ಕಾಶಿ ದರ್ಶನದ ಕನವರಿಕೆಯಲ್ಲೇ ಹೊಯ್ತು ಪ್ರಾಣ

 ವಾರಾಣಸಿ ಪ್ರವಾಸಕ್ಕಾಗಿ ತೆರಳುವ ಮುನ್ನ ಟಿಟಿ ಮುಂದೆ ಗ್ರೂಪ್​ ಫೋಟೋ ತೆಗೆಸಿಕೊಂಡಿದ್ದ ತಿಪಟೂರು ವಿದ್ಯಾನಗರದ ಸ್ತ್ರೀಶಕ್ತಿ ಸಂಘದ ಮಹಿಳೆಯರು.
ವಾರಾಣಸಿ ಪ್ರವಾಸಕ್ಕಾಗಿ ತೆರಳುವ ಮುನ್ನ ಟಿಟಿ ಮುಂದೆ ಗ್ರೂಪ್​ ಫೋಟೋ ತೆಗೆಸಿಕೊಂಡಿದ್ದ ತಿಪಟೂರು ವಿದ್ಯಾನಗರದ ಸ್ತ್ರೀಶಕ್ತಿ ಸಂಘದ ಮಹಿಳೆಯರು.
Published on

ಪ್ರಮುಖ ಮುಖ್ಯಾಂಶಗಳು

  • ದೇವನಹಳ್ಳಿ ಬಳಿ ಭೀಕರ ಅಪಘಾತದಲ್ಲಿ ಮೂವರ ದುರ್ಮರಣ- ವಿಮಾನ ಹತ್ತುವ ಮುನ್ನವೇ ದುರಂತ - ತಿಪಟೂರಿನ ಸ್ತ್ರೀ ಶಕ್ತಿ ಸಂದ ಹಲವರಿಗೆ ಗಾಯ
ದೇವನಹಳ್ಳಿ: ಕಾಶಿ ತೀರ್ಥಯಾತ್ರೆಗೆ ಹೊರಟಿದ್ದ ತುಮಕೂರು ಜಿಲ್ಲೆಯ ತಿಪಟೂರಿನ ಮೂವರು ಮಹಿಳೆಯರು ದೇವನಹಳ್ಳಿಯ ರಾಣಿ ವೃತ್ತದ ಬಳಿ ಶನಿವಾರ ರಾತ್ರಿ ಸುಮಾರು 11.45ರಲ್ಲಿ ಸಂಭವಿಸಿದ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತಿಪಟೂರಿನ ವಿದ್ಯಾನಗರ ಜಯಮ್ಮ (65), ಯಶೋದಮ್ಮ (60) ಮತ್ತು ಗಂಗಾ (38) ಮೃತರು.
ತಿಪಟೂರಿನ ವಿದ್ಯಾನಗರದಿಂದ ಟೆಂಪೋ ಟ್ರಾವಲ್ಸ್​ನಲ್ಲಿ ಹೊರಟು ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಮಾ.22ರ ಮುಂಜಾನೆ 6.30ರ ವಿಮಾನದಲ್ಲಿ ವಾರಾಣಸಿಗೆ ಹೋಗಿ ಅಯೋಧ್ಯೆ ಕಣ್ತುಂಬಿಕೊಂಡು ಬರಲು ಸ್ತ್ರೀಶಕ್ತಿ ಸಂದ 12 ಮಹಿಳೆಯರು ಪ್ರವಾಸ ಹೊರಟಿದ್ದರು.
ಈ ವೇಳೆ ಏರ್​ ಪೋರ್ಟ್​ಗೆ ಬಿಟ್ಟುಬರಲು ಗಂಗಾ ಪತಿ ಶ್ರೀಕಾಂತ್​, ಬಾಲಕಿ ವೃಷ್ಣವಿ ವಾಹನದಲ್ಲಿದ್ದರು. ದೇವನಹಳ್ಳಿಯ ರಾಣಿ ವೃತ್ತದ ಬಳಿ ಸಾಗುವಾಗ ಸಂದ ಸದಸ್ಯರಿಂದ ಟಿಟಿ ವಾಹನಕ್ಕೆ ಲಾರಿ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಮೂವರು ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡ ಕೆಂಪಮ್ಮ, ಶ್ರೀಕಾಂತ್​, ವೈಷ್ಣವಿ, ಚಂದ್ರಮ್ಮ ಅವರನ್ನು ದೇವನಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಪುಷ್ಪಾರಾಣಿ, ಚಂದ್ರಮ್ಮ, ಕಳ್ಳು ಜಯಮ್ಮ, ಪದ್ಮಮ್ಮ, ಉಮಾ, ಸುಶೀಲಮ್ಮ, ಪ್ರಿಯಾಂಕಾ, ಚಂದ್ರಕಲಾ ಮತ್ತು ಟಿ.ಟಿ. ವಾಹನ ಚಾಲಕ ರವಿತೇಜಗೆ ಸಣ್ಣಪುಟ್ಟ ಗಾಯವಾಗಿದ್ದು, ಎಲ್ಲರೂ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.ಅಪಘಾತದ ರಭಸಕ್ಕೆ ಟಿಟಿ ವಾಹನದ ಎಡಭಾಗ ಸಂಪೂರ್ಣ ಕಿತ್ತುಬಂದಿದೆ.
