ಬಾಲಮಂದಿರ ಬಾಲಕನಿಗೆ ಹೊಸ ಜೀವನ

new life of student
new life of student
Published on
ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ತಂದೆ-ತಾಯಿ ಅಕಾಲಿಕ ಮರಣದಿಂದ ಬಾಲಕನೊಬ್ಬ ಖಿನ್ನತೆಗೊಳಗಾಗಿ ಶೈಕ್ಷಣಿಕ ಭವಿಷ್ಯವೇ ಮಣ್ಣುಪಾಲಾಗುತ್ತಿದ್ದಂತ ವಿಷಯ ಪರಿಸ್ಥಿತಿಯಲ್ಲಿ ಜಿಲ್ಲೆಯ ಬಾಲಮಂದಿರ ಈತನಿಗೆ ಆಶ್ರಯ ಕಲ್ಪಿಸಿತು. ಇದರ ಲವಾಗಿ ಇದೇ ಬಾಲಕ ಪಿಯು ಪರೀಕ್ಷೆಯಲ್ಲಿ ಶೇ.95 ಅಂಕಗಳೊಂದಿಗೆ ತೇರ್ಗಡೆಯಾಗಿ ಹೊಸ ಭವಿಷ್ಯ ರೂಪಿಸಿಕೊಳ್ಳುವತ್ತ ಹೆಜ್ಜೆ ಹಾಕುತ್ತಿದ್ದಾನೆ.
ನೆಲಮಂಗಲ ಮೂಲದ ಲಕ್ಷ್ಮಿಕಾಂತ್ ಹಾಗೂ ಸೌಭಾಗ್ಯಮ್ಮ ದಂಪತಿ ಪುತ್ರ ಧನುಷ್ ಎಂಬುವರೇ ಸಂದರ್ಭದ ಸುಳಿಗೆ ಸಿಲುಕಿ ಕಮರಿಹೋಗುತ್ತಿದ್ದ ಪ್ರತಿಭೆ. 2021 ರಲ್ಲಿ ತಂದೆ ಹಾಗೂ 2024 ರಲ್ಲಿ ತಾಯಿಯನ್ನು ಕಳೆದುಕೊಂಡ ಧನುಷ್‌ನ್ನು ಸಂಬಂಧಿಕರು ಯಾರೂ ಈತನಿಗೆ ಆಶ್ರಯ ನೀಡಲು ಮುಂದೆ ಬರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ಬಾಲಕನ ತಂದೆಯ ಸ್ನೇಹಿತರು ನೆಲಮಂಗಲ ಪೊಲೀಸರ ಮೂಲಕ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಸುಪರ್ಧಿಗೆ ಕಳುಹಿಸಿಕೊಟ್ಟರು. ಇಲ್ಲಿಂದ ಈತನಿಗೆ ಸರ್ಕಾರಿ ಬಾಲಕರ ಬಾಲಮಂದಿರದ ಆಶ್ರಯ ಕಲ್ಪಿಸಲಾಯಿತು.
