ಕಳೆದೊಂದು ವಾರದಿಂದ ಇಂಥ ಸುದ್ದಿಗಳು ಹರಿದಾಡುತ್ತಿದ್ದು, ಅರಣ್ಯ ಇಲಾಖೆ ಕಟ್ಟೆಚ್ಚರ ವಹಿಸುವಂತಾಗಿದೆ. ರಾಜ್ಯದಲ್ಲಿ ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ವಾಣಿಜ್ಯ ಬಳಕೆಗೆ ಸೌದೆಗಳನ್ನು ಬಳಸುವ ಸಂಖ್ಯೆ ಹೆಚ್ಚುತ್ತಿದ್ದು ಇದು ನೇರವಾಗಿ ಅರಣ್ಯಗಳಲ್ಲಿನ ಮರಗಳಿಗೆ ಕೊಡಲಿ ಪೆಟ್ಟು ಬೀಳುವ ಅನುಮಾನ ಮೂಡಿಸಿದೆ. ವುಧ್ಯಪ್ರಾಚ್ಯ ದೇಶಗಳ ಯುದ್ದ ಪರಿಣಾಮದಿಂದ ಅಡುಗೆ ಅನಿಲದ ಅಭಾವ ತಲೆದೂರಿದೆ. ಹೋಟೆಲ್, ರೆಸಾರ್ಟ್ ಹೋಂಸ್ಟೇ, ಆಹಾರ ಉದ್ಯಮಗಳಿಗೆ ವಾಣಿಜ್ಯ ಸಿಲಿಂಡರ್ ಪೂರೈಕೆ ಆಗುತ್ತಿಲ್ಲ. ಇದರಿಂದ ಸೌದೆ ಒಲೆಗಳ ಬಳಕೆಗೆ ಮುಂದಾಗಿದ್ದಾರೆ. ಪರಿಣಾಮವಾಗಿ ಸೌದೆಗಳ ಬಳಕೆ ಹೆಚ್ಚಾಗುತ್ತಿದ್ದು, ಅರಣ್ಯ ಪ್ರದೇಶದಲ್ಲಿ ಮರಗಳಿಗೂ ಕೊಡಲಿ ಪೆಟ್ಟು ಬೀಳುವ ಸಾಧ್ಯತೆಯಿದೆ ಎಂದು ಅರಣ್ಯ ಇಲಾಖೆ ಅಂದಾಜಿಸಿದೆ. ಈಗಾಗಲೇ ಸೌದೆಗಳ ದರವೂ ನಿಧಾನವಾಗಿ ಏರಿಕೆ ಕಾಣುತ್ತಿದ್ದು, ಅಕ್ರಮವಾಗಿ ಮರಗಳನ್ನು ಕಡಿದು ಮಾರುವ ಸಾಧ್ಯತೆಯೂ ಹೆಚ್ಚಾಗಿದೆ.