ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ಹೊಸಕೋಟೆ ತಾಲೂಕಿನ ಗಿಡ್ಡಪ್ಪನಹಳ್ಳಿ ಅಬ್ದುಲ್​ ಕಲಾಂ ವಸತಿ ಶಾಲೆಯಲ್ಲಿ ಸ್ಥಾಪನೆಗೊಂಡಿರುವ ವಾಟರ್​ ಫಿಲ್ಟರ್​ ಅನ್ನು ಬಮುಲ್​ ನಿರ್ದೇಶಕ ಬಿ.ವಿ.ಸತೀಶಗೌಡ ಉದ್ಘಾಟಿಸಿದರು. ಉಪವ್ಯವಸ್ಥಾಪಕ ಶ್ರೀರಾಮ್​, ಪ್ರಾಂಶುಪಾಲೆ ಶಶಿಕಲಾ ಇದ್ದರು.
ಹೊಸಕೋಟೆ ತಾಲೂಕಿನ ಗಿಡ್ಡಪ್ಪನಹಳ್ಳಿ ಅಬ್ದುಲ್​ ಕಲಾಂ ವಸತಿ ಶಾಲೆಯಲ್ಲಿ ಸ್ಥಾಪನೆಗೊಂಡಿರುವ ವಾಟರ್​ ಫಿಲ್ಟರ್​ ಅನ್ನು ಬಮುಲ್​ ನಿರ್ದೇಶಕ ಬಿ.ವಿ.ಸತೀಶಗೌಡ ಉದ್ಘಾಟಿಸಿದರು. ಉಪವ್ಯವಸ್ಥಾಪಕ ಶ್ರೀರಾಮ್​, ಪ್ರಾಂಶುಪಾಲೆ ಶಶಿಕಲಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಮುಲ್​ ನಿರ್ದೇಶಕ ಬಿ.ವಿ.ಸತೀಶಗೌಡ ಹೇಳಿಕೆ
  • ಮಕ್ಕಳ ಆರೋಗ್ಯ ದೃಷ್ಟಿಯಿಂದ ಸಹಕಾರಿ
  • ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶ
ವಿಜಯವಾಣಿ ಸುದ್ದಿಜಾಲ ಸೂಲಿಬೆಲೆ
ಸರ್ಕಾರಿ ಶಾಲೆ ಮತ್ತು ಕಾಲೇಜು ಮಕ್ಕಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಬೆಂಗಳೂರು ಹಾಲು ಒಕ್ಕೂಟದ ನಿಧಿಯಿಂದ ಫಿಲ್ಟರ್​ ಘಟಕ ಅಳವಡಿಸಲಾಗಿದ್ದು, ಮಕ್ಕಳ ಆರೋಗ್ಯ ದೃಷ್ಟಿಯಿಂದ ಸಹಕಾರಿಯಾಗಿದೆ ಎಂದು ಬಮುಲ್​ ನಿರ್ದೇಶಕ ಬಿ.ವಿ.ಸತೀಶಗೌಡ ಹೇಳಿದರು.
ಹೊಸಕೋಟೆ ತಾಲೂಕಿನ ಗಿಡ್ಡಪ್ಪನಹಳ್ಳಿ ಅಬ್ದುಲ್​ ಕಲಾಂ ವಸತಿ ಶಾಲೆಯಲ್ಲಿ ಬಮುಲ್​ ಕಲ್ಯಾಣ ಟ್ರಸ್ಟ್​ ನಿಧಿಯಿಂದ ಸ್ಥಾಪಿಸಿದ್ದ 500 ಲೀಟರ್​ ಸಾಮರ್ಥ್ಯದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು. ಹೊಸಕೋಟೆ ಶಿಬಿರದ ಉಪವ್ಯವಸ್ಥಾಪಕ ಶ್ರೀರಾಮ್​ ಮಾತನಾಡಿ, ಅಂರ್ತಜಲ ಕುಸಿತದಿಂದ ್ಲೋರೈಡ್​ ಅಂಶ ಹೆಚ್ಚಾಗಿದ್ದು, ಆರೋಗ್ಯ ದೃಷ್ಟಿಯಿಂದ ಬಮುಲ್​ನಿಂದ ಶಾಲೆ ಕಾಲೇಜುಗಳಲ್ಲಿ ಉಚಿತ ಫಿಲ್ಟರ್​ ಹಾಕಿಕೊಡಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು. ವಸತಿ ಶಾಲೆ ಪ್ರಾಂಶುಪಾಲೆ ಶಶಿಕಲಾ, ಡಾ.ಸಂತೋಷ್​, ನವೀನ್​, ಚಿಕ್ಕಹರಳಗೆರೆ ಜಗದೀಶ್​, ವಿದ್ಯಾಶ್ರೀ, ಜುನೈದ್​ಖಾನ್​ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net