ಸುಪಾರಿ ಕೊಟ್ಟು ಜಿಮ್​ ಟ್ರೈನರ್​ ಹತ್ಯೆ?

ಜಿಮ್​ ಟ್ರೈನರ್​ ವಿಜಯ್​
ಜಿಮ್​ ಟ್ರೈನರ್​ ವಿಜಯ್​
Published on

ಪ್ರಮುಖ ಮುಖ್ಯಾಂಶಗಳು

  • ಸುಪಾರಿ ಕೊಟ್ಟು ಜಿಮ್​ ಟ್ರೈನರ್​ ಹತ್ಯೆ?
ಸುಪಾರಿ ಕೊಟ್ಟು ಜಿಮ್​ ಟ್ರೈನರ್​ ಹತ್ಯೆ?
ಆನೇಕಲ್​: ಜಿಮ್​ ಟ್ರೈನರ್​ ವಿಜಯ್​ ಕೊಲೆ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​ಸಿಕ್ಕಿದ್ದು, ಉದ್ಯಮಿ ಮಗಳ ಜತೆಗಿನ ವಿಜಯ್​ ಪ್ರೀತಿ ಸುಪಾರಿ ಕೊಟ್ಟು ಕೊಲೆ ಮಾಡಲು ಕಾರಣವಾಯಿತು ಎನ್ನಲಾಗುತ್ತಿದೆ.
ಕೋಲಾರ ಜಿಲ್ಲೆ ಮುಳಬಾಗಿಲಿನ ಜಿಮ್​ ಟೆನರ್​ ವಿಜಯ್​ ಕೊಲೆ ಕೇಸ್​ ಬೆಳಕಿಗೆ ಬಂದು ಹತ್ತು ದಿನಗಳಾಗಿದ್ದು, ಸದ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಆರಂಭದಲ್ಲಿ ಅಪರಿಚಿತ ಶವ ಪತ್ತೆ ಬಳಿಕ ಜಿಮ್​ ಟೆನರ್​ ವಿಜಯ್​ ಶವ ಎಂಬುದು ಗೊತ್ತಾಗುತ್ತಿದ್ದಂತೆ ಸುಪಾರಿ ಸುಳಿವು ಸಿಕ್ಕಿ ಹೈ ಪ್ರೊಫೈಲ್​ ಪ್ರಕರಣವಾಗಿ ಬದಲಾಗಿತ್ತು. ಪ್ರಕರಣ ಸಂಬಂಧ ಬನ್ನೇರುಟ್ಟ ಪೊಲೀಸರು ಆನೇಕಲ್​ ಮೂಲದ ಶ್ರೀರಾಮ್​, ಸುಮಿತ್​, ವೆಂಕಟೇಶಯ್ಯ ಮತ್ತು ಬಾಬು ಎಂಬುವವರನ್ನು ಬಂಧನ ಮಾಡುತ್ತಿದ್ದಂತೆ ಇಡೀ ಪ್ರಕರಣ ಬೇರೆಯದೇ ತಿರುವು ಪಡೆದುಕೊಂಡಿದೆ.
ವಿಜಯ್​ ಕೊಲೆ ಹಿಂದೆ ಆತನ ಪ್ರೇಯಸಿ ತಂದೆ ಉದ್ಯಮಿ ಕಾಮಿನೇನಿ ಪ್ರಸಾದ್​ ಕೈವಾಡ ಇದೆ. ಅವರು ಕೋಟಿ ಕೋಟಿ ಸುಪಾರಿ ನೀಡಿ ಕೊಲೆ ಮಾಡಿಸಿದ್ದಾರೆ ಎಂದು ಮೃತ ವಿಜಯ್​ ಕುಟುಂಬದವರು ಗಂಭೀರ ಆರೋಪ ಮಾಡಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಶ್ರೀರಾಮ್​ ಸುಪಾಯಿ ಬಗ್ಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ಆನೇಕಲ್​ ವಕೀಲನ ಮೂಲಕ ಅವರ ಕಚೇರಿಯಲ್ಲಿಯೇ ಕಾಮಿನೇನಿ ಪ್ರಸಾದ್​ ಪರಿಚಯವಾಗಿದ್ದು, ಕೊಲೆ ಬಗ್ಗೆ ಮಾತುಕತೆ ನಡೆಸಿದ್ದರ ಬಗ್ಗೆಯೂ ಒಪ್ಪಿಕೊಂಡಿದ್ದಾನೆ ಎಂಬ ಮಾತಿ ಲಭ್ಯವಾಗಿದೆ.
