ಅಧಿಸೂಚನೆಯಂತೆ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ನಿಯಮಗಳು, 1996 ರ ನಿಯಮ 8 ರ ಪ್ರಕಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಾದ ದೊಡ್ಡಬಳ್ಳಾಪುರ ನಗರಸಭೆ, ನೆಲಮಂಗಲ ನರಸಭೆ, ವಿಜಯಪುರ ಪುರಸಭೆ ಮತ್ತು ಬಾಶೆಟ್ಟಹಳ್ಳಿ ಪಟ್ಟಣ ಪಂಚಾಯಿತಿಯಿಂದ ಖಾಲಿ ಇರುವ 10 ಸ್ಥಾನಗಳಿಗೆ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಸಲಾಗುತ್ತಿದೆ. ನಗರ ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರದ ಸದಸ್ಯರು ೆ.17 ರವರೆಗಿನ ಯಾವುದೇ ದಿನದಂದು (ಸಾರ್ವತ್ರಿಕ ರಜಾ ದಿನವನ್ನು ಹೊರತುಪಡಿಸಿ) ಕಚೆೇರಿ ಸಮಯದಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ ಚುನಾವಣೆಯ ಸಂಬಂಧಪಟ್ಟ ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಪಡೆಯಬಹುದು.