

ಪ್ರಮುಖ ಮುಖ್ಯಾಂಶಗಳು
ಪೌರಾಣಿಕ ನಾಟಕಗಳನ್ನು ನೋಡುವುದರಿಂದ ಜೀವನದಲ್ಲಿ ಬದುಕಿನ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಿ ಬದುಕಲು ಸಾಧ್ಯ ಎಂದು ಗ್ರಾಮಾಂತರ ಜಿಲ್ಲಾ ರಂಗ ಕಲಾವಿದರ ಸಂಘದ ಗೌರವಾಧ್ಯಕ್ಷ ಕಂಠನಕುಂಟೆ ಕೃಷ್ಣ್ಣಮೂರ್ತಿ ತಿಳಿಸಿದರು.
ನಗರದ ಶ್ರೀನಿವಾಸ ಸಮುದಾಯ ಭವನದ ಮುಂಭಾಗದಲ್ಲಿ ಶ್ರೀ ರಾಮಾಂಜನೇಯ ರಂಗಕಲಾ ವೇದಿಕೆ ಹಾಗೂ ಶ್ರೀ ನೀಲಕಂಠೇಶ್ವರ ಕಲಾ ಟ್ರಸ್ಟ್ ಉದ್ಘಾಟನೆ ಹಾಗೂ ಗೌರಿ ಗಣೇಶ ಹಬ್ಬದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಶ್ರೀ ರಾಮಾಂಜನೇಯ ರಂಗಕಲಾ ವೇದಿಕೆ ಹಾಗೂ ಶ್ರೀ ನೀಲಕಂಠೇಶ್ವರ ಕಲಾ ಟ್ರಸ್ಟ್ ಉದ್ಘಾಟನೆ ಹಾಗೂ ಗೌರಿ ಗಣೇಶ ಹಬ್ಬದ ಪ್ರಯುಕ್ತ ಅ.29ರಿಂದ ಸೆ.27ರವರೆಗೂ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ. ಸಂಘಗಳ ಉದ್ಘಾಟನೆ ಪ್ರಯುಕ್ತ ಮುನಿರಾಜು ಅವರ ನಿರ್ದೇಶನದಲ್ಲಿ "ದಕ್ಷಯಾಗ ಅಥವಾ ದಾಕ್ಷಾಯಿಣಿ ಅಗ್ನಿ ಪ್ರವೇಶ' ನಾಟಕವನ್ನು ಶ್ರೀ ನೀಲಕಂಠೇಶ್ವರ ಕಲಾ ಟ್ರಸ್ಟ್ನ ಮೈಲನಹಳ್ಳಿ ಕಲಾವಿದರು ಪ್ರದರ್ಶಿಸಿದರು.