ನಿರಂತರದ ಕೆಲಸವೇನು? ಎಲ್ಲ ಸರ್ಕಾರಿ ಶಾಲಾ ಶಿಕ್ಷಕರಿಗೆ ಶಿಕ್ಷಣ ಇಲಾಖೆಯಿಂದ ಅನುಷ್ಠಾನಗೊಳಿಸಿರುವ ನಿರಂತರ ಆ್ಯಪ್ ಒದಗಿಸಲಾಗಿದ್ದು, ಆಯಾ ತರಗತಿಯ ಶಿಕ್ಷಕರು ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಮೊದಲು ಸ್ವಯಂ ನೋಂದಣಿ ಮಾಡಿಕೊಳ್ಳಬೇಕು. ಬಳಿಕ, ಆಯಾ ತರಗತಿಯ ಪ್ರತಿ ವಿದ್ಯಾರ್ಥಿಗಳ ಮುಖವನ್ನು ಎಡ, ಬಲ ಮತ್ತು ಮುಂದಿನಿಂದ ಮೂರು ವಿಧವಾಗಿ ಆ್ಯಪ್‌ನಲ್ಲಿ ಸೆರೆಹಿಡಿದು ನೋಂದಣಿ ಮಾಡಿಕೊಳ್ಳಬೇಕು. ಶಿಕ್ಷಕರು ಆಯಾ ತರಗತಿಯಲ್ಲಿನ ಎಲ್ಲ ಮಕ್ಕಳ ಭಾವಚಿತ್ರವನ್ನು ಆ್ಯಪ್‌ನಲ್ಲಿ ಸೆರೆ ಹಿಡಿಯುತ್ತಿದ್ದಂತೆ, ಎಐ ತಂತ್ರಜ್ಞಾನ ಮೂಲಕ ಆಯಾ ಮಕ್ಕಳ ಮುಖ ಗುರುತಿಸಿ ಹಾಜರಾತಿ ಯನ್ನು ಇಲಾಖೆಯ ತಂತ್ರಾಂಶಕ್ಕೆ ಸೇರುವ ಮೂಲಕ ಹಾಜರಾತಿ ಪರಿಗಣಿಸುತ್ತದೆ.