ಹೋಬಳಿ ಹಸ್ತಾಂತರದಿಂದ ಅಭಿವೃದ್ಧಿ

Handover of Hobli
Handover of Hobli
Published on
ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ
ಹೋಬಳಿ ಹಸ್ತಾಂತರ ಪ್ರಕ್ರಿಯೆಯಿಂದ ಸೋಲೂರು ಹೋಬಳಿಗೆ ಒಳ್ಳೆಯದಾಗಿದೆ, ಅಭಿವೃದ್ಧಿಗೆ ಅನುಕೂಲವಾಗಿದೆ, ಎಲ್ಲಾ ಇಲಾಖೆಗಳು ನೆಲಮಂಗಲಕ್ಕೆ ಸೇರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ನೆಲಮಂಗಲ ತಾಲೂಕು ಕಚೇರಿ ಆವರಣದಲ್ಲಿ ನೆಲಮಂಗಲಕ್ಕೆ ಸೋಲೂರು ಹೋಬಳಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾರ್ವಜನಿಕರು ಇಲಾಖೆಗಳೊಂದಿಗೆ ಸ್ಪಂದಿಸಬೇಕು, ಸೋಲೂರು ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರಕ್ಕೆ ಸೇರಿ ದೊಡ್ಡದ್ದಾಗಿತ್ತು, ಇದೀಗ ನೆಲಮಂಗಲಕ್ಕೆ ಆಡಳಿತಾತ್ಮಕವಾಗಿ ಸೇರಿರುವುದು ಉತ್ತಮ ಬೆಳವಣಿಗೆ ಎಂದರು.
ಪ್ರಣಾಳಿಕೆಯ ವಸ್ತುವಾಗಿತ್ತು:
ಆಡಳಿತಾತ್ಮಕವಾಗಿ ಬೆಂಗಳೂರು ದಕ್ಷಿಣ ಜಿಲ್ಲೆಯ ಸೋಲೂರು ಹೋಬಳಿ (ರಾಮನಗರ) ಜಿಲ್ಲೆ ಮಾಗಡಿ ತಾಲೂಕಿಗೆ ಸೇರಿದರೆ ವಿಧಾನಸಭಾ ಚುನಾವಣೆಗೆ ನೆಲಮಂಗಲ ಹಾಗೂ ಲೋಕಸಭಾ ಚುನಾವಣೆಗೆ ಬೆಂಗಳೂರು ಗ್ರಾಮಾಂತರಕ್ಕೆ ಸೇರಿತ್ತು, ನೆಲಮಂಗಲಕ್ಕೆ ಸೇರುವ ಬಯಕೆ ಇದ್ದರೂ ಕಳೆದ 47 ವರ್ಷಗಳಿಂದ ಚುನಾವಣೆಗಳ ಪ್ರಣಾಳಿಕೆಯ ವಸ್ತುವಾಗಿತ್ತು ಎಂದುಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗರೆಡ್ಡಿ ಹೇಳಿದರು. ಆದರೆ ಶಾಸಕ ಎನ್.ಶ್ರೀನಿವಾಸ್ ಚುನಾವಣೆಯಲ್ಲಿ ಕೊಟ್ಟ ಭರವಸೆಯಂತೆ 3 ವರ್ಷದಲ್ಲಿ ಸೋಲೂರನ್ನು ನೆಲಮಂಗಲಕ್ಕೆ ಸೇರ್ಪಡೆ ಮಾಡಿರುವುದು ಉತ್ತಮ ಬೆಳವಣಿಗೆ, ನೆಲಮಂಗಲ ನಗರ, ದಾಬಸ್ ಪೇಟೆ ಬಸ್ ನಿಲ್ದಾಣವನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಇದೇ ವೇಳೆ ಭರವಸೆ ನೀಡಿದರು. .
ಡಿಜಟಲೀಕರಣಕ್ಕೆ ಒತ್ತು:
ಜಿಲ್ಲಾಧಿಕಾರಿ ಡಾ.ಕೆ.ಅನುರಾಧಾ ಮಾತನಾಡಿ, ಸೋಲೂರು ಹೋಬಳಿಯ ಎಲ್ಲ ಮತಗಟ್ಟೆಗಳು, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಒಳಪಡುತ್ತಿದ್ದುವು, ಸುಮಾರು 37 ಸಾವಿರದಿಂದ 42 ಸಾವಿರ ಜನಸಂಖ್ಯೆ, 6 ಪಂಚಾಯತಿ, ಜತೆಗೆ 15 ಸಾವಿರ ರೈತರಿದ್ದಾರೆ. ಭೂಮಿ ದಾಖಲಾತಿಗಳೆಲ್ಲಾ ಇನ್ನೊಂದು ವಾರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಸಿಗುತ್ತದೆ, ಡಿಜಟಲೀಕರಣಕ್ಕೆ ಒತ್ತು ನೀಡಿದ್ದೇವೆ ಎಂದರು.
ಕಡತಗಳ ಹಸ್ತಾಂತರ:
ಸಚಿವ ರಾಮಲಿಂಗರೆಡ್ಡಿ, ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ಶಾಸಕ ಎನ್.ಶ್ರೀನಿವಾಸ್ ಅಧಿಕಾರಿಗಳಿಗೆ, ಸೋಲೂರು ಹೋಬಳಿಯ ಡಿಜಟಲೀಕೃತ ಭೂ ದಾಖಲೆ ಮತ್ತು ಕಡತ ದಾಖಲಾತಿಗಳನ್ನು ಹಸ್ತಾಂತರ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net