ಬೆಂಕಿಗೆ ರಸ್ತೆಬದಿ ಮರಗಿಡಗಳು ಆಹುತಿ

fire
fire
Published on
ನಂದಗುಡಿ,ಎಂ,ರಾಮೇಗೌಡ
ಹೊಸಕೋಟೆ ತಾಲೂಕಿನ ರಾಜ್ಯ ಹೆದ್ದಾರಿ (ನಂದಗುಡಿಯಿಂದ ಹೊಸಕೋಟೆ ಹಾದುಹೋಗುವ ರಸ್ತೆ) ಬದಿಯಲ್ಲಿನ ಮರಗಡಿಗಳು ಬೆಂಕಿಗೆ ಆಹುತಿಯಾಗುತ್ತಿದ್ದು. ಖಾಸಗಿ ಕಂಪನಿಗಳ ವಿಸ್ತರಣೆಗಾಗಿ ಬೆಂಕಿ ಹಚ್ಚುವ ಕೃತ್ಯ ನಡೆಯುತ್ತಿದೆ ಎಂಬ ಅರೋಪ ವ್ಯಕ್ತವಾಗಿದೆ.
ಈ ಭಾಗದಲ್ಲಿ ಹಲವು ವೇರ್ ಹೌಸ್ ಖಾಸಗಿ ಕಂಪನಿಗಳು ಪ್ರಾರಂಭವಾಗಿವೆ, ಶಿವನಾಪುರ, ಚೊಕ್ಕಹಳ್ಳಿ . ಕಂಬಳಿಪುರ ಮೂರು ಪಂಚಾಯತಿ ವ್ಯಾಪ್ತಿಗೆ ಇವುಗಳು ಸೇರುತ್ತವೆ ಕಂಪನಿಗಳ ಮುಂಭಾಗದಲ್ಲಿ ರಸ್ತೆಯ ಪಕ್ಕದಲ್ಲಿ ಮರ ಗಿಡಗಳಿಗೆ ಬೆಂಕಿಹಚ್ಚಲಾಗುತ್ತಿದೆ, ರಸ್ತೆ ಬದಿಯ ಮರಗಿಡಗಳನ್ನು ನಾಶಪಡಿಸಿ ಕಂಪನಿಗಳು ಒತ್ತುವರಿ ಮಾಡಲು ಹುನ್ನಾರ ನಡೆಸಿವೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ನೆರಳು ಮಾಯ:
ಒಂದು ಮರ ಬೆಳೆಸಲು 8 ರಿಂದ 10 ವರ್ಷ ಕಾಯಬೇಕು. ಒಂದು ಮರ ಕಡಿದರೆ ಬೇರೆ ಜಾಗದಲ್ಲಿ 10 ಗಿಡಗಳನ್ನು ನೆಡುವುದರ ಮೂಲಕ ಪರಿಸರ ಸಮತೋಲನ ಕಾಪಾಡಬೇಕು ಎಂಬ ನಿಯಮವಿದೆ. ಸರ್ಕಾರ ಗಿಡ ನೆಡಿ, ಪರಿಸರ ಉಳಿಸಿ ಎಂದು ಪ್ರಚಾರ ಮಾಡುತ್ತದೆ. ಇನ್ನೊಂದೆಡೆ ಗಿರ-ಮರಗಳನ್ನು ಪರೋಕ್ಷವಾಗಿ ಕಡಿಸುತ್ತಿದೆ. ಹೆದ್ದಾರಿ ಪಕ್ಕದ ಖಾಸಗಿ ಕಂಪನಿ ವಿಸ್ತರಣೆ ಸಲುವಾಗಿ ಬೆಂಕಿ ಹಚ್ಚಿ ನಾಶಪಡಿಸುತ್ತಿದ್ದು ರಸ್ತೆ ಬದಿಯಲ್ಲಿ ನೆರಳು ಮಾಯವಾಗುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿಯಿಂದ ಹೆಚ್ಚಿನ ಹಾನಿಯಾಗಿರುವುದು ಪರಿಸರಕ್ಕೆ. ರಸ್ತೆ ಅಗಲಗೊಳಿಸುವುದಕ್ಕೆ ಎರಡೂ ಬದಿ ಇರುವ ಮರಗಳನ್ನು ನಿರ್ದಾಕ್ಷಿಣ್ಯವಾಗಿ ಕಡಿದು ಹಾಕಿರುವುದರಿಂದ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ದೂರ ಪ್ರಯಾಣ ಮರುಭೂಮಿಯಲ್ಲಿ ಸಾಗಿದ ಅನುಭವ ನೀಡುತ್ತದೆ ಎಂದು ಸಾರ್ವಜನಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ.
ರಸ್ತೆ ವಿಸ್ತರಣೆಯ ಯಾವುದೇ ಯೋಜನೆ ಮರಗಳನ್ನು ಉಳಿಸಿಕೊಳ್ಳುವುದಕ್ಕೆ ಆದ್ಯತೆ ನೀಡಬೇಕು. ಕಡಿಯುವುದು ಸುಲಭ, ಬೆಳೆಸುವುದು ಕಷ್ಟ ಎಂಬ ಪ್ರಾಥಮಿಕ ಸಂಗತಿ ಸರ್ಕಾರಕ್ಕೆ ಇರಬೇಕು. ತುರ್ತಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ವೇರ್ ಹೌಸ್ ಕಂಪನಿಗಳ ಮೇಲೆ ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕು.
ನಾರಾಯಣಪ್ಪ, ಚೊಕ್ಕಹಳ್ಳಿ ನಿವಾಸಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net