ಕಲಿಕೆಗೆ ಪೂರಕ ವಾತಾವರಣವಿರಬೇಕು

ಸೋಂಪುರ ಹೋಬಳಿಯ ಪ್ರೌಢಶಾಲೆಗಳ ಮಕ್ಕಳ ಕಲೋತ್ಸವ
ಸೋಂಪುರ ಹೋಬಳಿಯ ಪ್ರೌಢಶಾಲೆಗಳ ಮಕ್ಕಳ ಕಲೋತ್ಸವ
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಕಲಿಕೆ ಎನ್ನುವುದು ಸದಾಕಾಲ ಉತ್ಸಾಹದಿಂದ ಕೂಡಿರಬೇಕು ಎಂಬುದೇ ಕಲೋತ್ಸವದ ಉದ್ದೇಶವಾಗಿದೆ, ಆದ್ದರಿಂದ ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ, ವೇದಿಕೆ ಕಲ್ಪಿಸುವುದು ಅವಶ್ಯ ಎಂದು ಹೊನ್ನಮ್ಮಗವಿ ಮಠದ ರುದ್ರಮುನಿಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಸೋಂಪುರ ಹೋಬಳಿಯ ಪ್ರೌಢಶಾಲೆಗಳ ಮಕ್ಕಳ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅವಕಾಶವನ್ನು ಸೃಷ್ಟಿಸುವುದರಿಂದ ದೀರ್ಘಕಾಲ ಸ್ಮರಣೆಯಲ್ಲಿ ಉಳಿಯುತ್ತದೆ ಎಂದರು. ಮಕ್ಕಳನ್ನು ಸುಸಂಸ್ಕೃತರನ್ನಾಗಿಸಿ ಸ್ವಾವಲಂಬನೆ ಜತೆಗೆ ದೇಶಾಭಿಮಾನಿಯಾಗಿ ರೂಪಿಸುವಲ್ಲಿ ಶಿಕ್ಷಕರು ಮತು ಪಾಲಕರ ಪಾತ್ರ ಮಹತ್ವದಾಗಿದೆ, ಸ್ಪರ್ಧಾತ್ಮಕವಾಗುತ್ತಿರುವ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಕಠಿಣ ಪರಿಶ್ರಮದಿಂದ ಎಲ್ಲವನ್ನು ಮೀರಿಸುವ ಶಿಕ್ಷಣವನ್ನು ಕಲಿತು ದೇಶಕ್ಕೆ ಕೊಡುಗೆ ನೀಡುವಂತಾಗಲಿ ಎಂದರು. ಮಕ್ಕಳು ಉನ್ನತ ಶಿಕ್ಷಣ ಪಡೆದು ಸಮಾಜಕ್ಕೆ ಗೌರವ ತರುವಂತ ಕೆಲಸ ಮಾಡಬೇಕು ಎಂದು ಶಿವಗಂಗೆ ಗ್ರಾಮ ಪಂಚಾಯಿತಿ ಪಿಡಿಒ ಗಿರೀಶ್ ಕರೆ ನೀಡಿದರು.
ಗ್ರಾಪಂ ಅಧ್ಯಕ್ಷರಿಂದ ಮೆಚ್ಚುಗೆ:
ಶಿಕ್ಷಕರಿಗೆ ಕಾರ್ಯ ಒತ್ತಡ ಇದ್ದರೂ ಶಕ್ತಿ ಮೀರಿ ಮಕ್ಕಳ ಕಲಿಕೆಗೆ ಶ್ರಮವಹಿಸುತ್ತಾರೆ ಎಂದು ಶಿಕ್ಷಕರ ಕರ್ತವ್ಯದ ಬಗ್ಗೆ ಶಿವಗಂಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net