ವಿಶೇಷ ಜಾಬ್ ಕಾರ್ಡ್ ಅಭಿಯಾನದಲ್ಲಿ ರಜಮೀನಿನಲ್ಲಿ ಮಳೆ ನೀರು ಸಂರಣೆಗಾಗಿ ಪ್ರತಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 10 ಫಲಾನುಭವಿಗಳಿಗೆ ಕೃಷಿ ಹೊಂಡ, ತೆರೆದ ಬಾವಿ, ಕೊಳವೆ ಬಾವಿ ಮರುಪೂರಣ ಟಕ ನಿರ್ಮಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 5 ಫಲಾನುಭವಿಗಳಿಗೆ ಜಾನುವಾರು ಶೆಡ್ ನಿರ್ಮಿಸಿಕೊಳ್ಳಲು ಆದ್ಯತೆ ನೀಡುವುದು. ಸಾಂಪ್ರದಾಯಿಕ ಜಲಮೂಲಗಳು, ನಾಲಾಗಳಲ್ಲಿ ತಡೆಗೋಡೆಗಳ ನಿರ್ಮಾಣ, ಕಡಿಮೆ ಇಳುವರಿ ಇರುವ ಕುಡಿಯುವ ನೀರಿನ ಕೊಳವೆ ಬಾವಿಗಳ ಸುತ್ತ ಮರುಪೂರಣ ಟಕ ನಿರ್ಮಾಣ ಕಾಮಗಾರಿಗಳಿಗೆ ಆದ್ಯತೆ ನೀಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.