ಜಿಮ್​ನಲ್ಲೇ ಲವ್ವಿಡವ್ವಿ: ಕೆಲ ವರ್ಷಗಳ ಹಿಂದೆ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ ಮೃತ ವಿಜಯ್​ ಕೆ.ಆರ್​.ಪುರಂನಲ್ಲಿ ಜಿಮ್​ ಟೆನರ್​ ಆಗಿ ಕೆಲಸ ಮಾಡಿಕೊಂಡಿದ್ದ.ಏಳು ವರ್ಷಗಳ ಹಿಂದೆ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ವಿಜಯ್​ ಜಿಮ್​ ಟ್ರೈನಿಂಗ್​ಗೆ ಬಂದ ಉದ್ಯಮಿ ಮಗಳ ಜೊತೆ ಲವ್ವಿಡವ್ವಿ ಶುರುವಿಟ್ಟುಕೊಂಡಿದ್ದ. ವಿಷಯ ತಿಳಿದ ಆತನ ಪತ್ನಿ ವಿಜಯ್​ನನ್ನು ಬಿಟ್ಟು ಮಕ್ಕಳೊಂದಿಗೆ ತವರು ಮನೆ ಸೇರಿಕೊಂಡಿದ್ದಳು. ಇತ್ತ ವಿಜಯ್​ ಕೋಟಿ ಒಡತಿ ಪ್ರೇಯಸಿ ಜತೆ ಪರಾರಿಯಾಗಿದ್ದನು. ಮಗಳ ಪ್ರೇಮ ವಿಚಾರ ತಿಳಿದ ಉದ್ಯಮಿ ಕಾಮಿನೇನಿ ಪ್ರಸಾದ್​ ಕೆಆರ್​ ಪುರಂ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಜೋಡಿಯನ್ನು ಪತ್ತೆ ಹಚ್ಚಿದ್ದರು. ಅಂದು ವಿಜಯ್​ಗೆ ವಾರ್ನಿಂಗ್​ಮಾಡಿದ್ದ ಉದ್ಯಮಿ ಕಾಮಿನೇನಿ ಪ್ರಸಾದ್​ ಹುಡುಗರನ್ನು ಬಿಟ್ಟು ಹಲ್ಲೆ ಕೂಡ ಮಾಡಿಸಿದ್ದರು ಎಂದು ತಿಳಿದುಬಂದಿದೆ. ಇಷ್ಟಾದರೂ ವಿಜಯ್​ ಹಾಗೂ ಉದ್ಯಮಿ ಪುತ್ರಿ ಸಂಬಂಧ ಮುಂದುವರಿಸಿದ್ದರು ಎನ್ನಲಾಗಿದೆ.
ಈ ನಡುವೆ ಹತ್ತು ದಿನದ ಹಿಂದೆ ಬನ್ನೇರುಟ್ಟ ಠಾಣೆ ವ್ಯಾಪ್ತಿಯ ಕಾಳೇಶ್ವರಿ ಗ್ರಾಮದ ರ್ನಿಜನ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರಿಗೆ ಕಾಲ್​ ಡಿಟೇಲ್ಸ್​, ಸಿಡಿಆರ್​, ಲೊಕೇಷನ್​ ಟವರ್​ ಡಂಪ್​ ಸೇರಿ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಆನೇಕಲ್​ ಮೂಲದ ನಾಲ್ವರನ್ನು ಬಂಧಿಸಿದ್ದರು.
ಮಾಹಿತಿ ನೀಡಲು ನಿರಾಕರಣೆ: ಹೈಪ್ರೊಫೈಲ್​ ಮರ್ಡರ್​ ಕೇಸ್​ ಸಂಬಂಧ ಪೊಲೀಸರು ಯಾವುದೇ ಮಾಹಿತಿ ನೀಡುತ್ತಿಲ್ಲ. ಕೇಂದ್ರ ವಲಯ ಐಜಿಪಿ ಗಿರೀಶ್​ ಬನ್ನೇರುಟ್ಟ ಠಾಣೆಗೆ ಭೇಟಿ ನೀಡಿ ವಿಜಯ್​ ಕೊಲೆ ಕೇಸ್​ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಆನೇಕಲ್​ ವಕೀಲನ ಮೂಲಕ ಉದ್ಯಮಿ ಕಾಮಿನೇನಿ ಪ್ರಸಾದ್​ ಆರೋಪಿಗಳಿಗೆ ಸುಪಾರಿ ಕೊಟ್ಟಿರುವ ಬಗ್ಗೆ ಮಾಹಿತಿ ನೀಡಲು ಕೇಂದ್ರ ವಲಯ ಐಜಿಪಿ ಗಿರೀಶ್​ ನಿರಾಕರಿಸಿದ್ದಾರೆ.
ಪ್ರಾಮಾಣಿಕ ತನಿಖೆಗೆ ಆಗ್ರಹ: ಉದ್ಯಮಿ ಕಾಮಿನೇನಿ ಪ್ರಸಾದ್​ಗೆ ಐಪಿಎಸ್​ ಅಧಿಕಾರಿಗಳ ನಂಟು ಇದೆ. ಹಾಗಾಗಿ ಪೊಲೀಸರು ಯಾವುದೇ ಅಮಿಷಕ್ಕೆ ಒಳಗಾಗದೆ ಪ್ರಾಮಾಣಿಕವಾಗಿ ತನಿಖೆ ನಡೆಸಿ ವಿಜಯ್​ ಸಾವಿಗೆ ನ್ಯಾಯ ಕೊಡಿಸಬೇಕೆಂದುವಿಜಯ್​ನ ಪಾಲಕರು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net