ನಗರಸಭೆ ವ್ಯಾಪ್ತಿಯ ಅರಿಶಿನಕುಂಟೆ, ಆದರ್ಶನಗರ, ಬಿನ್ನಮಂಗಲ ಬಸವಣಹಳ್ಳಿ, ವಿಶ್ವೇಶ್ವರಪುರ ವ್ಯಾಪ್ತಿಯ ಹಾಗೂ ನಗರದ ಪ್ರಮುಖ ಜನವಸತಿ ಬಡಾವಣೆಗಳಲ್ಲಿನ ಮನೆ ನಿರ್ಮಿಸಿಕೊಂಡಿರುವ ವಾಲೀಕರು ಮನೆಯ ಮುಂಭಾಗದ ರಸ್ತೆಗಳ ಅರ್ಧದಷ್ಟು ಜಾಗವನ್ನು ಒತ್ತುವರಿ ವಾಡಿಕೊಂಡಿದ್ದು ತಮ್ಮ ಕಾರುಗಳ ನಿಲುಗಡೆ ತಾಣವಾಗಿಸಿಕೊಂಡಿದ್ದಾರೆ. ಕೆಲವರು ಹೂವಿನ ಗಿಡಗಳನ್ನು ಬೆಳಸಿ ಕಾಪೌಂಡ್ ಹಾಕಿಕೊಂಡಿದ್ದಾರೆ. ಇನ್ನೂ ಕೆಲವರು ಜನವಸತಿ ಬಡಾವಣೆಯಲ್ಲಿನ ಅಗಲವಾದ ರಸ್ತೆಯಲ್ಲಿನ ನಿವೇಶನಗಳ ವಾಲೀಕರು ವಾಣಿಜ್ಯ ಮಳಿಗೆಗಳಿಗೆ ಬಾಡಿಗೆ ನೀಡಿದ್ದು ಅಂಗಡಿ ವಾಲೀಕರು ರಸ್ತೆಯ ಜಾಗದಲ್ಲಿ ತರಕಾರಿ, ದಿನಸಿ ವಾರಾಟ ವಾಡುತ್ತಿದ್ದರೂ ನಗರಸಭೆ ಅಧಿಕಾರಿಗಳ ಕಂಡರೂ ಕಾಣದಂತೆ ವರ್ತಿಸುತ್ತಿದ್ದಾರೆ.