಂದು ಕರಡು ಮತದಾರರ ಪಟ್ಟಿ ಪ್ರಕಟಗೊಂಡಿದ್ದು ಕರಡು ಮತದಾರರ ಪಟ್ಟಿಯಲ್ಲಿ 7,96,138 ಮತದಾರರ ಹೆಸರಿದೆ. ಅರ್ಹ ಮತದಾರರು ಪಟ್ಟಿಯಲ್ಲಿ ಬಿಟ್ಟು ಹೊಗಿದ್ದರೆ ೆ ಸೂಕ್ತ ದಾಖಲೆಗಳನ್ನು ಒದಗಿಸಿ. ದಾಖಲೆಗಳನ್ನು ಪರಿಶೀಲಿಸಿ ಹೆಸರು ಸೇರ್ಪಡೆ ಮಾಡಲಾಗುವುದು ಎಂದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಾಲ್ಕು ಮತ ಕ್ಷೇತ್ರಗಳಲ್ಲಿ ಫಾಮ್ರ್ 6 ಮೂಲಕ 764 ಹಕ್ಕುಗಳು, 677 ಹೊಸ ಯುವ ಮತದಾರರ ಸೇರ್ಪಡೆ ಅರ್ಜಿ ಸೇರಿ 1441 ಫಾಮ್ರ್ 6 ಮೂಲಕ ಅರ್ಜಿ ಸ್ವೀಕರಿಸಲಾಗಿದೆ. ಫಾಮ್ರ್ 7 ರಲ್ಲಿ 6, ಫಾಮ್ರ್ 8 ರಲ್ಲಿ 1169 ಅರ್ಜಿ ಸ್ವೀಕರಿಸಲಾಗಿದೆ ಎಂದು ಡಿಸಿ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಮ್ಯಾಪಿಂಗ್ ಆಗದಿರುವ, ಪಟ್ಟಿಯಲ್ಲಿ ಹೆಸರು, ವಿಳಾಸ, ಇನ್ನಿತರೆ ತಿದ್ದುಪಡಿಗಳಿರುವ 56349 ಮಂದಿಗೆ ನೋಟಿಸ್ ನೀಡಲಾಗುತ್ತಿದೆ. ಪ್ರಸ್ತುತ 22,791 ಜನರಿಗೆ ನೋಟಿಸ್ ನೀಡಲಾಗಿದ್ದು, ಉಳಿದ ನೋಟಿಸ್ಗಳನ್ನು ನೀಡಲಾಗುತ್ತಿದೆ ಎಂದರು.