ನಿಷ್ಠಾವಂತ ಕಾರ್ಯಕರ್ತರಿಗೆ ಜಿಬಿಎ ಟಿಕೇಟ್: ಮನ್ಸೂರ್ ಅಲಿಖಾನ್

 ಮಹದೇವಪುರ ಕ್ಷೇತ್ರದ ವರ್ತೂರು ಬ್ಲಾಕ್ ನ ವರ್ತೂರು ವಾರ್ಡ್ ವ್ಯಾಪ್ತಿಯ ಮಾಜಿ ಗ್ರಾಮಪಂಚಾಯತಿ ಸದಸ್ಯರು ಹಾಗು ಹಿರಿಯ ಕಾಂಗ್ರೆಸ್  ಮುಖಂಡರನ್ನು  ಸನ್ಮಾನನ್ನು  ಎಐಸಿಸಿ ಕಾರ್ಯದರ್ಶಿ ಮನ್ಸೂರ್ ಅಲಿಖಾನ್ ಹಾಗೂ ಮಾಜಿ ಸಚಿವ ಹೆಚ್.ನಾಗೇಶ್ ಸನ್ಮಾನಿಸಿದರು.
ಮಹದೇವಪುರ ಕ್ಷೇತ್ರದ ವರ್ತೂರು ಬ್ಲಾಕ್ ನ ವರ್ತೂರು ವಾರ್ಡ್ ವ್ಯಾಪ್ತಿಯ ಮಾಜಿ ಗ್ರಾಮಪಂಚಾಯತಿ ಸದಸ್ಯರು ಹಾಗು ಹಿರಿಯ ಕಾಂಗ್ರೆಸ್ ಮುಖಂಡರನ್ನು ಸನ್ಮಾನನ್ನು ಎಐಸಿಸಿ ಕಾರ್ಯದರ್ಶಿ ಮನ್ಸೂರ್ ಅಲಿಖಾನ್ ಹಾಗೂ ಮಾಜಿ ಸಚಿವ ಹೆಚ್.ನಾಗೇಶ್ ಸನ್ಮಾನಿಸಿದರು.
Published on
ಮಹದೇವಪುರ: ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ ನಿಷ್ಠಾವಂತ ನಾಯಕರಿಗೆ ಮುಂಬರುವ ಜಿಬಿಎ ಚುನಾವಣೆಯಲ್ಲಿ ಟಿಕೇಟ್ ನೀಡುವಂತೆ ಶಿಫಾರಸು ಮಾಡುವುದಾಗಿ ಎಐಸಿಸಿ ಕಾರ್ಯದರ್ಶಿ ಮನ್ಸೂರ್ ಅಲಿಖಾನ್ ತಿಳಿಸಿದರು.
ಮಹದೇವಪುರ ಕ್ಷೇತ್ರದ ವರ್ತೂರು ಬ್ಲಾಕ್‌ನ ವರ್ತೂರು ವಾರ್ಡ್ ವ್ಯಾಪ್ತಿಯ ಮಾಜಿ ಗ್ರಾಮ ಪಂಚಾಯತಿ ಸದಸ್ಯರು ಹಾಗು ಹಿರಿಯ ಕಾಂಗ್ರೆಸ್ ಮುಖಂಡರಿಗಾಗಿ ಹಮ್ಮಿಕೊಂಡಿದ್ದ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಮಣೆ ಹಾಕುತ್ತಿದ್ದು, ಮುಂಬರುವ ಜಿಬಿಎ ಚುನಾವಣೆಯಲ್ಲಿ ಬೂತ್ ಮಟ್ಟದಲ್ಲಿ ಕೆಲಸ ಮಾಡುವ ಮುಖಂಡರಿಗೆ ಜಿಬಿಎ ಟಿಕೇಟ್ ನೀಡುವಂತೆ ಶಿಫಾರಸ್ಸು ಮಾಡುವುದಾಗಿ ತಿಳಿಸಿದರು. ಇದೇ ವೇಳೆ ಮತದಾನ ಪಟ್ಟಿಯಿಂದ ನಕಲಿ ಮಾತದಾರರನ್ನು ಗುರುತಿಸಿ ತೆಗೆಯುವಂತ ಕೆಲಸ ಮಾಡಬೇಕೆಂದು ಹೇಳಿದರು.
ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ಕುಪ್ಪಿ ಮಂಜುನಾಥ್ ಮಾತನಾಡಿ, ವರ್ತೂರು ವಾರ್ಡ್ ಕಾಂಗ್ರೆಸ್ ಪಕ್ಷದ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಿದ್ದು ಪಕ್ಷಕ್ಕಾಗಿ 40-50 ವರ್ಷಗಳಿಂದ ದುಡಿದ ಹಿರಿಯರಿಗೆ ಸನ್ಮಾನಿಸಿ ಗೌರವಿಸಿರುವುದಾಗಿ ತಿಳಿಸಿದರು. ಪಕ್ಷವನ್ನು ಎಲ್ಲಾ ನಾಯಕರು ಒಗ್ಗಟ್ಟಿನಿಂದ ಕಟ್ಟಿ ಮುಂದಿನ ಜಿಬಿಎ ಚುನಾವಣೆಯಲ್ಲಿ ವರ್ತೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಪಣ ತೊಟ್ಟಿದ್ದೇವೆ ಎಂದರು.
ಈ ವೇಳೆ ಸುಮಾರು ನೂರಕ್ಕೂ ಅಧಿಕ ಹಿರಿಯ ಮುಖಂಡರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಮಾಜಿ ಸಚಿವ ಹೆಚ್.ನಾಗೇಶ್, ಪೂರ್ವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಿ. ಕೆ. ಮೋಹನ್ ಬಾಬು, ವರ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀನಿವಾಸ್ ರೆಡ್ಡಿ, ಮಾಜಿ ವರ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿಟಿಬಿ ಬಾಬು, ಮಹದೇವಪುರ ಜಿಬಿಎ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ವರ್ತೂರು ವಿ. ಸುರೇಶ್, ಹಿರಿಯ ಮುಖಂಡ ಹಾಗೂ ಸಮಾಜ ಸೇವಕ ಸುಬ್ಬಣ್ಣ, ಎಂಸಿಸಿ ರವಿ, ವಕ್ತಾರ ಬಿ.ವಿ.ಸುನೀಲ್ ಕುಮಾರ್, ವಾಡ್9 ಅಧ್ಯಕ್ಷರಾದ ಮುನಿರಾಜು, ದೀಪಕ್, ನಾಗರಾಜಯ್ಯ ಸೇರಿದಂತೆ ಮುಖಂಡರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net