ಅತ್ಯುತ್ತಮ ಸರ್ಕಾರಿ ಕನ್ನಡ ಮಾಧ್ಯಮಿಕ ಹಿರಿಯ ಪ್ರಾಥಮಿಕ ಶಾಲಾ ಪ್ರಶಸ್ತಿಗೆ ನೆಲಮಂಗಲ ತಾಲೂಕು ವೀರರಾಘವನಪಾಳ್ಯ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಭಾಜವಾದರೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಇದೇ ಶಾಲೆಯ ಮುಖ್ಯ ಶಿಕ್ಷಕ ಹೊನ್ನಹನುಮಯ್ಯ ಪಡೆದರು. ಗ್ರಾಮಾಂತರ ಜಿಲ್ಲೆಯ ಮೂವರು ಸಾಧಕರಿಗೆ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಗರಿ ಒಲಿಯಿತು. ಅದೇ ರೀತಿ ರಾಜ್ಯೋತ್ಸವ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಗ್ರಾಮಾಂತರ ಜಿಲ್ಲೆಯ ನಾಲ್ವರು ಸಾಧಕರು ಆಯ್ಕೆಯಾಗಿದರು. ಶಿಕ್ಷಣ ಕ್ಷೇತ್ರದಿಂದ ಹೊಸಕೋಟೆಟೌನ್ ನಿವಾಸಿ ಬಿ.ಶ್ರೀನಿವಾಸಯ್ಯ, ಕನ್ನಡಪರ ಸೇವೆಗೆ ನೆಲಮಂಗಲ ತಾಲೂಕಿನ ಜಿ.ಉಮೇಶ್‌ಗೌಡ, ಕೃಷಿ ಕ್ಷೇತ್ರದಲ್ಲಿ ದೇವನಹಳ್ಳಿ ತಾಲೂಕಿನ ಬಿ.ಆರ್.ಮಂಜುನಾಥ್ ಹಾಗೂ ಕೃಷಿ ಕ್ಷೇತ್ರದಲ್ಲಿನ ಸಾಧನೆಗೆ ದೊಡ್ಡಬಳ್ಳಾಪುರ ತಾಲೂಕಿನ ಹಳ್ಳಿರೈತ ಅಂಬರೀಶ್ ಪ್ರಶಸ್ತಿಗೆ ಭಾಜನರಾದರು.