31ರವರೆಗೆ ಬೆಳಗ್ಗೆ 6ಕ್ಕೆ ನ್ಯಾಯಬೆಲೆ ಅಂಗಡಿಗಳು ಓಪನ್

govt order
govt order
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಪ್ರಸಕ್ತ ಸಾಲಿನಲ್ಲಿ ಜುಲೈ ಅಂತ್ಯದೊಳಗೆ ಪಡಿತರ ಚೀಟಿದಾರರಿಗೆ ಪಡಿತರ ಅಕ್ಕಿ, ಧಾನ್ಯ ವಿತರಿಸಿ ವಿತರಣಾ ಪ್ರಕ್ರಿಯೆ ಮುಕ್ತಾಯಗೊಳಿಸಬೇಕಿರುವುದರಿಂದ ಜಿಲ್ಲೆಯ ಎಲ್ಲ ನ್ಯಾಯಬೆಲೆ ಅಂಗಡಿಗಳು ಜು.31 ರವರೆಗೆ ಪ್ರತಿ ದಿನ ಕಡ್ಡಾಯವಾಗಿ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ತೆರೆದು ಪಡಿತರ ವಿತರಣೆ ಮಾಡಲು ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸೂಚಿಸಿದೆ.
ನ್ಯಾಯಬೆಲೆ ಅಂಗಡಿಗಳು ಇಲಾಖೆ ಸೂಚನೆಯಂತೆ ಕಾರ್ಯ ನಿರ್ವಹಣಾ ಅವಧಿಯನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಯಾವುದೇ ದೂರುಗಳಿಗೆ ಆಸ್ಪದ ನೀಡದಂತೆ ಅರ್ಹ ಪಡಿತರ ಚೀಟಿದಾರರಿಗೆ ಪಡಿತರ ಆಹಾರ ಧಾನ್ಯವನ್ನು ಸಂಪೂರ್ಣವಾಗಿ ಹಾಗೂ ಕಡ್ಡಾಯವಾಗಿ ವಿತರಿಸುವುದನ್ನು ಖಚಿತ ಪಡಿಸಿಕೊಳ್ಳುವಂತೆ ತಮ್ಮ ವ್ಯಾಪ್ತಿಯ ಆಹಾರ ಶಿರಸ್ತೆದಾರರು ಹಾಗೂ ಆಹಾರ ನಿರೀಕ್ಷಕರಿಗೆ ಸೂಚಿಸಲಾಗಿದೆ.
ದೂರುಗಳಿದ್ದರೆ ಕರೆ ಮಾಡಿ:
ನ್ಯಾಯಬೆಲೆ ಅಂಗಡಿಗಳು ಸಮಯ ಪಾಲಿಸದೇ, ಪಡಿತರ ಪಡೆಯದೇ ಇರುವವವರು ತಾಲೂಕಿನ ಆಹಾರ ಶಾಖೆಯ ಆಹಾರ ಶಿರಸ್ತೇದಾರ್ ಹಾಗೂ ಆಹಾರ ನಿರೀಕ್ಷಕರನ್ನು ಹಾಗೂ ದೂರವಾಣಿ ಸಂಖ್ಯೆ: ದೇವನಹಳ್ಳಿ-9449269001, ದೊಡ್ಡಬಳ್ಳಾಪುರ-9980126359, ನೆಲಮಂಗಲ-9036434552, ಹೊಸಕೋಟೆ-9844029644 ಸಂಪರ್ಕಿಸಬಹುದು ಎಂದು ಇಲಾಖೆ ತಿಳಿಸಿದೆ. ಪಡಿತರ ವಿತರಣೆಯಲ್ಲಿ ಯಾವುದೇ ಲೋಪದೋಷಗಳು ಕಂಡುಬಂದಲ್ಲಿ ಅಗತ್ಯ ವಸ್ತುಗಳ ಕಾಯ್ದೆ 1955 ಹಾಗೂ ಕರ್ನಾಟಕ ಅಗತ್ಯ ವಸ್ತುಗಳ ನಿಯಂತ್ರಣ ಆದೇಶ-2016ರಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಸಾರ್ವಜನಿಕರು ಪಡಿತರ ವಿತರಣೆ ವ್ಯವಸ್ಥೆಯು ಸುಗಮವಾಗಿ ನಡೆಯಲು ಸಹಕರಿಸುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ್ಲ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net