ಗ್ರಾಮೀಣದಲ್ಲಿ ಕ್ರೀಡೆ ಆಯೋಜಿಸಿ Cricket

ದೇವನಹಳ್ಳಿಯಲ್ಲಿ ಆಯೋಜಿಸಿದ್ದ Cricket ವಹ್ನಿಕುಲ ತಿಗಳ ಪ್ರೀಮಿಯರ್​ ಲೀಗ್​ ಕ್ರಿಕೆಟ್​ ವಿಜೇತ ತಂಡಕ್ಕೆ ಶ್ರೀ ಕೃಷ್ಣಪಾಂಡವ ತಿಗಳ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಾ.ಎನ್​.ಚಂದ್ರಶೇಖರ್​ ಬಹುಮಾನ ವಿತರಿಸಿದರು.
ದೇವನಹಳ್ಳಿಯಲ್ಲಿ ಆಯೋಜಿಸಿದ್ದ Cricket ವಹ್ನಿಕುಲ ತಿಗಳ ಪ್ರೀಮಿಯರ್​ ಲೀಗ್​ ಕ್ರಿಕೆಟ್​ ವಿಜೇತ ತಂಡಕ್ಕೆ ಶ್ರೀ ಕೃಷ್ಣಪಾಂಡವ ತಿಗಳ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಾ.ಎನ್​.ಚಂದ್ರಶೇಖರ್​ ಬಹುಮಾನ ವಿತರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ವಹ್ನಿಕುಲ ಕ್ಷತ್ರಿಯ ತಿಗಳರ ಜನಾಂಗದ ಮುಖಂಡ ಡಾ. ಎನ್​. ಚಂದ್ರಶೇಖರ್​ ಸಲಹೆ
ದೇವನಹಳ್ಳಿ: ಸೋಲು &ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. Cricket ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. ಒಬ್ಬರು ಸೋತರೆ ಇನ್ನೊಬ್ಬರು ಗೆಲ್ಲಲು ಸಾಧ್ಯ ಎಂದು ವಹ್ನಿಕುಲ ಕ್ಷತ್ರಿಯ ತಿಗಳರ ಜನಾಂಗದ ಮುಖಂಡ ಡಾ. ಎನ್​. ಚಂದ್ರಶೇಖರ್​ ಹೇಳಿದರು.
ಪಟ್ಟಣದಲ್ಲಿ ವಹ್ನಿಕುಲ ತಿಗಳ ಪ್ರೀಮಿಯರ್​ ಲೀಗ್​ ತಾಲೂಕು ಕ್ರಿಕೆಟ್​ ಪಂದ್ಯಾವಳಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಿ ಮಾತನಾಡಿದರು. ಕ್ರೀಡೆಯಲ್ಲಿ ಹೆಚ್ಚು ಭಾಗವಹಿಸುವುದರಿಂದ ಸುಸ್ಥಿರ ಆರೋಗ್ಯ ಇರುತ್ತದೆ. ಗ್ರಾಮೀಣ ಭಾಗಗಳಲ್ಲಿ ಪಂದ್ಯಾವಳಿ ಆಯೋಜಿಸುವುದರಿಂದ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡುವಂತಾಗುತ್ತದೆ ಎಂದರು.
ಮೌಕ್ತಿಕಾಂಭ ದೇವಾಲಯ ಸಮಿತಿ ಮಾಜಿ ಅಧ್ಯಕ್ಷ ಎಸ್​.ಆರ್​.ವಿಜಯಕುಮಾರ್​ ಮಾತನಾಡಿ, ತಾಲೂಕಿನಿಂದ ಒಟ್ಟು 10 ತಂಡಗಳ ಪೈಕಿ ಅಂತಿಮವಾಗಿ ದೇವನಹಳ್ಳಿಯ ವಹ್ನಿರಾಯ ವಾರಿಯರ್ಸ್​ ಹಾಗೂ ಧರ್ಮರಾಯಸ್ವಾಮಿ ವಾರಿಯರ್ಸ್​ ಯುವಕರ ತಂಡ ಫೈನಲ್​ನಲ್ಲಿ ಪ್ರಥಮ ಮತ್ತು ದ್ವೀತಿಯ ಸ್ಥಾನವನ್ನು ಪಡೆದು ವಿಜೇತರಾಗಿದ್ದು, ವಿಜೇತ ತಂಡಗಳಿಗೆ ಪ್ರಥಮ ಬಹುಮಾನವಾಗಿ 50 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ, ದ್ವೀತಿಯ 25 ಸಾವಿರ ನಗದು ಮತ್ತು ಆಕರ್ಷಕ ಟೋಫಿ ನೀಡಿ ಪ್ರೋತ್ಸಾಹಿಸಲಾಗಿದೆ ಎಂದರು.
ಪುರಸಭೆ ಸದಸ್ಯ ಎಸ್​.ಸಿ.ಚಂದ್ರಪ್ಪ, ಶ್ರೀ ಕೃಷ್ಣಪಾಂಡವ ತಿಗಳ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಾ.ಎನ್​.ಚಂದ್ರಶೇಖರ್​, ತಿಗಳರ ಸಂಘದ ತಾಲೂಕು ಅಧ್ಯಕ್ಷ ವಿ.ಗೋಪಾಲಕೃಷ್ಣ, ದೇವಾಲಯ ಸಮಿತಿ ಅಧ್ಯಕ್ಷ ಎಸ್​.ಸಿ. ನಾಗರಾಜ್​, ಮಾಜಿ ಅಧ್ಯಕ್ಷ ಎಸ್​.ಆರ್​. ವಿಜಯಕುಮಾರ್​, ಯುವಕ ಸಂಘದ ನವೀನ್​, ಡಿ.ಸಿ.ಕಿಶೋರ, ವಸಂತ, ಡಿ.ಸಿ.ರಂಜನ್​ ಇದ್ದರು.
ವಹ್ನಿಕುಲ ಕ್ಷತ್ರೀಯ ತಿಗಳ ಮಹಾಸಭಾದ ರಾಜ್ಯಾಧ್ಯಕ್ಷ ಸುಬ್ಬಣ್ಣ, ರಾಜ್ಯ ವಹ್ನಿಕುಲಕ್ಷತ್ರಿಯ ತಿಗಳರ ಸಂಘದ ಉಪಾಧ್ಯಕ್ಷ ವೈ.ಎಂ. ಶಾಮಣ್ಣ, ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಧರ್​, ನಿರ್ದೇಶಕ ಮುನಿವೀರಣ್ಣ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net