ಪ್ರತಿ ವರ್ಷದಂತೆ ಈ ವರ್ಷವೂ ಸ್ವಾಮಿಯ ಬ್ರಹ್ಮರಥೋತ್ಸವವನ್ನು ಆಚರಿಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಫೆ.26 ರಿಂದ ಮಾ. 4ವರೆಗೆ ನಿರಂತರವಾಗಿ ಕಾರ್ಯಕ್ರಮಗಳು ಇದ್ದು, ಪ್ರತಿದಿನ ನಾಟಕ ಭಜನೆ ನಡೆಯುತ್ತದೆ. ಸರ್ಕಾರಿ ಕಾಲೇಜು ಮೈದಾನದಲ್ಲಿ 25 ಸಾವಿರ ಜನಕ್ಕೆ ಆಸನದ ವ್ಯವಸ್ಥೆ ಹಾಗೂ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲು ಪೂರ್ವ ಸಿದ್ಧತೆ ನಡೆಸಲಾಗಿದೆ ಎಂದು ಶ್ರೀ ಶನಿಮಹಾತ್ಮ ದೇವಾಲಯ ಧರ್ಮದರ್ಶಿ ಕೆ.ವಿ. ಪ್ರಕಾಶ್ ತಿಳಿಸಿದರು. ಬ್ರಹ್ಮರಥೋತ್ಸವ ದಿನ ಯಾವುದೇ ರೀತಿ ಭಕ್ತರಿಗೆ ಕೊರತೆಯಾಗದಂತೆ ವಿಶೇಷ ಪೂಜೆ ದರ್ಶನ ಬ್ರಹ್ಮರಥೋತ್ಸವಕ್ಕೆ ಪಾಲ್ಗೊಳ್ಳಲು ಸೂಕ್ತ ವ್ಯವಸ್ಥೆ ಕಲ್ಪಿಸಲು ತಯಾರಿ ಮಾಡಲಾಗಿದೆ ಎಂದರು. ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ ಮಾತನಾಡಿ, ರಾಜ್ಯದಲ್ಲಿ ಅತಿ ಹೆಚ್ಚು ಭಕ್ತರನ್ನು ಹೊಂದಿರುವ ದೇವಾಲಯ ಎಂಬ ಕೀರ್ತಿಗೆ ಪಾತ್ರರಾಗಿರುವ ಕನಸವಾಡಿಯ ಶ್ರೀ ಶನೇಶ್ವರ ಸ್ವಾಮಿಗೆ ತಾಲೂಕಿನ ಎಲ್ಲ ಭಕ್ತರು ಸಹಕಾರ ನೀಡಿದ್ದರಿಂದ ಬ್ರಹ್ಮರಥೋತ್ಸವಕ್ಕೆ ಹೆಚ್ಚಿನ ಜನ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.