ರಂಗಭೂಮಿ ಸಮಕಾಲೀನ ವೇದಿಕೆ ಆಗಲಿ

ದೊಡ್ಡಬಳ್ಳಾಪುರದ ಮುದ್ದನಾಯಕನಪಾಳ್ಯದ ಜಿಲ್ಲಾ ಕಲಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಲಾವಿದ ನರಸಿಂಹಮೂರ್ತಿ ಅವರಿಗೆ ರಂಗ ಕಲಾಜ್ಯೋತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಘದ ಉಪಾಧ್ಯಕ್ಷ ಎಸ್​.ಎ. ಶ್ರೀಧರಗೌಡ, ಖಜಾಂಚಿ ಆರ್​.ವಿ. ಮಂಜುನಾಥ್​, ನಿರ್ದೇಶಕರಾದ ಮುನಿರಾಜು, ಕೆ.ನಾಗರತ್ನಮ್ಮ, ಆರ್​.ಎ.ಸಂಜೀವರಾಯಪ್ಪ, ಮುನಿಕೃಷ್ಣಪ್ಪ, ಸುಬ್ರಹ್ಮಣ್ಯ ಆಚಾರ್​, ಚಂದ್ರಣ್ಣ, ಸರ್ವೇಶ್​, ಪದಾಧಿಕಾರಿಗಳು, ಸಲಹಾ ಸಮಿತಿ, ಸಂಚಾಲನಾ ಸಮಿತಿ ಸದಸ್ಯರು ಇದ್ದರು.
ದೊಡ್ಡಬಳ್ಳಾಪುರದ ಮುದ್ದನಾಯಕನಪಾಳ್ಯದ ಜಿಲ್ಲಾ ಕಲಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಲಾವಿದ ನರಸಿಂಹಮೂರ್ತಿ ಅವರಿಗೆ ರಂಗ ಕಲಾಜ್ಯೋತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಘದ ಉಪಾಧ್ಯಕ್ಷ ಎಸ್​.ಎ. ಶ್ರೀಧರಗೌಡ, ಖಜಾಂಚಿ ಆರ್​.ವಿ. ಮಂಜುನಾಥ್​, ನಿರ್ದೇಶಕರಾದ ಮುನಿರಾಜು, ಕೆ.ನಾಗರತ್ನಮ್ಮ, ಆರ್​.ಎ.ಸಂಜೀವರಾಯಪ್ಪ, ಮುನಿಕೃಷ್ಣಪ್ಪ, ಸುಬ್ರಹ್ಮಣ್ಯ ಆಚಾರ್​, ಚಂದ್ರಣ್ಣ, ಸರ್ವೇಶ್​, ಪದಾಧಿಕಾರಿಗಳು, ಸಲಹಾ ಸಮಿತಿ, ಸಂಚಾಲನಾ ಸಮಿತಿ ಸದಸ್ಯರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಂಗಭೂಮಿ ಸಮಕಾಲೀನ ವೇದಿಕೆ ಆಗಲಿ
ರಂಗಭೂಮಿ ಸಮಕಾಲೀನ ವೇದಿಕೆ ಆಗಲಿ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್​. ರವಿಕಿರಣ್​ ಹೇಳಿಕೆ
ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಪೌರಾಣಿಕ ನಾಟಕಗಳ ಜತೆಗೆ ಸಾಮಾಜಿಕ, ಐತಿಹಾಸಿಕ ನಾಟಕಗಳ ಪ್ರದರ್ಶನಕ್ಕೂ ಉತ್ತೇಜನ ಅಗತ್ಯವಾಗಿದೆ. ಸಮಕಾಲೀನ ಆಶೋತ್ತರಗಳಿಗೆ ತಕ್ಕಂತೆ ನಾಟಕಗಳ ವಸ್ತು, ಅಭಿವ್ಯಕ್ತಿ ಮತ್ತು ಆಶಯಗಳಲ್ಲಿ ಮಾರ್ಪಾಟು ಮಾಡಿಕೊಳ್ಳುವುದು ಅಗತ್ಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್​. ರವಿಕಿರಣ್​ ಹೇಳಿದರು.
