ಜನರಲ್ಲಿ ಜಾಗೃತಿ ಮೂಡಿಸಲು ಕಲ್ಪಿತ ಪ್ರದರ್ಶನ

fictional show
fictional show
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಆಕಸ್ಮಿಕವಾಗಿ ಸಂಭವಿಸುವ ವಿಪತ್ತುಗಳನ್ನು ಸಮರ್ಥವಾಗಿ ಎದುರಿಸಲು, ವಿಕೋಪಗಳಿಂದ ಆಗುವಂತಹ ಅನಾಹುತಗಳನ್ನು ತಪ್ಪಿಸಲು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಕಲ್ಪಿತ ಪ್ರದರ್ಶನ ಕಾರ್ಯಕ್ರಮಗಳನ್ನು ಕಾಲಕಾಲಕ್ಕೆ ಏರ್ಪಡಿಸಲಾಗುತ್ತದೆ ಎಂದು ಕಾರ್ಖಾನೆಗಳ ಉಪನಿರ್ದೇಶಕ ತಿಪ್ಪೇಸ್ವಾಮಿ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ಜಿಂದಾಲ್ ಅಲ್ಯುಮಿನಿಯಂ ಲಿಮಿಟೆಡ್ ಹಾಗೂ ಗ್ಯೇಲ್ ಗ್ಯಾಸ್ ಲಿಮಿಟೆಡ್ ಸಹಯೋಗದೊಂದಿಗೆ ದೇವನಹಳ್ಳಿಯ ಜಿಲ್ಲಾಡಳಿತಭವನದಲ್ಲಿ ಮಂಗಳಾರ ಹಮ್ಮಿಕೊಂಡಿದ್ದ ಕಲ್ಪಿತ ಪ್ರದರ್ಶನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ ಅಲ್ಲದೆ ಕಾರ್ಖಾನೆಗಳಲ್ಲಿ ಸಿಬ್ಬಂದಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕಲ್ಪಿತ ಪ್ರದರ್ಶನ ಹಮ್ಮಿಕೊಳ್ಳಲಾಗುತ್ತದೆ ಎಂದು ವಿವರಿಸಿದರು.
21ರಂದು ಆಯೋಜನೆ:
ರಾಸಾಯನಿಕ ಸೋರಿಕೆ ದುರಂತಗಳನ್ನು ತಡೆಗಟ್ಟುವುದು ಹಾಗೂ ವಿಪತ್ತು ಸಂಭವಿಸಿದಾಗ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಸಂಬಂಧ ಫೆ.21 ರಂದು ನೆಲಮಂಗಲ ತಾಲೂಕು ವ್ಯಾಪ್ತಿಯ ದಾಬಸ್‌ಪೇಟೆಯ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿರುವ ಜಿಂದಾಲ್ ಅಲ್ಯೂಮಿನಿಯಂ ಲಿಮಿಟೆಡ್ ಕಾರ್ಖಾನೆಯಲ್ಲಿ ’ರಾಸಾಯನಿಕ ಸೋರಿಕೆ ಕಲ್ಪಿತ ಪ್ರದರ್ಶನ’ ಆಯೋಜಿಸಲಾಗಿದೆ ಎಂದು ತಿಳಿಸಿದರು. ನೆಲಮಂಗಲ ತಾಲೂಕಿನ ದಾಬಸ್‌ಪೇಟೆಯಲ್ಲಿ ಅತಿ ದೊಡ್ಡ ಕೈಗಾರಿಕಾ ವಲಯಗಳಿರುವುದರಿಂದ ಈ ಕಾರ್ಯಕ್ರಮ ಹೆಚ್ಚು ಉಪಯೋಗವಾಗಲಿದೆ ಎಂಬ ದೃಷ್ಟಿಯಲ್ಲಿ ಆಯೋಜನೆ ಮಾಡಲಾಗಿದೆ ಎಂದು ಉಪನಿರ್ದೇಶಕರು ತಿಳಿಸಿದರು.
ಅಧಿಕಾರಿಗಳಿಗೆ ತರಬೇತಿ:
ಕಲ್ಪಿತ ಪ್ರದರ್ಶನ ಆಯೋಜಿಸುವ ಸಂಬಂಧ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲ್ಪಿತ ಪ್ರದರ್ಶನದ ನಡೆಸಲು ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತು ಅಧಿಕಾರಿಗಳಿಗೆ ತರಬೇತಿ ನೀಡಲಾಯಿತು ಮತ್ತು ಟೇಬಲ್ ಟ್ಾ ಎಕ್ಸರ್ಸೈಜ್ ಸಭೆ ಆಯೋಜಿಸಲಾಯಿತು. ಸಭೆಯಲ್ಲಿ ಅಣುಕು ಪ್ರದರ್ಶನಕ್ಕೆ ತುರ್ತು ಆರೋಗ್ಯ ಸೇವೆಗಳು ಹೇಗಿರಬೇಕು, ಅಗ್ನಿ ಶಾಮಕದಳದ ಕಾರ್ಯವೇನು ವಿಪತ್ತು ಸಂದರ್ಭದಲ್ಲಿ ವಾಹನದಟ್ಟಣೆ ಅಥವಾ ಜನದಟ್ಟಣೆ ನಿಯಂತ್ರಣ ಹೇಗೆ ಸಂವಹನ, ಸಾರಿಗೆ ವ್ಯವಸ್ಥೆ ಜನ-ಜಾನುವಾರುಗಳ ಸ್ಥಳಾಂತರದ ಬಗ್ಗೆ ವಿವರಣೆ ನೀಡಲಾಯಿತು, ತುರ್ತು ಪರಿಸ್ಥಿತಿಯಲ್ಲಿ ಸಂತ್ರಸ್ತರ ಊಟೋಪಚಾರ, ಪುನರ್ವಸತಿ ಕೇಂದ್ರಗಳ ಸ್ಥಾಪನೆ ಸೇರಿ ಅಗತ್ಯ ಸಿದ್ಧತೆ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಈ ಕಲ್ಪಿತ ಪ್ರದರ್ಶನದಲ್ಲಿ ಸಂಬಂಧಪಟ್ಟ ಹಾಗೂ ನಿಯೋಜಿಸುವ ಪ್ರತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಕ್ರಿಯವಾಗಿ ಪಾಲ್ಗೊಳ್ಳಲು ತಿಳಿಸಲಾಯಿತು.
ಅಧಿಕಾರಿಗಳಿಗೆ ವಿವರಣೆ:
ಆಕಸ್ಮಿಕವಾಗಿ ವಿಪತ್ತುಗಳು ಸಂಭವಿಸುವುದು ಸಾಮಾನ್ಯ ಇಂಥ ಸಂದರ್ಭದಲ್ಲಿ ಇಂಥಹವುಗಳನ್ನು ಎದುರಿಸಲು ಸನ್ನದ್ಧವಾಗಿರಬೇಕು ಅಷ್ಟೇ ಸಮರ್ಥವಾಗಿ ಸಮರ್ಥವಾಗಿ ಎದುರಿಸಬೇಕು. ವಿಕೋಪಗಳಿಂದ ಆಗುವಂತಹ ಅನಾಹುತಗಳನ್ನು ತಪ್ಪಿಸುವುದು ಹೇಗೆ ಎಂಬ ಅರಿವಿರಬೇಕು ಎಂದು ಅಧಿಕಾರಿಗಳು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net