ವಿದ್ಯಾಭ್ಯಾಸಕ್ಕೆ ಸಾಥ್ ನೀಡಿದ ಸಿಬ್ಬಂದಿ:
ಖಿನ್ನತೆಗೆ ಒಳಗಾಗಿದ್ದ ಬಾಲಕನಿಗೆ ಈ ಸಂಸ್ಥೆಯಿಂದ ಮಾನಸಿಕ ಸ್ಥೈರ್ಯ, ಆತ್ಮವಿಶ್ವಾಸ ತುಂಬಿ, ವಿದ್ಯಾಭ್ಯಾಸ ಮುಂದುವರೆಸಲು ಸಹಕಾರ ನೀಡಲಾಯಿತು. ಬಾಲಕನು ಈ ಸಂಸ್ಥೆಗೆ ದಾಖಲಾಗುವ ಮುನ್ನ ನೆಲಮಂಗಲ ತಾಲೂಕಿ ಕದಂಬ ಕಾಲೇಜಿನಲ್ಲಿ ಕಾಮರ್ಸ್ ವಿಭಾಗದಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ. ತಾಯಿಯ ಮರಣದಿಂದ ಕೆಲವು ತಿಂಗಳು ವಿದ್ಯಾಭ್ಯಾಸ ನಿಲ್ಲಿಸಿದ್ದ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸಹಯೋಗದಲ್ಲಿ ದೇವನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ದಾಖಲು ಮಾಡಲಾಯಿತು. ಬಾಲಕನ ಸತತ ಪರಿಶ್ರಮ ಹಾಗೂ ಸಂಸ್ಥೆಯ ಸಿಬ್ಬಂದಿ ಸಹಕಾರದಿಂದ ಪ್ರಥಮ ಪಿಯುಸಿಯಲ್ಲಿ ಶೇ.92.80 ಅಂಕ ಪಡೆದಿದ್ದ. ಇದೇ ಏಕಾಗ್ರತೆ ಲವಾಗಿ ದ್ವಿತೀಯ ಪಿಯುಸಿಯಲ್ಲಿ ಶೇ.95 ಅಂಕಗಳಿಸಿರುವುದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸರ್ಕಾರಿ ಬಾಲಕರ ಬಾಲಮಂದಿರ ಸಿಬ್ಬಂದಿಗೆ ಹರ್ಷ ತಂದಿದೆ.
ಬಾಲಕ ಈ ಸಂಸ್ಥೆಗೆ ದಾಖಲಾದ ನಂತರ, ಇಲ್ಲಿನ ಆಪ್ತ ಸಮಾಲೋಚನೆಯಲ್ಲಿ ಪಿಯುಸಿ ನಂತರ ಚಾರ್ಟರ್ಡ್ ಅಕೌಂಟೆಂಸಿ ಮಾಡುವ ಹಂಬಲ ವ್ಯಕ್ತಪಡಿಸಿದ್ದ. ಇದೇ ಕಾರಣಕ್ಕಾಗಿ ಬಾಲಕನಿಗೆ ಆಸಕ್ತಿ ಮೂಡಿಸಲು ಹಾಗೂ ಹೆಚ್ಚಿನ ಶ್ರಮ ವಹಿಸಿ ವ್ಯಾಸಂಗದ ಮಾಡಲು ಆತ್ಮವಿಶ್ವಾಸ ತುಂಬಲಾಯಿತು. ಪ್ರಸ್ತುತ ಪಿಯುಸಿ ಫಲಿತಾಂಶದ ನಂತರ, ಚಾರ್ಟರ್ಡ್ ಅಕೌಂಟೆಂಸಿ ವ್ಯಾಸಂಗ ಮಾಡಲು ಇಚ್ಛಿಸಿದ್ದಾನೆ. ಈ ಸಂಬಂಧ ಬಾಲಕನಿಗೆ ಕೋರ್ಸ್ ತೆಗೆದುಕೊಳ್ಳಲು ಕೈಗೊಳ್ಳಬೇಕಾಗಿರುವ ಕ್ರಮಗಳು, ಲಭ್ಯವಿರುವ ಕಾಲೇಜುಗಳ ಮಾಹಿತಿ ತಿಳಿಸಲು ಆಪ್ತ ಸಮಾಲೋಚನೆ ಮಾಡಿಸಲಾಗಿದೆ. ಇಲಾಖೆಯ ಮುಖ್ಯಸ್ಥರು, ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಮಕ್ಕಳ ಕಲ್ಯಾಣ ಸಮಿತಿ ಸಹಯೋಗದೊಂದಿಗೆ ಪ್ರಸ್ತುತ ಬಾಲಕನ ಆಶಯದಂತೆ (ಇ.ಅ) ಕೋರ್ಸ್ ದಾಖಲಾತಿ ಪಡೆಯಲು ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಅನಿತಾ ಲಕ್ಷ್ಮಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಬೆಂ.ಗ್ರಾಮಾಂತ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net