

ವಿಜಯಪುರ : ಹಾಲು ಖರೀದಿ ದರ ಲೀಟರ್ಗೆ 10 ರೂ. ಹೆಚ್ಚಿಸಲು ಸರ್ಕಾರಕ್ಕೆ ಒತ್ತಾಯಿಸಿದ್ದು, ಕನಿಷ್ಠ 8 ರೂ. ಪ್ರೋತ್ಸಾಹಧನ ಸಿಗುವ ವಿಶ್ವಾಸವಿದೆ ಎಂದು ಬಮುಲ್ ನಿರ್ದೇಶಕ ಎಸ್.ಪಿ.ಮುನಿರಾಜು ಹೇಳಿದರು.
ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ 2025-&26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಗುಣಮಟ್ಟದ ಹಾಲು ಉತ್ಪಾದನೆಯಿಂದ ಹೈನುಗಾರರು ಹಾಗೂ ಸಂಘ ಇಬ್ಬರಿಗೂ ಲಾಭ ಎಂದರು.
ಸಂಘದ ಅಧ್ಯಕ್ಷ ಕೆ.ನಾಗರಾಜ್ ಮಾತನಾಡಿ, ಡೇರಿ ಪ್ರಸಕ್ತ ಸಾಲಿನಲ್ಲಿ 15 ಲಕ್ಷ ರೂ. ಲಾಭ ಗಳಿಸಿದೆ ಎಂದರು.
ಪ್ರೋತ್ಸಾಹಧನ ಕೊಟ್ಟಿಲ್ಲ : ಸರ್ಕಾರದಿಂದ ಒಂದು ಲೀಟರ್ಗೆ 5 ರೂ.ಪ್ರೋತ್ಸಾಹಧನ ಇದ್ದರೂ ಒಕ್ಕೂಟದಿಂದ ಕೊಡುವ 1 ರೂ.ಕೊಟ್ಟು, 5 ರೂ. ಕೊಟ್ಟಿಲ್ಲ. ಈ ಬಗ್ಗೆ ಸಂಘದಲ್ಲಿ ನಾವು ಪ್ರಶ್ನೆ ಮಾಡಿದರೆ, ಕೊಬ್ಬಿನಾಂಶ ಮತ್ತು ಎಸ್ಎನ್ಎಫ್ ಬಂದವರಿಗೆ ಮಾತ್ರ 5 ರೂ. ಪ್ರೋತ್ಸಾಹಧನ ಕೊಡಲಾಗುತ್ತಿದೆ ಎನ್ನುತ್ತಾರೆ. ನಾವು ಗುಣಮಟ್ಟದ ಹಾಲು ಪೂರೈಸಿದರೂ ಸಹಾಯಧನ ಸಿಗುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ವೈದ್ಯರು ರಾಸು ಮುಟ್ಟಲ್ಲ : ರೈತ ಕೃಷ್ಣಪ್ಪ ಮಾತನಾಡಿ, ಹಸುಗಳು ಅನಾರೋಗ್ಯಕ್ಕೆ ಒಳಗಾದಾಗ ಡೇರಿ ಮೂಲಕ 40 ರೂ. ಕೊಟ್ಟು ಕೂಪನ್ ಹಾಕಿದರೆ ವೈದ್ಯರು ಬರುತ್ತಾರೆ. ಹಸುಗಳನ್ನೆ ಮುಟ್ಟುವುದಿಲ್ಲ, ದೂರದಿಂದಲೇ ಇಂಜೆಕ್ಷನ್ ಹಾಕುತ್ತಾರೆ. ಕೆಲವರು ಕಾರಿನಿಂದಲೂ ಇಳಿಯುವುದಿಲ್ಲ. ಸರಿಯಾಗಿ ಔಷಧವನ್ನೂ ತರುವುದಿಲ್ಲ. ಇಂತಹವರನ್ನು ನಂಬಿಕೊಂಡು ನಾವು ಏನು ಮಾಡಲು ಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೂವರಿಗೆ ವರ್ಗಾವಣೆ ಶಿಕ್ಷೆ : ರೈತರ ಪ್ರಶ್ನೆಗಳಿಗೆ ಉತ್ತರಿಸಿದ ಬಮುಲ್ನಿರ್ದೇಶಕ ಮುನಿರಾಜು, ಕರ್ತವ್ಯ ಲೋಪವೆಸಗಿದ ಮೂವರು ವೈದ್ಯರನ್ನು ವರ್ಗಾವಣೆ ಮಾಡಿಸಿದ್ದೇವೆ. ಗುಣಮಟ್ಟದ ಹಾಲು ಉತ್ಪಾದನೆಗಾಗಿ ಗುಣಮಟ್ಟದ ಫೀಡ್ ವಿತರಣೆಗೂ ಕ್ರಮ ಕೈಗೊಂಡಿದ್ದೇವೆ. ಚಿಕ್ಕನಹಳ್ಳಿ ಡೇರಿಯಲ್ಲೂ ಸೈಲೇಜ್ ಮಾಡಿಸುತ್ತಿದ್ದೇವೆ. ಉತ್ಪಾದಕರು ಉಪಯೋಗ ಮಾಡಿಕೊಳ್ಳಬಹುದು, ಮ್ಯಾಟ್ ವಿತರಣೆ, ಮೇವು ಕತ್ತರಿಸುವ ಯಂತ್ರ ಹಾಗೂ ಹಾಲು ಕರೆಯುವ ಯಂತ್ರಗಳನ್ನು ಶೀಘ್ರದಲ್ಲೇ ವಿತರಿಸಲಾಗುವುದು ಎಂದರು.
ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳನ್ನು ಪುರಸ್ಕರಿಸಲಾಯಿತು. ನಿರ್ದೇಶಕರಾದ ಸುಹಾಸ್, ಮುನಿಶಾಮಪ್ಪ, ಎನ್.ಲಕ್ಷಿ$್ಮನಾಗರಾಜ್, ಗೌರಮ್ಮದೇವರಾಜ್, ಎಂ.ಮುರಳಿ, ಮಾಜಿ ಅಧ್ಯಕ್ಷ ಕೆ.ವಿ.ಮುನಿರಾಜು, ಮುಖ್ಯ ಕಾರ್ಯನಿರ್ವಾಹಕ ಎನ್.ಮಂಜುನಾಥ್ ಹಾಗೂ ಸಿಬ್ಬಂದಿ ಇದ್ದರು.