ಮೂವರ ಶವಗಳನ್ನು ಆಕಾಶ್​ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿರುವ ದೇವನಹಳ್ಳಿ ಸಂಚಾರ ಠಾಣೆ ಇನ್​ಸ್ಪೆಕ್ಟರ್​ ಮುರಳೀಧರ್​ ತಂಡ, ತಮಿಳುನಾಡು ಮೂಲದ ಲಾರಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದೆ. ಲಾರಿ ಚಾಲಕ ಪರಾರಿಯಾಗಿದ್ದಾನೆ.
ಸಂಚಾರ ಸಿಕ್ಕು : ಪಟ್ಟಣದ ಮೂಲಕ ಹಾದು ಹೋಗುವ ಬೆಂಗಳೂರು&ಹೈದರಾಬಾದ್​ ಹಾಗೂ ಅತ್ತಿಬೆಲೆ ದಾಬಸ್​ಪೇಟೆ ಎನ್​.ಎಚ್​. 648 ರಾಷ್ಟ್ರೀಯ ಹೆದ್ದಾರಿಯ ರಾಣಿ ಸರ್ಕಲ್​ ್ಲೆ$ ಓವರ್​ ಡೌನ್​ ರ್ಯಾಂಪ್​ ಬಳಿ ದೊಡ್ಡಬಳ್ಳಾಪುರ ಕಡೆಯಿಂದ ಹೊಸಕೋಟೆ ಕಡೆಗೆ ಸಾಗುವ ಸರ್ವೀಸ್​ ರಸ್ತೆ ಬಳಿ ಅಪಘಾತವಾಗಿದ್ದು, ಸುದ್ದಿ ತಿಳಿದುಜನರು ಜಮಾಯಿಸಿದರು. ಇದರಿಂದಾಗಿ ಸಂಚಾರ ಸಿಕ್ಕು ಉಂಟಾಗಿ ವಾಹನ ಸವಾರರು ಪರದಾಡಿದರು.
ಗೂಗಲ್​ ಮ್ಯಾಪ್​ ನೋಡಿಕೊಂಡು ಚಾಲನೆ: ಧಾರ್ಮಿಕ ಕ್ಷೇತ್ರಗಳ ಪ್ರವಾಸಕ್ಕೆಂದು ಒಂದೇ ಏರಿಯಾದ ಮಹಿಳೆಯರು ತಿಪಟೂರಿನಿಂದ ಕೆಂಪೇಗೌಡ ಏರ್​ಪೋರ್ಟ್​ಗೆ ಟಿಟಿ ವಾಹನದಲ್ಲಿ ಹೊರಟಿದ್ದರು. ಏರ್​ಪೋರ್ಟ್​ನ ರ್ಟಮಿನಲ್​ ದಾರಿ ಬಗ್ಗೆ ಸರಿಯಾಗಿ ತಿಳಿಯದೆ ಗೂಗಲ್​ ಮ್ಯಾಪ್​ ಹಾಕಿಕೊಂಡು ಟಿಟಿ ಚಾಲಕ ವಾಹನ ಚಾಲನೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಅಪಘಾತ ನಡೆದ ಸ್ಥಳಕ್ಕೂ ಹಿಂದೆಯೇ ಸರ್ವೀಸ್​ ರಸ್ತೆಗೆ ಮೊದಲ ಟರ್ನಿಂಗ್​ ಇತ್ತು. ಆದರೆ, ಅದು ಗೊತ್ತಾಗದೆ ಮುಂದೆ ಹೋಗಿದ್ದ, ಮುಂದಿನ ಟರ್ನಿಂಗ್​ನಲ್ಲಿ ಯೂರ್ಟನ್​ ಪಡೆಯುವ ವೇಳೆ ಲಾರಿ ಟಿಟಿಗೆ ಡಿಕ್ಕಿಯಾಗಿದೆ.
ಶ್ರೀರಾಮನ ಕಾಣುವ ಕನಸಿಗೆ ಕಣ್ಣೀರ ವಿದಾಯ: ತಿಪಟೂರಿನ ಜಯಮ್ಮ ಮತ್ತು ಯಶೋದಮ್ಮ ಅವರ ಅಂತ್ಯಸಂಸ್ಕಾರ ನಗರ ಸಮೀಪದ ಬಂಡಿಹಳ್ಳಿಯ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು. ಗಂಗಾ ಅವರ ಅಂತ್ಯಸಂಸ್ಕಾರ ಸೋಮವಾರ ನಡೆಸುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.
ಲಾಭಾಂಶದಲ್ಲಿ ಪ್ರವಾಸ: ವಾರ್ಡ್​ ನಂಬರ್​ 14ರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹಿಂಭಾಗದಲ್ಲಿ ಶ್ರೀ ಬೆಣ್ಣೇನಹಳ್ಳಿ ಅಮ್ಮ ಸಿಶಕ್ತಿ ಸಂ ರಚಿಸಿಕೊಂಡಿದ್ದ ಸದಸ್ಯರು, ಸಂದ ಲಾಭದಲ್ಲಿ ಪ್ರತಿ ವರ್ಷ ಒಂದೊಂದು ಪ್ರೇಕ್ಷಣಿಯ ಅಥವಾ ಯಾತ್ರಾ ಸ್ಥಳಗಳಿಗೆ ಹೋಗುತ್ತಿದ್ದರು. ಈ ವರ್ಷ ಅಯೋಧ್ಯೆ ಮತ್ತು ಕಾಶಿ ಯಾತ್ರೆಗೆ ಹೊರಟಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net