ಜಾತ್ರೆ ಎಂದರೆ ರಾಸುಗಳ ವಾರಾಟ ಹಾಗೂ ಕೊಂಡುಕೊಳ್ಳುವುದು ಅಷ್ಟೇ ಅಲ್ಲ. ಹತ್ತಾರು ಜನಕ್ಕೆ ಜೀವನೋಪಾಯದ ದಾರಿಯಾಗಿತ್ತು. ಕೊಳ್ಳುವವರ ವಾರುವವರ ಮಧ್ಯೆ ದಳ್ಳಾಳಿಗಳು ವ್ಯಾಪಾರ ಕುದುರಿಸಿ ಕಮಿಷನ್ ಪಡೆಯುತ್ತಿದ್ದರು. ಸಣ್ಣ ಹೋಟೆಲ್‌ಗಳು ಇತರ ಅಂಗಡಿಗಳ ತುತ್ತಿನ ಚೀಲ ತುಂಬುತ್ತಿತ್ತು. ಜಾತ್ರೆಯಲ್ಲಿ ಜಾನುವಾರುಗಳಿಗೆ ಬೇಕಾದ ಹಗ್ಗ, ಮೂಗುದಾರ, ಗೆಜ್ಜೆ, ದಂಡೆಗಳ ವಾರಾಟ ವಾಡಿ ಜೀವನ ನಡೆಸುತ್ತಿದ್ದವರಿಗೂ ಜಾತ್ರೆ ನಿಂತಿರುವುದು ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಬಿದ್ದಂತಾಗಿದೆ.