ಪೊಲೀಸ್ ಸಿಬ್ಬಂದಿ, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಮುಕ್ತವಾಗಿ ಬಳಸಬಹುದಾದ ವಿಶೇಷ ಗ್ರಂಥಾಲಯ ಈ ಠಾಣೆಯಲ್ಲಿ ಸ್ಥಾಪಿತವಾಗಿರುವುದು ವಿಶೇಷಗಳಲ್ಲೊಂದಾಗಿದೆ. ವಿವಿಧ ಸಾಹಿತ್ಯ, ಸಂಸ್ಕೃತಿ,ಕಲೆ, ವೈದ್ಯಕೀಯ, ರಾಜಕೀಯ ಮೇರುವ್ಯಕ್ತಿಗಳ ಜೀವನ ಚರಿತ್ರೆ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತ 100ಕ್ಕೂ ಹೆಚ್ಚು ಪುಸ್ತಕ ಭಂಡಾರವಿದೆ. ಕುಳಿತು ಓದಲು ಸೂಕ್ತ ಆಸನದ ವ್ಯವಸ್ತೆ, ರಾತ್ರಿ ವೇಳೆ ಬೆಳಕಿನ ವ್ಯವಸ್ಥೆ ಇದ್ದು, ಓದುಗರಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುವಲ್ಲಿ ಖಾಕಿ ಪಡೆ ಇಚ್ಛಾಶಕ್ತಿ ಪ್ರದರ್ಶಿಸಿದೆ.