ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 970 ಹೆಕ್ಟೇರ್ ಪ್ರದೇಶದಲ್ಲಿ ರೈತರು ತೊಗರಿ ಬೆಳೆದಿದ್ದರು. ಈ ಬಾರಿ 838 ಹೆಕ್ಟೇರ್ ಪ್ರದೇಶದಲ್ಲಷ್ಟೇ ಬೆಳೆಯಲಾಗಿದ್ದರೂ ಗುಣಮಟ್ಟದ ಸಲು ಕಂಡಿರುವುದು ರೈತಾಪಿ ಜನರಲ್ಲಿ ಸಂತಸ ಮೂಡಿಸಿದೆ. ಚಳಿಗಾಲದ ಸಮೃದ್ಧ ಬೆಳೆಯಾಗಿರುವ ತೊಗರಿಕಾಯಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಯಾಗಿ ಉತ್ತಮ ಬೆಲೆ ಬಂದಿದೆ, ಗುಣಮಟ್ಟದ ತೊಗರಿಕಾಯಿ ಖರೀದಿಗೆ ಗ್ರಾಹಕರು ಮುಗಿಬೀಳುತ್ತಿದ್ದಾರೆ. ಡಿಸೆಂಬರ್ ಮೊದಲ ವಾರದಿಂದಲೇ ಮಾರುಕಟ್ಟೆಗೆ ಲಗ್ಗೆ ಇಟ್ಟ ತೊಗರಿ ವ್ಯಾಪಾರಿಗಳ ಜೇಬು ಭರ್ತಿ ಮಾಡಿತ್ತು. ಗುಣಮಟ್ಟದ ತೊಗರಿಯ ಖಾದ್ಯಗಳನ್ನು ಸವಿದ ಗ್ರಾಹಕರು ಖುಷಿಪಡುವಂತಾಯಿತು.