ಪತಿಯಿಂದ ಪತ್ನಿಯ ಹತ್ಯೆಗೆ ಯತ್ನ

 ಅಕ್ರಮ ಸಂಬಂಧ ಹಿನ್ನೆಲೆ ಮಾರಣಾಂತಿಕ ಹಲ್ಲೆ
ಅಕ್ರಮ ಸಂಬಂಧ ಹಿನ್ನೆಲೆ ಮಾರಣಾಂತಿಕ ಹಲ್ಲೆ
Published on
ವಿಜಯವಾಣಿ ಸುದ್ದಿಜಾಲ ನೆಲಮಂಗಲ
ತಾಲೂಕು ಗೋವಿಂದಪುರದಲ್ಲಿ ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಮಚ್ಚಿನಿಂದ ಪತ್ನಿಯ ಕುತ್ತಿಗೆಗೆ ಕೊಯ್ದು ವಾರಣಾಂತಿಕ ಹಲ್ಲೆ ನಡೆಸಿದ ಪತಿ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.
ಗೋವಿಂದಪುರದ ನಿವಾಸಿ ನಗ್ಮಾ (25) ತೀವ್ರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಪತಿ ಸಲ್ಮಾನ್ (26) ಪೊಲೀಸರ ಅತಿಥಿಯಾಗಿದ್ದಾನೆ.
ಟನೆ ಹಿನ್ನಲೆ : ಬಳ್ಳಾರಿ ಮೂಲದ ದಂತಪಿ 2 ವರ್ಷದ ಹಿಂದೆ ನೆಲಮಂಗಲ ತಾಲೂಕಿನ ಗೋವಿಂದಪುರದಲ್ಲಿ ತೋಟದ ಕೆಲಸಕ್ಕೆ ಸೇರಿಕೊಂಡು ತೋಟದ ಮನೆಯಲ್ಲಿ ವಾಸವಾಗಿದ್ದರು. ವಿವಾಹಕ್ಕೂ ಮುನ್ನಾ ನಗ್ಮಾಗೆ ಮಂಜುನಾಥ್ ಎಂಬಾತನ ಜತೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದ್ದು ಆತ ಆಗಾಗ ನಗ್ಮಾಳನ್ನು ಭೇಟಿಯಾಗುತ್ತಿದ್ದ, ನಗ್ಮಾ ಮೊಬೈಲ್‌ನಲ್ಲಿ ಮಂಜುನಾಥ್ ಜತೆಗಿನ ಅಶ್ಲೀಲ ೆಟೊಗಳನ್ನು ನೋಡಿದ್ದ ಪತಿ ಸಲ್ಮಾನ್ ಇದೇ ವಿಷಯಕ್ಕೆ ಜಗಳವಾಡಿದ್ದ ಜ.22ರಂದು ಮಂಜುನಾಥ್ ವಿಚಾರಕ್ಕೆ ದಂಪತಿ ನಡುವೆ ಗಲಾಟೆ ನಡೆದಿದ್ದು, ಕೋಪಗೊಂಡ ಪತಿ ಮಚ್ಚಿನಿಂದ ಕುತ್ತಿಗೆ ಹಾಗೂ ಎದೆಭಾಗಕ್ಕೆ ಇರಿದಿದ್ದಾನೆ. ಬಳಿಕ ೆಟೋ ತೆಗೆದು ತೋಟದ ವಾಲೀಕನಿಗೆ ಕಳಿಸಿ ಗ್ರಾವಾಂತರ ಠಾಣೆಗೆ ಹೋಗಿ ಶರಣಾಗಿದ್ದಾನೆ.
ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ:
ವಾನವೀಯತೆ ಮೆರೆದ ಪೊಲೀಸರು : ಮಾಹಿತಿ ತಿಳಿದ ಆರಕ್ಷಕ ನಿರೀಕ್ಷಕ ನರೇಂದ್ರಬಾಬು ಸಿಬ್ಬಂದಿ ತೀವ್ರಗಾಯಗೊಂಡು ರಕ್ತದ ಮಡುವಿನಲ್ಲಿದ್ದ ನಗ್ಮಾಳನ್ನು ತಕ್ಷಣ ಟಿ.ಬೇಗೂರು ಬಳಿಕ ಸಿದ್ಧಾರ್ಥ ಆಸ್ಪತ್ರೆಗೆ ದಾಖಲಿಸಿದ್ದಾರೆ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿವ್ಹಾನ್ಸ್ ಆಸ್ಪತ್ರೆಗೆ ರವಾನಿಸಿದ್ದು, ತ್ರೀವ್ರನಿಗಾ ಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ಪ್ರಸನ್ನ, ಡಿವೈಎಸ್ಪಿ ಜಗದೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾವಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net