ಜಿಲ್ಲಾ ರಂಗಭೂಮಿ ಕಲಾವಿದರ ಸಂಘ ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆ ಸಹಯೋಗದಲ್ಲಿ ತಾಲೂಕಿನ ಮುದ್ದನಾಯಕನಪಾಳ್ಯ ಬಳಿಯ ಜಿಲ್ಲಾ ಕಲಾ ಭವನದಲ್ಲಿ ಶನಿವಾರ ಆಯೋಜಿಸಿದ್ದ 50ನೇ ಮಾಸಿಕ ರಂಗ ಕಲಾಜ್ಯೋತಿ ಕಾರ್ಯಕ್ರಮ, ರಂಗಗೀತೆ ಗಾಯನ, ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಂಗ ಕಲೆ ಸಾಂಸತಿಕ ಅನನ್ಯತೆಯ ಜತೆಗೆ ಸಮಕಾಲೀನ ಸಾಮಾಜಿಕ ವಾತಾವರಣವನ್ನು ವಿಮರ್ಶಿಸುವ ವೇದಿಕೆಯೂ ಆಗಬೇಕು. ಯುವ ಕಲಾವಿದರನ್ನು ಪ್ರೋತ್ಸಾಹ, ಕಲಾ ಪರಂಪರೆಯ ಇತಿಹಾಸ, ವರ್ತಮಾನ ಮತ್ತು ಭವಿಷ್ಯದ ಚಿಂತನೆ ಉತ್ತೇಜಿಸಲು ಮಾರ್ಗದರ್ಶಿ ಶಿಬಿರ ಹಮ್ಮಿಕೊಳ್ಳುವುದು ಅಗತ್ಯ ಎಂದರು.
ಜಾಗತಿಕ ಸಂದಿಗ್ಧತೆ ಸಂದರ್ಭದಲ್ಲಿ ಲಲಿತ ಕಲೆಗಳು ಪ್ರಖರ ಅಭಿವ್ಯಕ್ತಿ ಮಾಧ್ಯಮವಾಗಿ ಗಮನ ಸೆಳೆದಿವೆ. ಸಂಗೀತ, ಕಲೆಗಳಿಗೆ ರೋಗನಿರೋಧಕ ಸಾಮರ್ಥ್ಯವಿದ್ದು, ಮನಸ್ಸು ಹಾಗೂ ದೇಹವನ್ನು ಪ್ರಫುಲ್ಲಗೊಳಿಸುವ ಸಂವೇದನೆ ಇದೆ ಎಂದು ತಿಳಿಸಿದರು.
ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಗೌರವಾಧ್ಯಕ್ಷ ಕೆ.ಎಂ. ಕೃಷ್ಣಮೂರ್ತಿ ಮಾತನಾಡಿ, ರಂಗ ಕಲೆ ಸೃಜನಶೀಲ ಭಾವನೆಗಳ ಅಭಿವ್ಯಕ್ತಿಯ ಜತೆಗೆ ಸಾಂಸತಿಕ ಹಾಗೂ ಪಾರಂಪರಿಕ ಮೌಲ್ಯಗಳ ಬಗ್ಗೆ ನಿರಂತರ ಜಾಗೃತಿ ಮೂಡಿಸುತ್ತದೆ. ಸತತ 50 ತಿಂಗಳಿಂದ ಪ್ರತಿ ತಿಂಗಳು ಒಬ್ಬೊಬ್ಬ ಕಲಾವಿದರನ್ನು ಗುರುತಿಸಿ ಗೌರವಿಸುವ ಪ್ರಕ್ರಿಯೆ ನಡೆಯುತ್ತಿದೆ. ಕಲಾ ಚೇತನಗಳ ಉತ್ತೇಜನಕ್ಕೆ ಇದೊಂದು ಉತ್ತಮ ಮಾರ್ಗ ಎಂದರು.
ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಮಾತನಾಡಿ, ಜಿಲ್ಲೆಯ ಅಸಂಖ್ಯಾತ ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸುವುದು ರಂಗ ಕಲಾ ಜ್ಯೋತಿ ಕಾರ್ಯಕ್ರಮದ ಪ್ರಮುಖ ಉದ್ದೇಶ ಎಂದರು.
ಕಲಾವಿದ ನಾರಾಯಣಸ್ವಾಮಿ ಅವರಿಗೆ ರಂಗ ಕಲಾ ಜ್ಯೋತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net