ಪೌರ ಕಾರ್ಮಿಕರ ಶ್ರಮದಿಂದ ಗಾರ್ಡ್‌ನ್ ಸಿಟಿ ಹೆಸರು ಇಂದಿಗೂ ಜೀವಂತ: ಶಾಸಕ ಸೋಮಶೇಖರ್

ಯಶವಂತಪುರ ವಿಧಾನಸಭಾ ಕ್ಷೇತ್ರದ ಹೇರೋಹಳ್ಳಿಯ ಭಾರತ್ ನಗರದಲ್ಲಿ ಹಮ್ಮಿಕೊಂಡಿದ್ದ  ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ವಿತರಣಾ ಸಮಾರಂಭ
ಯಶವಂತಪುರ ವಿಧಾನಸಭಾ ಕ್ಷೇತ್ರದ ಹೇರೋಹಳ್ಳಿಯ ಭಾರತ್ ನಗರದಲ್ಲಿ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ವಿತರಣಾ ಸಮಾರಂಭ
Published on

ಯಶವಂತಪುರ: ಬೆಂಗಳೂರು ನಗರದ ಸ್ವಚ್ಛತೆ ಮತ್ತು ಹಿರಿಮೆ ಹೆಚ್ಚಾಗಲು ಪೌರ ಕಾರ್ಮಿಕರ ಕಾರ್ಯ ಶ್ಲಾಘನೀಯ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದರು.

ಯಶವಂತಪುರ ವಿಧಾನಸಭಾ ಕ್ಷೇತ್ರದ ಹೇರೋಹಳ್ಳಿಯ ಭಾರತ್ ನಗರದಲ್ಲಿ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ವಿತರಣಾ ಸಮಾರಂಭದಲ್ಲಿ ದೊಡ್ಡ ಬಿದರಕಲ್ಲು, ಹೇರೋಹಳ್ಳಿ , ಉಲ್ಲಾಳ್,ಕೆಂಗೇರಿ, ಹೆಮ್ಮೀಗೆಪುರ ವಾರ್ಡ್‌ಗಳ 134ಪೌರ ಕಾರ್ಮಿಕರಿಗೆ ಆದೇಶ ಪತ್ರ ವಿತರಿಸಿ ಮಾತನಾಡಿದರು.
ಪೌರ ಕಾರ್ಮಿಕರು ಬೆಂಗಳೂರು ನಗರದ ಸ್ವಚ್ಛತೆಯನ್ನು ಕಾಪಾಡಿ ನಗರದ ಹಿರಿಮೆಯನ್ನು ಹೆಚ್ಚಿಸಲು ಪೌರ ಕಾರ್ಮಿಕರ ಪಾತ್ರ ಬಹಳಷ್ಟಿದೆ, ಯಶವಂತಪುರ ಕ್ಷೇತ್ರದಲ್ಲಿ ಒಟ್ಟು 547 ಪೌರಕಾರ್ಮಿಕರಲ್ಲಿ ಈಗಾಗಲೇ 413 ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ನೀಡಲಾಗಿದೆ, ಬಾಕಿ ಉಳಿದಿರುವ 47 ಪೌರ ಕಾರ್ಮಿಕರಿಗೆ ಮುಂದಿನ ದಿನಗಳಲ್ಲಿ ನೇಮಕಾತಿ ಆದೇಶ ಪತ್ರ ನೀಡಲಾಗುವುದು ಎಂದು ಭರವಸೆ ನೀಡಿದರು.
ಹೇರೋಹಳ್ಳಿ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸುಮಾ ಜನಾರ್ದನ್ ಮಾತನಾಡಿ ಪೌರಕಾರ್ಮಿಕರು ಬೆಂಗಳೂರು ನಗರದಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸದಿದ್ದರೆ ಗಾರ್ಡನ್ ಸಿಟಿ ಬದಲು ಗಾರ್ಬೇಕಜ್ ಸಿಟಿ ಆಗಬೇಕಾಗಿತ್ತು, ಪೌರ ಕಾರ್ಮಿಕರ ಶ್ರಮದಿಂದ ಗಾರ್ಡನ್ ಸಿಟಿಯಾಗಿ ಬೇರೆ ನಗರಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.
26 ಮಂದಿ ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ವಿತರಿಸಲಾಯಿತು.
ಗ್ಯಾರೆಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸುಮಾ ಜನಾರ್ದನ್, ಜಿಬಿಎ ಸಂಭಾವ್ಯ ಅಭ್ಯರ್ಥಿ ಆರ್.ಪ್ರಸಾದ್ ಕುಮಾರ್, ಕೆಂಗೇರಿ ಬ್ಲಾಕ್ ಅಧ್ಯಕ್ಷ ಮೈಲಸಂದ್ರ ನಾಗರಾಜ್, ಘನತ್ಯಾಜ್ಯ ಘಟಕ ಎಇಇ ಸಿದ್ದರಾಜೇಗೌಡ, ಹಿರಿಯ ಆರೋಗ್ಯ ಪರಿವೀಕ್ಷಕ ರಾದ ಹನುಮಂತರಾಜು, ರಮೇಶ್, ಕಿರಿಯ ಆರೋಗ್ಯ ಪರಿವೀಕ್ಷಕರಾದ ವಿನಯ್, ಅನಿಲ್ ಕುಮಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net