ಸೇವೆಯಿಂದ ಬದುಕು ಸಾರ್ಥಕ

ನೆಲಮಂಗಲ ತಾಲೂಕು ನರಸೀಪುರದ ಧರಿತ್ರಿ ಟ್ರಸ್ಟ್​ನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸೋಂಪುರ ರೋಟರಿ ಕಾರ್ಯದರ್ಶಿ ವಿಶ್ವನಾಥ ಬಾಬು, ಗ. ಭೈರಣ್ಣ, ರೋಟರಿ ಕ್ಲಬ್​ ಆಫ್​ ಮಧುಗಿರಿ, ಕೊರಟಗೆರೆ, ನಿಟ್ಟೂರು, ನರ್ತನಪುರಿ ಕುಣಿಗಲ್​, ಸಿದ್ಧರಬೆಟ್ಟ, ಸಿರಾ ಗೇಟ್​ ಯಲ್ಲಾಪುರ ಕ್ಲಬ್​ಗಳ ಪದಾಧಿಕಾರಿಗಳು, ಸದಸ್ಯರು, ಶಾಲಾ ಸಿಬ್ಬಂದಿ ಇದ್ದರು.

Published on: 

ದಾಬಸ್​ಪೇಟೆ : ಎಷ್ಟು ಕೊಟ್ಟೆ ಅನ್ನುವುದಕ್ಕಿಂತ ಏನು ಕೊಟ್ಟೆ ಅನ್ನುವುದು ಮುಖ್ಯ. ಯಾರಿಗೆ ಕೊಡಬೇಕು ಎಂಬುದನ್ನು ತಿಳಿದು ಸೇವೆ ಮಾಡಿದಾಗ ಅದು ಸಾರ್ಥಕವಾಗುತ್ತದೆ ಎಂದು ಜಿಲ್ಲಾ ರೋಟರಿ ಕ್ಲಬ್​ ರವಿಶಂಕರ್​ ಡಾಕೋಜು ಹೇಳಿದರು.

ರೋಟರಿ ಕ್ಲಬ್​ ಆಫ್​ ಸೋಂಪುರ ಆಶ್ರಯದಲ್ಲಿ ನರಸೀಪುರದ ಧರಿತ್ರಿ ಟ್ರಸ್ಟ್​ನಲ್ಲಿ ಶುಕ್ರವಾರ ಆಯೋಜಿಸಿದ್ದ ಜಂಟಿ ಪ್ರಾಂತಪಾಲರ ಭೇಟಿ, ಶಾಲಾ ಮಕ್ಕಳಿಗೆ ಸೈಕಲ್​, ಕನ್ನಡಕ ಹಾಗೂ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿಯೊಬ್ಬರೂ ಸಂಪಾದನೆಯ ಅತ್ಯಲ್ಪ ಮೊತ್ತವನ್ನಾದರೂ ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ರವಿಶಂಕರ್​ ಡಾಕೋಜು ಅವರು ಸುಮಾರು 500 ಕೋಟಿ ರೂ. ದಾನ, 1500 ಎಕರೆ ಪ್ರದೇಶದಲ್ಲಿ ಅರಣ್ಯ ಬೆಳೆಸುವ ಮಹತ್ತರ ಕಾರ್ಯ ಮಾಡಿರುವುದು ಮಾದರಿ. ಸರ್ಕಾರಗಳು ಮಾಡದ ಮಹಾನ್​ ಕಾರ್ಯ ಮಾಡುತ್ತಿರುವ ಇವರು ನಮ್ಮ ಜಿಲ್ಲಾಧ್ಯಕ್ಷರು ಎಂದು ಸೋಂಪುರ ರೋಟರಿ ಅಧ್ಯಕ್ಷ ಶಶಿಧರ್​ ಬಣ್ಣಿಸಿದರು. ಸೋಂಪುರ ಹೋಬಳಿಯ 20 ಜನ ಸರ್ಕಾರಿ ಶಾಲಾ ಶಿಕ್ಷಕರಿಗೆ ನೇಷನ್​ ಬಿಲ್ಡ್​ ಪ್ರಶಸ್ತಿ, 25 ಶಾಲಾ ಮಕ್ಕಳಿಗೆ ದಾನಿಗಳ ಸಹಾಯದಿಂದ ಉಚಿತವಾಗಿ ಸೈಕಲ್​ ಹಾಗೂ ಕಣ್ಣಿನ ತೊಂದರೆ ಇದ್ದ 20 ಮಕ್ಕಳಿಗೆ ಉಚಿತ ಕನ್ನಡಕ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net