ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ 144 ಗ್ರಾಮಗಳಲ್ಲಿಯೂ ವಿಶೇಷ ಸಭೆಗಳ ಮೂಲಕ ಯುವಕರನ್ನು ತಲುಪಿ, ಹಣದ ಸಮರ್ಪಕ ವಿನಿಯೋಗ, ಕೈಗೆಟುಕುವ ಖರ್ಚುವೆಚ್ಚಗಳು, ಕೈಸಾಲದ ಅಪಾಯಗಳು, ಆದಾಯಕ್ಕೂ ಮೀರಿ ಹಣದ ಬಳಕೆಯಂತಹ ಚಟುವಟಿಕೆಗಳ ಬಗ್ಗೆಯೂ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಸಂಜೆ ವೇಳೆಯಲ್ಲಿ ಗ್ರಾಮದ ಪ್ರಮುಖ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಗ್ರಾಮದ ಪ್ರಮುಖದ ಸಹಕಾರದೊಂದಿಗೆ ವಿಶೇಷ ಜಾಗೃತಿ ಮೂಡಿಸಲಾಗುತ್ತಿದೆ. ಜತೆಗೆ ಆಯಾ ವ್ಯಾಪ್ತಿಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೂ ಮಾದಕ ವಸ್ತುಗಳ ಬಳಕೆ, ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಮಕ್ಕಳಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಯುತ್ತಿದೆ.